ಮಾಲೂರು: ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ಪದೇ ಪದೇ ಸಂವಿಧಾನ ಬದಲಾವಣೆ ಹೇಳಿಕೆಗಳು ಕೇಳಿ ಬರುತ್ತಿದ್ದು. ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಂವಿಧಾನ ಉಳಿವಿಗಾಗಿ ಜೀವಿಕ (ರಿ) ಹಾಗೂ ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆಯ ಜೀವಿಕ ಮಹಿಳಾ ಸ್ವಸಹಾಯ ಸಂಘಗಳ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡುತ್ತಿರುವುದಾಗಿ ಜಿಲ್ಲಾ ಸಂಚಾಲಕರಾದ ಜೀವಿಕ ಡಾ.ರಾಮಚಂದ್ರಪ್ಪ ಅವರು ಹೇಳಿದರು.

ತಾಲ್ಲೂಕಿನ ಹೆಚ್ ಹೊಸಕೋಟೆ, ಜಯಮಂಗಲ, ಲಕ್ಕೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳ ಸುಮಾರು 27 ಜೀವಿಕ ಮಹಿಳಾ ಸ್ವ ಸಹಾಯ ಸಂಘಗಳ ಜೊತೆಗೆ ಸಭೆ ನಡೆಸಿ ಮಾತನಾಡಿದ ಅವರು ಕಳೆದ ಹತ್ತು ವರ್ಷಗಳ ಬಿಜೆಪಿ ಆಡಳಿತದಲ್ಲಿ ದೇಶದ ಬಡಜನರಿಗೆ ಕೇಂದ್ರ ಬಿಜೆಪಿ ಸರ್ಕಾರ ಯಾವ ಯಾವ ರೀತಿ ಸಂಕಷ್ಟಕ್ಕೆ ಸಿಲುಕಿಸಿದೆ. ಹಾಗೂ ದೇಶದಲ್ಲಿ ನಮ್ಮ ರಕ್ಷಣೆಗೆ ಇರುವ ಸಂವಿಧಾನವನ್ನು ಪದೇ ಪದೇ ಬದಲಾವಣೆ ಮಾಡಲು ಮಾಡುತ್ತಿರುವ ಉನ್ನಾರವನ್ನು ಅವರಿಗೆ ತಿಳಿಸಿ ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಸಾಂವಿಧಾನ ಉಳಿವಿಗಾಗಿ ನಾವೆಲ್ಲರೂ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಿ ಕೋಲಾರ ಮೀಸಲು ಕ್ಷೇತ್ರದ ಅಭ್ಯರ್ಥಿ ಕೆವಿ ಗೌತಮ್ ಅವರನ್ನು ಗೆಲ್ಲಿಸಬೇಕು ಎಂದು ಕೋರಿದ್ದು ಮಹಿಳಾ ಸಂಘಗಳ ಸಂಪೂರ್ಣ ಬೆಂಬಲವನ್ನು ಕಾಂಗ್ರೆಸ್ ಪಕ್ಷಕ್ಕೆ ನೀಡಲಾಗುತ್ತಿದೆ ಎಂದರು.

ಈ ಸಂದರ್ಭದಲ್ಲಿ ಜೀವಿಕ ಗ್ರಾಮೀಣಾಭಿವೃದ್ಧಿ ಸಂಸ್ಥೆ ಅಧ್ಯಕ್ಷ ಮಧು ಚಂದ್ರ, ಜೀವಿಕ (ರಿ) ತಾಲ್ಲೂಕು ಸಂಚಾಲಕ ಪುರ ಮುನಿರಾಜು, ಮಹಿಳಾ ಸಂಚಾಲಕಿ ಇಂಧು, ವೆಂಕಟೇಶ್, ಅಕ್ಬರ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *