ಮಾಲೂರು: ಕನ್ನಡನಾಡಿನ ಹೆಮ್ಮೆಯ ಭರತನಾಟ್ಯ ಕಲಾವಿದೆ, ಕಲಾಸೇವಾ, ಅನಿಕೇತನ, ಕನ್ನಡ ವೈಭವ ಹಾಗೂ ರಾಣಿ ಚೆನ್ನಮ್ಮ ಸದ್ಬಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ರವರ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ” ಇವರ ವತಿಯಿಂದ ಭರತನಾಟ್ಯ ವೈಭವ (ನೃತ್ಯೋತ್ಸವ), ಭರತನಾಟ್ಯ ನೃತ್ಯಗಾರ್ತಿಯರಿಗೆ ನಾಟ್ಯ ವೈಭವ ಪ್ರಶಸ್ತಿ ಸಮರ್ಪಣೆ, ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಹಾಗೂ ದ್ವೀತಿಯ ಪಿ.ಯು.ಸಿ ಯಲ್ಲಿ ಅಧಿಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ಸಾಧಕ / ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ದಕ್ಷಿಣ ಭಾರತದ ಜನಪ್ರಿಯ ಶಾಸ್ತ್ರೀಯ ನೃತ್ಯ ಪ್ರಕಾರ ಭರತನಾಟ್ಯ , ಈ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಶ್ವೇತಾಂಜಲಿ ಭರತನಾಟ್ಯ ಶಾಲೆಗೆ ಶುಭವಾಗಲಿ : ಚಂದನ ವಾಹಿನಿಯ ಡಾ.ನಾ‌.ಸೋಮೇಶ್ವರ.

ಮಾಲೂರು: ಕನ್ನಡನಾಡಿನ ಹೆಮ್ಮೆಯ ಭರತನಾಟ್ಯ ಕಲಾವಿದೆ, ಕಲಾಸೇವಾ, ಅನಿಕೇತನ, ಕನ್ನಡ ವೈಭವ ಹಾಗೂ ರಾಣಿ ಚೆನ್ನಮ್ಮ ಸದ್ಬಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ರವರ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ” ಇವರ ವತಿಯಿಂದ ಭರತನಾಟ್ಯ ವೈಭವ (ನೃತ್ಯೋತ್ಸವ), ಭರತನಾಟ್ಯ ನೃತ್ಯಗಾರ್ತಿಯರಿಗೆ ನಾಟ್ಯ ವೈಭವ ಪ್ರಶಸ್ತಿ ಸಮರ್ಪಣೆ, ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಹಾಗೂ ದ್ವೀತಿಯ ಪಿ.ಯು.ಸಿ ಯಲ್ಲಿ ಅಧಿಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ಸಾಧಕ / ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಜಾನಪದ ವಿದ್ವಾಂಸರು, ಕ.ಸಾ.ಪ ನಿಕಟಪೂರ್ವ ರಾಜ್ಯ ಅಧ್ಯಕ್ಷರು, ಚಿಂತಕರು, ಸಾಹಿತಿಗಳಾದ ಡಾ.ಆರ್.ಕೆ.ನಲ್ಲೂರು ಪ್ರಸಾದ್ ರವರು ನಾಟ್ಯಕ್ಷೇತ್ರದ ದಿಗ್ಗಜ ನಾಯಕ ನಟರಾಜನಿಗೆ ಪುಷ್ಪನಮನ ಸಲ್ಲಿಸಿ ಮಾತನಾಡುತ್ತಾ “ಚಿನ್ನದ ಜಿಲ್ಲೆ ಕೋಲಾರದ ಮಾಲೂರಿನಲ್ಲಿ ಸರಿ ಸುಮಾರು 25 ವರ್ಷಗಳ ಚಾರಿತ್ರಿಕ ಇತಿಹಾಸ ಹೊಂದಿರುವ ಶ್ವೇತಾಂಜಲಿ ಭರತನಾಟ್ಯ ಶಾಲೆ ಸಾವಿರಾರು ಮಕ್ಕಳನ್ನು ನಮ್ಮ ಭಾರತೀಯ ಸಂಸ್ಕ್ರತಿಯ ಸಂರಕ್ಷಣೆಯ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ , ಪುಟ್ಟ ಕಂದಮ್ಮಗಳ ಅದ್ಬುತ ನೃತ್ಯ ಪ್ರದರ್ಶನ ಮನಸೆಳೆಯುವಂತೆ ಇತ್ತು, ಈ ಶಾಲೆ ರಾಷ್ಟ್ರ ಮಟ್ಟದಲ್ಲಿ ಉತ್ತುಂಗಕ್ಕೆ ಬೆಳೆಯಲಿ” ಎಂದು ಶುಭ ಹಾರೈಸಿದರು‌‌

ಕಾರ್ಯಕ್ರಮಕ್ಕೆ ವಿಶೇಷ ಆಹ್ವಾನಿತರಾಗಿ ಆಗಮಿಸಿದ್ದ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯ ಅಧ್ಯಕ್ಷರಾದ ಹೆಚ್‌.ಶಿವರಾಮೇಗೌಡ ರವರು ಮಾತನಾಡುತ್ತಾ ” ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಾಂಸ್ಕೃತಿಕ ಸೇವೆ ನಿತ್ಯ ನಿರಂತರವಾದದ್ದು, ಶ್ರೀಮತಿ ಶ್ವೇತನಾಗರಾಜ್ ರವರ ಸಾರಥ್ಯದಲ್ಲಿ ಗ್ರಾಮೀಣ ಪ್ರದೇಶದ ಮಕ್ಕಳ ಪ್ರತಿಭೆಯನ್ನು ಹೊರತಂದು ಈ ನಾಡಿಗೆ ಸಮರ್ಪಿಸುವ ಕಾರ್ಯ ಅಭಿನಂದನೀಯ. ಕನ್ನಡ ನಾಡು-ನುಡಿಯ ಅಭಿವೃದ್ದಿಗೆ ಸಾಹಿತ್ಯ, ಸಂಗೀತ, ಭರತನಾಟ್ಯ ಅವಶ್ಯಕವಾದದ್ದು” ಎಂದರು.

ನಾಟ್ಯ ವೈಭವ ಪ್ರಶಸ್ತಿ ಪ್ರದಾನ ಮಾಡಿದ ಚಂದನ ವಾಹಿನಿಯ ಥಟ್ ಅಂತಾ ಹೇಳಿ!!! ಕಾರ್ಯಕ್ರಮದ ರೂವಾರಿಗಳಾದ ಡಾ.ನಾ ಸೋಮೇಶ್ವರ ರವರು ಮಾತನಾಡುತ್ತಾ “ಭರತನಾಟ್ಯದ ಚಾರಿತ್ರಿಕ ಇತಿಹಾಸದ ಬಗ್ಗೆ ಪೋಷಕರಿಗೆ ಅರ್ಥಗರ್ಭೀತವಾಗಿ ವಿವರಿಸುತ್ತಾ,ಭರತನಾಟ್ಯವು ದಕ್ಷಿಣ ಭಾರತದ ಜನಪ್ರಿಯ ಶಾಸ್ತ್ರೀಯ ನೃತ್ಯ ಪ್ರಕಾರವಾಗಿದೆ. ಭರತನಾಟ್ಯ ಪ್ರದರ್ಶನವು ಕಣ್ಣಿನ ಚಲನೆಗಳು, ಅಭಿವ್ಯಕ್ತಿಗಳು, ಕೈ ಸನ್ನೆಗಳು, ಹೆಜ್ಜೆಗಳು, ಸಂಗೀತ ಮತ್ತು ನೃತ್ಯಗಳ ಸಮಾಗಮದಿಂದ ನೋಡುಗರಿಗೆ ವಿಭಿನ್ನ ಅನುಭವ ನೀಡುತ್ತದೆ, ಇದನ್ನು ಎಲ್ಲಾ ಮಕ್ಕಳಿಗೂ ” ಎಂದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕರ್ನಾಟಕ ವಿಕಾಸ ರಂಗದ ರಾಜ್ಯ ಅಧ್ಯಕ್ಷರಾದ ವ.ಚ.ಚನ್ನೇಗೌಡ ರವರು ಮಾತನಾಡುತ್ತಾ “ಇತ್ತಿಚೀನ ದಿನಮಾನಗಳಲ್ಲಿ ಮಕ್ಕಳು ಮೊಬೈಲ್ ಎಂಬ ಭೂತಕ್ಕೆ ಅಂಟಿಕೊಂಡಿರುವಾಗ, ಶ್ವೇತಾಂಜಲಿ ಭರತನಾಟ್ಯ ಶಾಲೆ ಮಕ್ಕಳಿಗೆ ನಿಜವಾದ ಸಾಂಸ್ಕರದ ಹಾದಿಯನ್ನು ತೋರಿಸುತ್ತಿರುವುದು ಬಹಳ ಗೌರವ” ಎಂದರು‌.

2024 ನೇ ಸಾಲಿನ ರಾಜ್ಯ ಮಟ್ಟದ ಕುವೆಂಪು ಅನಿಕೇತನ ರಾಜ್ಯ ಪ್ರಶಸ್ತಿಯನ್ನು ಮುಜರಾಯಿ ಇಲಾಖೆ ಹಿರಿಯ ಶ್ರೇಣಿಯ ಸಹಾಯಕ ಆಯುಕ್ತರಾದ ಪಿ.ದಿನೇಶ್ ರವರ ಪತ್ನಿ ಹಾಗೂ ಪುತ್ರರ ಜೊತೆಗೆ ಪ್ರಶಸ್ತಿಯನ್ನು ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಡಾ.ಟಿ.ಸೆಲ್ವಮಣಿ ರವರು ನೀಡಿ ಗೌರವಿಸಲಾಯಿತು.

ಕಾರ್ಯಕ್ರಮದ ವೇದಿಕೆಯಲ್ಲಿ ಕರ್ನಾಟಕ ವಿದ್ಯಾರ್ಥಿ ಕೂಟದ ಪ್ರದಾನ ಕಾರ್ಯದರ್ಶಿ ಹರ್ಷ ಲಕ್ಷಣ್ ಮಾತನಾಡಿದರು.

ಕಾರ್ಯಕ್ರಮದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆಗಳ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು.ಎಂ.ನಾಗರಾಜ್, ಹಿರಿಯ ಕಲಾವಿದರಾದ ಗಂಗಣ್ಣ, ಶ್ವೇತಾಂಜಲಿ ಭರತನಾಟ್ಯ ಶಾಲೆ ಮಾಲೂರು, ಲಕ್ಕೂರು, ಚಿಕ್ಕತಿರುಪತಿ ಹಾಗೂ ದುನ್ನಸಂದ್ರ ಕ್ರಾಸ್ ಮಕ್ಕಳು ನೃತ್ಯ ಮಾಡಿದರು ಹಾಗೇ ಪೋಷಕರು ಹಾಜರಿದ್ದರು‌.

Leave a Reply

Your email address will not be published. Required fields are marked *