ಮಾಲೂರು: ಕನ್ನಡನಾಡಿನ ಹೆಮ್ಮೆಯ ಭರತನಾಟ್ಯ ಕಲಾವಿದೆ, ಕಲಾಸೇವಾ, ಅನಿಕೇತನ, ಕನ್ನಡ ವೈಭವ ಹಾಗೂ ರಾಣಿ ಚೆನ್ನಮ್ಮ ಸದ್ಬಾವನಾ ರಾಜ್ಯ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ರವರ ಸಾರಥ್ಯದಲ್ಲಿನ “ಶ್ವೇತಾಂಜಲಿ ಭರತನಾಟ್ಯ ಶಾಲೆ” ಇವರ ವತಿಯಿಂದ ಭರತನಾಟ್ಯ ವೈಭವ (ನೃತ್ಯೋತ್ಸವ), ಭರತನಾಟ್ಯ ನೃತ್ಯಗಾರ್ತಿಯರಿಗೆ ನಾಟ್ಯ ವೈಭವ ಪ್ರಶಸ್ತಿ ಸಮರ್ಪಣೆ, ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪ್ರದಾನ ಹಾಗೂ ದ್ವೀತಿಯ ಪಿ.ಯು.ಸಿ ಯಲ್ಲಿ ಅಧಿಕ ಪಡೆದ ವಿದ್ಯಾರ್ಥಿಗಳಿಗೆ ಪ್ರತಿಭಾವಂತ ಸಾಧಕ / ಸಾಧಕಿ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಬೆಂಗಳೂರಿನ ಜೆ.ಸಿ ರಸ್ತೆಯಲ್ಲಿರುವ ನಯನ ಸಭಾಂಗಣದಲ್ಲಿ ಏರ್ಪಡಿಸಲಾಗಿತ್ತು.

ದಕ್ಷಿಣ ಭಾರತದ ಜನಪ್ರಿಯ ಶಾಸ್ತ್ರೀಯ ನೃತ್ಯ ಪ್ರಕಾರ ಭರತನಾಟ್ಯ , ಈ ಕಲಿಕೆಗೆ ಪ್ರೋತ್ಸಾಹ ನೀಡುತ್ತಿರುವ ಶ್ವೇತಾಂಜಲಿ ಭರತನಾಟ್ಯ ಶಾಲೆಗೆ ಶುಭವಾಗಲಿ : ಚಂದನ ವಾಹಿನಿಯ ಡಾ.ನಾ‌.ಸೋಮೇಶ್ವರ.…