ಹೊಸಕೋಟೆ ಪೊಲೀಸರ ಭರ್ಜರಿ ಬೇಟೆ,ಎಸ್ ಪಿ ಮಲ್ಲಿಕಾರ್ಜುನ ಬಾಲದಂಡಿ ರವರಿಂದ ಬಹುಮಾನ ಘೋಷಣೆ..!

ಹೊಸಕೋಟೆ .ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ ಮೊಬೈಲ್ ಕಳವು ಮನೆ ಕನ್ನ ಕಳವು ಹಾಗೂ ಸುಲಿಗೆ ಪ್ರಕರಣಗಳು ಸೇರಿದಂತೆ ಒಟ್ಟು ಐದು ಜನ ಆರೋಪಿಗಳನ್ನು ಬಂಧಿಸಿ ಪ್ರತ್ಯೇಕ ಏಳು ಪ್ರಕರಣಗಳನ್ನು ಪತ್ತೆ ಮಾಡಿ ಒಂದು ಕೋಟಿಗೂ ಅಧಿಕ ಮೌಲ್ಯದ 900 ಗ್ರಾಂ ಚಿನ್ನಾಭರಣಗಳು ಮತ್ತು 150 ವಿವಿಧ ಕಂಪನಿಗಳ ಸ್ಮಾರ್ಟ್ ಫೋನ್ ಗಳನ್ನು ವಸಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ. ಬೆಂಗಳೂರು ಜಿಲ್ಲಾ ಮಾನ್ಯ ಪೊಲೀಸ್ ಅಧೀಕ್ಷಕರಾದ ಶ್ರೀ. ಮಲ್ಲಿಕಾರ್ಜುನಬಾಲದಂಡಿ, TPS, ಮಾನ್ಯ ಅಪರ ಪೊಲೀಸ್ ಅಧೀಕ್ಷಕರಾದ ಶ್ರೀ.ಎಂ.ಎಲ್ ಮರುಷೋತ್ತಮ್, KSPS, ರವರು ಹಾಗು ಹೊಸಕೋಟೆ ಉಪ ವಿಭಾಗದ ಪೊಲೀಸ್‌ ಉಪಾಧೀಕ್ಷಕರಾದ ಶ್ರೀ. ಶಂಕರ್ ಗೌಡ ಅಣ್ಣಾಸಾಹೇಬ್ ಪಾಟೀಲ್, KSPS, ರವರುಗಳ ಮಾರ್ಗದರ್ಶನದಲ್ಲಿ ಹೊಸಕೋಟೆ ಪೊಲೀಸ್ ಇನ್ಸ್ಪೆಕ್ಟರ್ ಶ್ರೀ. ಬಿ.ಎಸ್. ಅಶೋಕ್ ರವರ ನೇತೃತ್ವದಲ್ಲಿ ಪಿ.ಎಸ್.ಐ ಮುನಿರಾಜು, ಮತ್ತು ಅಪರಾಧ ಸಿಬ್ಬಂದಿಯವರುಗಳಾದ ದತ್ತಾತ್ರೇಯ, ಪ್ರಕಾಶ್‌ ಬಾಬು, ರಮೇಶ್ ನಾಗರಾಜ, ವಿಠಲ್, ಜೊಯಲ್ ಜೊರಾಲ್ಡ್, ಗೋಪಾಲ್ , ಮತಿವಣ್ಣನ್, ಜಗನಾಥ, ಮಹಿಳಾ ಪಿಸಿ ಮುಬಾರಕ್ ರವರ ತಂಡ ಆರೋಪಿಗಳನ್ನು ಬಂದಿಸಿ ದಸ್ತಗಿರಿ ಕ್ರಮ ಜರುಗಿಸಿ ಪ್ರಕರಣಗಳನ್ನು ಪತ್ತೆ ಹಚ್ಚುವಲ್ಲಿ ಶ್ರಮಿಸಿರುತ್ತಾರೆ.ಈ ಕಾರ್ಯಚರಣೆಯನ್ನು ಬೆಂಗಳೂರು ಜಿಲ್ಲೆಯ ಪೊಲೀಸ್ ಅಧೀಕ್ಷಕರು ಶ್ಲಾಘಿಸಿದರು.

Leave a Reply

Your email address will not be published. Required fields are marked *