ಸಮಾಜದಲ್ಲಿ ಶೋಷಣೆ ಮತ್ತು ತುಳಿತವನ್ನು ಮೆಟ್ಟಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಪಡೆದು ನಿರಂತರ ಅಧ್ಯಯನ ಮಾಡಿ ಈ ದೇಶಕ್ಕೆ ಒಂದು ಉತ್ತಮ ಶ್ರೇಷ್ಟ ಸಂವಿಧಾನ ನೀಡಿದ್ದರಿಂದ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದ್ದು. ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.

ಸಮಾಜದಲ್ಲಿ ಶೋಷಣೆ ಮತ್ತು ತುಳಿತವನ್ನು ಮೆಟ್ಟಿ ಡಾ.ಬಿ.ಆರ್ ಅಂಬೇಡ್ಕರ್ ಅವರು ಶಿಕ್ಷಣವನ್ನು ಪಡೆದು ನಿರಂತರ ಅಧ್ಯಯನ ಮಾಡಿ ಈ ದೇಶಕ್ಕೆ ಒಂದು ಉತ್ತಮ ಶ್ರೇಷ್ಟ ಸಂವಿಧಾನ ನೀಡಿದ್ದರಿಂದ ದೇಶದಲ್ಲಿನ ಪ್ರತಿಯೊಬ್ಬ ಪ್ರಜೆಯು ನೆಮ್ಮದಿಯ ಜೀವನ ನಡೆಸಲು ಸಾಧ್ಯವಾಗಿದ್ದು. ಎಂದು ಕೋಲಾರ ಜಿಲ್ಲಾಧಿಕಾರಿ ಅಕ್ರಂ ಪಾಷ ಅವರು ತಿಳಿಸಿದರು.

ತಾಲ್ಲೂಕಿನ ಹೆಚ್ ಹೊಸಕೋಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹುಲಿಮಂಗಲ ಗ್ರಾಮದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ವತಿಯಿಂದ ಆಯೋಜಿಸಿದ್ದ “ನಮ್ಮ ದೇಶ-ನಮ್ಮ ಸಂವಿಧಾನ” ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ನಮ್ಮ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಅನೇಕ ಮಂದಿ ತುಳಿತಕ್ಕೆ ಒಳಗಾಗಿ ಸಮಾಜದಲ್ಲಿ ಶೋಷಣೆಯ ಅನಿಷ್ಟ ಪದ್ಧತಿಗಳಿಗೆ ಬಲಿಯಾಗಿದ್ದರೂ ಈ ವೇಳೆ ಇಂತಹ ಸಮುದಾಯದಿಂದ ಬಂದ ಡಾ. ಬಿ.ಆರ್ ಅಂಬೇಡ್ಕರ್ ಅವರು ಮೊದಲು ಇವೆಲ್ಲವನ್ನು ಮೆಟ್ಟಿ ನಿಂತು ಈ ಅನಿಷ್ಟ ಪದ್ಧತಿಗಳನ್ನು ಹೋಗಲಾಡಿಸಿ ಸಮಸಮಾಜ ನಿರ್ಮಿಸಿಸುವ ಕನಸುಕಂಡು ಶಿಕ್ಷಣ ಪಡೆದು ಹೆಚ್ಚು ಕಾನೂನಿಗೆ ಒತ್ತು ನೀಡಿ ನಮ್ಮ ಜನಕ್ಕೆ ಯಾವೆಲ್ಲ ಕಾನೂನು, ಹಕ್ಕುಗಳುಬೇಕೆಂದು ನಿರಂತರವಾಗಿ ಅಧ್ಯಯನ ಮಾಡಿ ಈ ದೇಶಕ್ಕೆ ಒಂದು ಶ್ರೇಷ್ಟ ಮಾದರಿ ಸಂವಿಧಾನ ನೀಡಿದರು ಇದರಿಂದಾಗಿ ಈ ದೇಶದ ಕಟ್ಟ ಕಡೆಯ ಪ್ರಜೆಯು ನೆಮ್ಮದಿಯ ಜೀವನ ನಡೆಸಲು ಅನುಕೂಲವಾಯಿತು. ಈ ಸಂವಿಧಾನದಿಂದಲೇ ದೇಶದಲ್ಲಿ ರಾಜರ ಆಳ್ವಿಕೆಯಿಂದ ಪ್ರಜೆಗಳ ಆಳ್ವಿಕೆ ಮಾಡಲು ಸಾಧ್ಯವಾಯಿತು. ಇಂದು ನಾವು ಎಲ್ಲಾ ರಂಗಗಳಲ್ಲೂ ಉನ್ನತ ಸ್ಥಾಗಳನ್ನು ಪಡೆಯಲು ಸಂವಿಧಾನ ಮತ್ತು ಡಾ.ಬಿಆರ್ ಅಂಬೇಡ್ಕರ್ ಅವರೇ ಕಾರಣ ಆದ್ದರಿಂದ ಮಕ್ಕಳು ಮೊದಲು ಕಡ್ಡಾಯವಾಗಿ ಉತ್ತಮವಾದ ಶಿಕ್ಷಣವನ್ನು ಪಡೆಯಬೇಕು. ಇನ್ನೂ ಇಂತಹ ಅರ್ಥಪೂರ್ಣ ಕಾರ್ಯಕ್ರಮಗಳು ಎಲ್ಲಾ ಕಡೆ ನಡೆಯಬೇಕು ಹಾಗೂ ಸರ್ಕಾರ ಈಗಾಗಲೇ ಎಲ್ಲಾ ಶಾಲೆಗಳಲ್ಲಿ ಸಂವಿಧಾನದ ಪ್ರಸ್ತಾವನೆ ಓದಲು ತಿಳಿಸಿದೆ. ಹಾಗೇ ಇಂದು ಕದಸಂಸ ಸಂಘಟನೆಯವರು ಕೆಲ ಮನವಿಗಳನ್ನು ತಿಳಿಸಿದ್ದು ಅವುಗಳನ್ನು ಮುಂದಿನ ದಿನಗಳಲ್ಲಿ ಕ್ರಮ ಕೈಗೊಳ್ಳಲಾಗುವುದು ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಸಂಯೋಜಕ ಸಂಘಟನೆ ರಾಜ್ಯಾಧ್ಯಕ್ಷ ಡಾ. ಅಶ್ವಥ್ ನಾರಾಯಣ ಅಂತ್ಯಜ, ಬೇಗ್ಲಿಹೊಸಹಳ್ಳಿ ರಾಮಚಂದ್ರೇಗೌಡ, ನಂಜುಂಡಪ್ಪ ಪಾಸ್ವಾನ್, ಮುಜೀರ್ ಅಹಮ್ಮದ್, ವಹೀದಾ ಬಾನು, ರೇಷ್ಮಾ ಬಾನು, ಶಬಾಧ್, ಕೆ ಮುನಿಕೃಷ್ಣಪ್ಪ, ಜಯಮಾಲ, ಹುಲಿಮಂಗಲ ಶಂಕರ್, ಅಂಬರೀಶ್, ನಾಗರಾಜ್, ಗಂಗಮ್ಮ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *