ರಾಜ್ಯ ಮಟ್ಟದ “ಕುವೆಂಪು ಅನಿಕೇತನ ಪ್ರಶಸ್ತಿಗೆ” ಆಯ್ಕೆಯಾದ ಸೆಲ್ವಮಣಿ.ಟಿ

ರಾಜ್ಯ ಮಟ್ಟದ “ಕುವೆಂಪು ಅನಿಕೇತನ ಪ್ರಶಸ್ತಿಗೆ” ಆಯ್ಕೆಯಾದ ಸೆಲ್ವಮಣಿ.ಟಿ

ಮಾಲೂರು: ಮೂರು ರಾಜ್ಯಗಳಲ್ಲಿ ಸದಾ ರಕ್ತದಾನ, ನೇತ್ರದಾನ, ಹಾಗೂ ಸಮಾಜಸೇವೆ ಎಂಬ ಮೂರು ತ್ರಿರತ್ನಗಳ ಹಾದಿಯಲ್ಲಿ ಸಾಗುತ್ತಿರುವ ರಾಷ್ಟ್ರಕವಿ, ಯುಗದ ಕವಿ, ವಿಶ್ವಮಾನವ ಕುವೆಂಪುರವರ ಆಶಯದ ಅಡಿಯಲ್ಲಿ ಸಾವಿರಾರು ಜನರಿಗೆ ರಕ್ತ ನೀಡಿ ಜೀವ ಉಳಿಸಿರುವ ವಿಶ್ವಮಾನವ ಕುವೆಂಪು ಫೌಂಡೇಶನ್ ವಿ.ಕೆ.ಎಫ್ 2023 ನೇ ಸಾಲಿನ “ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಗೆ” ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಜನಪ್ರಿಯ ಕಾರ್ಯನಿರ್ವಾಹಕ ಅಧಿಕಾರಿಗಳು, ಸಮಾಜಸೇವಕರು, ಹಾಗೂ ಪ್ರಬುದ್ದ ಚಿಂತಕರಾದ ಸೆಲ್ವಮಣಿ.ಟಿ ರವರನ್ನು ಆಯ್ಕೆ ಮಾಡಲಾಗಿದೆ.

ಮಾಲೂರಿನ ವಿಶ್ವಮಾನವ ಕುವೆಂಪು ಫೌಂಡೇಶನ್ ಕೇಂದ್ರ ಕಚೇರಿಯಲ್ಲಿ ಈ ಸಾಲಿನ ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಆಯ್ಕೆ ಬಗ್ಗೆ ಸರ್ವಸಮಿತಿಯ ಎಲ್ಲಾ ಸದಸ್ಯರ ಒಪ್ಪಿಗೆ ಮೇರೆಗೆ ಸೆಲ್ವಮಣಿ.ಟಿ ರವರನ್ನು ಆಯ್ಕೆ ಮಾಡಲಾಗಿದೆ.

ಈ ಬಗ್ಗೆ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್ ರವರು ಮಾತನಾಡುತ್ತಾ “ಕಳೆದ 22-24 ವರ್ಷಗಳಿಂದ ನಿರಂತರವಾಗಿ ಕನ್ನಡ ಸೇವೆ, ಸಮಾಜಸೇವೆ, ಧಾರ್ಮಿಕ ಸೇವೆಯಲ್ಲಿ ತೊಡಗಿಸಿಕೊಂಡಿರುವ ಇವರು ಕರ್ತವ್ಯ ನಿರ್ವಹಿಸುವ ದೇವಾಲಯಗಳ ಸಮಗ್ರ ಅಭಿವೃದ್ದಿಗಾಗಿ ಕೆಲಸ ಮಾಡುತ್ತಾ ಬರುತ್ತಿದ್ದಾರೆ. ಸಾವಿರಾರು ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಪ್ರಗತಿಗಾಗಿ ಸಹಾಯಹಸ್ತ ನೀಡಿ ಪ್ರೋತ್ಸಾಹಿಸುತ್ತಿರುವ ಸೆಲ್ವಮಣಿ.ಟಿ ರವರಿಗೆ ಈ ಪ್ರಶಸ್ತಿ ನೀಡಿ ಗೌರವಿಸಲು ಆಯ್ಕೆ ಮಾಡಲಾಗಿದೆ” ಎಂದರು.

ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷ ಲಕ್ಕೂರು ಎಂ.ನಾಗರಾಜ್ ಮಾತನಾಡಿ ” ಕರ್ನಾಟಕ ರಾಜ್ಯದಲ್ಲಿಯೇ ಪ್ರಸಿದ್ದಿ ಪಡೆದಿರುವ ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ವೆಂಕಟರಾಮಣ ಸ್ವಾಮಿ ದೇವಾಲಯದ ಸಮಗ್ರ ಅಭಿವೃದ್ದಿಗೆ ಸಾಕಷ್ಟು ಶ್ರಮಿಸುತ್ತಿರುವ, ಬಡಮಕ್ಕಳ ಶಿಕ್ಷಣಕ್ಕೆ ಸಹಕಾರದ ಜೊತೆಗೆ ಅವರ ಕುಟುಂಬಕ್ಕೆ ಆಸರೆಯಾಗಿರುವ ಸೆಲ್ವಮಣಿ.ಟಿ ರವರಿಗೆ ಈ ನಾಡಿನ ಮಹಾನ್ ಕವಿ ಕುವೆಂಪುರವರ ಆಶಯದಿಂದ ಸಾಗುತ್ತಿರುವ ವಿ.ಕೆ.ಎಫ್ “ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿಗೆ” ಆಯ್ಕೆ ಮಾಡಲಾಗಿದೆ. ಇವರಿಗೆ ಪ್ರಶಸ್ತಿಯನ್ನು ಸೆಪ್ಟೆಂಬರ್ ತಿಂಗಳಿನಲ್ಲಿ ಪ್ರಶಸ್ತಿ ಪತ್ರ, ನೆನಪಿನ ಕಾಣಿಕೆ, ನೀಡಿ ಗೌರವಿಸಲಾಗುವುದು” ಎಂದಿದ್ದಾರೆ.

ವಿಶ್ವಮಾನವ ಕುವೆಂಪು ಫೌಂಡೇಶನ್ ವಿ.ಕೆ.ಎಫ್ ನ ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಆಯ್ಕೆ ಸಮಿತಿಯಲ್ಲಿ ಎಲ್ಲಾ ಪದಾಧಿಕಾರಿಗಳು ಹಾಜರಿದ್ದರು.

Leave a Reply

Your email address will not be published. Required fields are marked *