ಮಾಲೂರು : ೭೭ ನೇ ಸ್ವಾತಂತ್ರ‍್ಯದಿನೋತ್ಸವ ಅಂಗವಾಗಿ ಪಟ್ಟಣದ ಹೋಂಡಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಜಿಲ್ಲೆಯಲ್ಲೇ ಅತಿ ಎತ್ತರದ ಧ್ವಜಸ್ಥಂಭದಲ್ಲಿ ಧ್ವಜಾರೋಹಣಾ ನೆರವೇರಿಸಲಿದ್ದೇವೆ ಎಂದು ಶಾಸಕ ಕೆ ವೈ ನಂಜೇಗೌಡ ಅವರು ಹೇಳಿದರು.

ಮಾಲೂರು : ೭೭ ನೇ ಸ್ವಾತಂತ್ರ‍್ಯದಿನೋತ್ಸವ ಅಂಗವಾಗಿ ಪಟ್ಟಣದ ಹೋಂಡಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಜಿಲ್ಲೆಯಲ್ಲೇ ಅತಿ ಎತ್ತರದ ಧ್ವಜಸ್ಥಂಭದಲ್ಲಿ ಧ್ವಜಾರೋಹಣಾ ನೆರವೇರಿಸಲಿದ್ದೇವೆ ಎಂದು ಶಾಸಕ ಕೆ ವೈ ನಂಜೇಗೌಡ ಅವರು ಹೇಳಿದರು.
ಪಟ್ಟಣದ ಹೋಂಡಾ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಎತ್ತರದ ಧ್ವಜಸ್ಥಂಭವನ್ನು ಮತ್ತು ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಪೈಂಟಿAಗ್ ಕಾಮಗಾರಿಗಳನ್ನು ವೀಕ್ಷಿಸಿ ಮಾತನಾಡಿದರು. ಕರ್ನಾಟಕ ರಾಜ್ಯದಲ್ಲಿ ಈ ಭಾರಿ ಕಾಂಗ್ರೆಸ್ ಸರ್ಕಾರ ಬಂದ ಮೇಲೆ ಇದು ಮೊದಲ ಸ್ವಾತಂತ್ರ‍್ಯ ದಿನಾಚರಣೆಯಾಗಿದ್ದು. ತಾಲ್ಲೂಕಿನಲ್ಲಿ ಸ್ವಾತಂತ್ರ‍್ಯ ದಿನೋತ್ಸವವನ್ನು ಬಹಳ ವಿಶೇಷವಾಗಿ ಆಚರಿಸಲು ಚರ್ಚಿಸಿದ್ದು. ಪಟ್ಟಣದ ಹೋಂಡಾ ಕ್ರೀಡಾಂಗಣವು ಕಳೆದ ಕಾಂಗ್ರೆಸ್ ಸರ್ಕಾರ ಅವಧಿಯಲ್ಲಿ ಹೋಂಡಾ ಕಂಪನಿಯವರು ತಮ್ಮ ಸಿಎಸ್‌ಆರ್ ಅನುದಾನದಲ್ಲಿ ನಿರ್ಮಿಸಿದ್ದರು ಕ್ರೀಡಾಂಗಣ ನಿರ್ವಹಣೆ ಸರಿಯಾಗಿಲ್ಲದ ಕಾರಣ ಈ ಭಾರಿ ಕ್ರೀಡಾಂಗಣವನ್ನು ನವೀಕರಿಸಿ ಬಣ್ಣ ಬಳಿದು, ಕ್ರೀಡಾಂಗಣದಲ್ಲಿ ನಮ್ಮ ಸ್ವಾತಂತ್ರ‍್ಯ ಹೋರಾಟಗಾರರ, ಸಾಹಿತಿಗಳ, ರಾಷ್ಟ್ರ ಮತ್ತು ರಾಜ್ಯ ಮಹನೀಯರ ಭಾವಚಿತ್ರಗಳನ್ನು ಬಿಡಿಸಲು ತೀರ್ಮಾನಿಸಿದ್ದು ಹಾಗೇ ವಿಶೇಷವಾಗಿ ಧ್ವಜಾ ರೋಹಣಾ ಮಾಡಲು ಸ್ಥಂಭ ನಿರ್ಮಿಸಲು ತಿಳಿಸಿದಾಗ ಸಲೀಂ ಅವರು ಕ್ರೀಡಾಂಗಣದಲ್ಲಿ ಸುಮಾರು ೬೫ ಅಡಿಗಳ ಎತ್ತರದ ಧ್ವಜಸ್ತಂಭ ನಿರ್ಮಿಸಿ ಸುಮಾರು ೨೦್ಠ೩೦ ಅಡಿಗಳ ಬೃಹದಾಕಾರದ ತ್ರಿವರ್ಣ ಧ್ವಜವನ್ನು ನಮಗೆ ನೀಡಿದ್ದು. ಈ ಭಾರಿ ಸ್ವಾತಂತ್ರ‍್ಯ ದಿನವನ್ನು ಬಹಳ ವಿಶೇಷವಾಗಿ ಆಚರಿಸುವ ಮೂಲಕ ತಾಲ್ಲೂಕಿನ ಜನತೆಗೆ ಈ ಕಾರ್ಯಕ್ರಮದಿಂದ ಬದಲಾವಣೆ ಕಾಣುತ್ತದೆ ಈಗಾಗಲೇ ಕಾಂಗ್ರೆಸ್ ಸರ್ಕಾರ ಸುಮಾರು ೨ ಸಾವಿರ ಕೋಟಿಯಲ್ಲಿ ದೇವನಹಳ್ಳಿ, ಹೆಚ್ ಕ್ರಾಸ್, ವಿಜಿಪುರ, ನರಸಪುರ, ಮಾಲೂರಿನಿಂದ ಹೊಸೂರು ಗಡಿ ಯವರೆಗೆ ಷಟ್ಪಥ ರಸ್ತೆಯಾಗಿದ್ದು. ಪಟ್ಟಣದ ಎಪಿಎಂಸಿ ಮಾರುಕಟ್ಟೆ ಇಂದ ರೈಲ್ವೇ ಸೇತುವೆ ಮಾಸ್ತಿ-ಹೊಸೂರು ಸರ್ಕಲ್ ವರೆಗೆ ಮೇಲ್ಸೇತುವೆ ಮಾಡಲು ಮುಖ್ಯಮಂತ್ರಿಗಳ ಹತ್ತಿರ ಚರ್ಚಿಸಿದ್ದು ಮುಂದಿನ ದಿನಗಳಲ್ಲಿ ತಾಲ್ಲೂಕಿಗೆ ಮತ್ತಷ್ಟು ಅವಕಾಶಗಳನ್ನು ಈ ಸರ್ಕಾರದಲ್ಲಿ ಪಡೆದುಕೊಂಡು ಅಭಿವೃದ್ಧಿ ಪಡಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ ರಮೇಶ್, ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿಜಯ ನರಸಿಂಹ,ಪುರಸಭೆ ಸದಸ್ಯ ರಾಜಪ್ಪ, ಇಮ್ತಿಯಾಸ್, ಹನುಮಂತ ರೆಡ್ಡಿ, ಪ್ರದೀಪ್ ರೆಡ್ಡಿ, ಬಾಳಿಗಾನಹಳ್ಳಿ ಶ್ರೀನಿವಾಸ್, ಕ್ಷೇತ್ರ ಶಿಕ್ಷಣಾಧಿಕಾರಿ ಚಂದ್ರಕಲಾ, ಕ್ಷೇತ್ರ ಸಮನ್ವಯ ಅಧಿಕಾರಿ ನಂಜುAಡ ಗೌಡ, ಸಲೀಂ, ಶಂಕರ್, ನದೀಮ್, ಹರೀಶ್, ಶಬ್ಬೀರ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *