ಮಾಲೂರು..ಹೈನುಗಾರಿಕೆಯು ಗ್ರಾಮೀಣ ಬದುಕಿಗೆ ದಾರಿದೀಪವಾಗಿದ್ದು ಉತ್ತಮ ಗುಣಮಟ್ಟದ ಹಾಲನ್ನ ಹಾಕುವ ಮೂಲಕ ಆರ್ಥಿಕ ಸ್ವಾವಲಂಬನೆ ಗಳಿಸುವುದರ ಜೊತೆಗೆ ಸಂಘದ ಏಳಿಗೆಯು ಸಾಧ್ಯ ಎಂದು ಶಾಸಕ ಹಾಗೂ ಕೋಚಿಮೂಲ್ ಅಧ್ಯಕ್ಷ ಕೆ.ವೈ‌ ನಂಜೇಗೌಡರು ಹೇಳಿದರು.

ಹೈನುಗಾರಿಕೆಯು ಗ್ರಾಮೀಣ ಬದುಕಿಗೆ ದಾರಿದೀಪವಾಗಿದ್ದು ಉತ್ತಮ ಗುಣಮಟ್ಟದ ಹಾಲನ್ನ ಹಾಕುವ ಮೂಲಕ ಆರ್ಥಿಕ ಸ್ವಾವಲಂಬನೆ ಗಳಿಸುವುದರ ಜೊತೆಗೆ ಸಂಘದ ಏಳಿಗೆಯು ಸಾಧ್ಯ ಎಂದು ಶಾಸಕ ಹಾಗೂ ಕೋಚಿಮೂಲ್ ಅಧ್ಯಕ್ಷ ಕೆ.ವೈ‌ ನಂಜೇಗೌಡರು ಹೇಳಿದರು.
ತಾಲ್ಲೂಕಿನ ಕೆಂಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ 2022-23ನೇ ಸಾಲಿನ ಸರ್ವ ಸದಸ್ಯರ ಸಾಮಾನ್ಯ ಸಭೆ ಹಾಗೂ ಮೊದಲ ಅಂತಸ್ತಿನ ಕಟ್ಟಡ ಉದ್ಘಾಟನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರುಹಾಲು ಉತ್ಪಾದಕರ ಸಹಕಾರ ಸಂಘವು ಕಡಿಮೆ ಅವಧಿಯಲ್ಲಿ ಹೆಚ್ಚು ಪ್ರಗತಿಯನ್ನು ಹೊಂದಿದ್ದು ಉತ್ತಮ ಗುಣಮಟ್ಟದ ಹಾಲನ್ನ ಪೊರೈಕೆ ಮಾಡಿ ಹೆಸರು ಗಳಿಸಿದೆ.ಒಂಬತ್ತು ವರ್ಷಗಳ ಹಿಂದೆ ಪ್ರಾರಂಭವಾದ ಸಂಘಕ್ಕೆ ಸ್ವಂತ ಕಟ್ಟಡವೂ ಇರಲಿಲ್ಲ ಆದರೆ ಈಗ ಎಲ್ಲಾ ಸೌಲಭ್ಯ ಪಡೆದು ಟಿಎಂಸಿ ಕೇಂದ್ರವಾಗಿ ಸುತ್ತಾ ಇರುವ ಹಳ್ಳಿಗಳಿಗೂ ಮಾದರಿಯಾಗಿದೆ. ಈ ಟಿಎಂಸಿ ಕೇಂದ್ರಕ್ಕೆ ವಿದ್ಯುತ್ ಉಳಿತಾಯಕ್ಕಾಗಿ ಸೋಲಾರ್ ಪ್ಲಾಂಟ್ ವ್ಯವಸ್ಥೆ ಕಲ್ಪಿಸಲಾಗುವುದು. ಹಾಲು ಉತ್ಪಾದಕರಿಗೆ ಇಡೀ ರಾಜ್ಯದಲ್ಲೇ ಅತಿಹೆಚ್ಚಿನ ಕಾರ್ಯ ಕ್ರಮಗಳನ್ನು ನೀಡಿರುವ ಹೆಮ್ಮೆ ನಮ್ಮ ಕೋಲಾರ ಒಕ್ಕೂಟ ಸೇರುತ್ತದೆ.ಒಕ್ಕೂಟದಿಂದ ನಾಲ್ಕು ಮಹತ್ವಯೋಜನೆಗಳಾದ ಎಂ.ವಿ.ಕೆ.ಗೋಲ್ಡನ್ ಡೈರಿ, ವಿದ್ಯುತ್ ಬಿಲ್ ಉಳಿತಾಯಕ್ಕಾಗಿ 50ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ, ಚಿಂತಾಮಣಿಯಲ್ಲಿ ಐಸ್ ಕ್ರೀಂ ಘಟಕ, ಹಾಗೂ ಯಲಹಂಕ ಬಳಿ ಅವಳಿ ಜಿಲ್ಲೆಯ ಹಾಲು ಉತ್ಪಾದಕರ ಮಕ್ಕಳಿಗೆ ಹಾಸ್ಟೆಲ್ ನಿರ್ಮಾಣ ಹೀಗೆ ಒಕ್ಕೂಟವು ಮಹತ್ವದ ಹೆಜ್ಜೆಗಳಿಟ್ಟು ಹೈನುಗಾರಿಕೆ ಗೆ ಉತ್ತೇಜನ ನೀಡುತ್ತಿದೆ ಎಂದರು.

ಈ ಸರ್ವ ಸದಸ್ಯ ಸಾಮಾನ್ಯ ಸಭೆ ಅಧ್ಯಕ್ಷತೆಯನ್ನು ಕೆಂಪಸಂದ್ರ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ್ ಕೆ ವಿ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಉತ್ತಮ ಗುಣಮಟ್ಟದ ಹಾಲನ್ನು ಹಾಕಿದ ಮೂವರು ಹಾಲು ಉತ್ಪಾದಕರಿಗೆ ಅಭಿನಂದಿಸಿ ಗ್ಯಾಸ್ ಸ್ಟವ್ ನೀಡಿ ಪ್ರೋತ್ಸಾಹಿಸಿದರು.

ಈ ಕಾರ್ಯಕ್ರಮ ದಲ್ಲಿ ಕೋಚಿಮೂಲ್ ನ ಪ್ರಧಾನ ವ್ಯವಸ್ಥಾಪಕರು ಡಾ.ಶ್ರೀನಿವಾಸಮೂರ್ತಿ,ಉಪವ್ಯವಸ್ಥಾಪಕರು ಲೋಹಿತ್, ವಿಸ್ತರಣಾಧಿಕಾರಿ ಹುಲ್ಲೂರಪ್ಪ, ಕೆಂಪಸಂದ್ರ ಡೈರಿಯ ಮುಖ್ಯ ಕಾರ್ಯನಿರ್ವಾಹಕ, ಹಾಲು ಪರೀಕ್ಷಕ ನಾರಾಯಣಸ್ವಾಮಿ ಸೇರಿದಂತೆ ಕಾರ್ಯಕಾರಿ ಮಂಡಳಿ ಸದಸ್ಯರು ಹಾಜರಿದ್ದರು.

Leave a Reply

Your email address will not be published. Required fields are marked *