ಮಾಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನ ಸಂಘಗಳಲ್ಲಿ ಸಂಘದ ಯಾರೇ ಸದಸ್ಯರು ಆರೋಗ್ಯದ ಸಮಸ್ಯೆ ಎಂದು ಸಾಲ ಮಾಡಬಾರದು ಎಂಬ ಮಾಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನ ಸಂಘಗಳಲ್ಲಿ ಸಂಘದ ಯಾರೇ ಸದಸ್ಯರು ಆರೋಗ್ಯದ ಸಮಸ್ಯೆ ಎಂದು ಸಾಲ ಮಾಡಬಾರದು ಎಂಬ ಉದ್ದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆರೋಗ್ಯ ರಕ್ಷಾ, ಮತ್ತು ಸಂಪೂರ್ಣ ಸುರಕ್ಷಾ ಯೋಜನೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಯೋಜನಾಧಿಕಾರಿ ಸತೀಶ್ ಅವರು ತಿಳಿಸಿದರು.

ಮಾಲೂರು: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನ ಸಂಘಗಳಲ್ಲಿ ಸಂಘದ ಯಾರೇ ಸದಸ್ಯರು ಆರೋಗ್ಯದ ಸಮಸ್ಯೆ ಎಂದು ಸಾಲ ಮಾಡಬಾರದು ಎಂಬ ಉದ್ದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆರೋಗ್ಯ ರಕ್ಷಾ, ಮತ್ತು ಸಂಪೂರ್ಣ ಸುರಕ್ಷಾ ಯೋಜನೆ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ ಎಂದು ಯೋಜನಾಧಿಕಾರಿ ಸತೀಶ್ ಅವರು ತಿಳಿಸಿದರು.

ಪಟ್ಟಣದಲ್ಲಿನ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ. ಸಿ ಟ್ರಸ್ಟ್ ನ ಕಛೇರಿಯಲ್ಲಿ ಆರೋಗ್ಯ ರಕ್ಷಾ ವಿಮೆ ಯೋಜನೆ ಅಡಿಯಲ್ಲಿ ಮಂಜೂರಾತಿಯಾದ ಸೌಲಭ್ಯ ಮೊತ್ತವನ್ನು ಸಂಘದ ಸದಸ್ಯರಾದ ಸುಮ 13 ಸಾವಿರ, ಪಾರ್ವತಮ್ಮ 4400 ಹಾಗೂ ಚಂದ್ರಪ್ಪ 20 ಸಾವಿರ ರೂ ಮೊತ್ತದ ಚೆಕ್ ವಿತರಣೆಯನ್ನು ಶಾಸಕ ಕೆ ವೈ ನಂಜೇಗೌಡವರಿಂದ ವಿತರಿಸಿ ಮಾತನಾಡಿದರು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಕಳೆದ 9 ವರ್ಷಗಳಿಂದ ತಾಲ್ಲೂಕಿನಲ್ಲಿ ಸ್ವಸಹಾಯ ಸಂಘ ಮತ್ತು ಪ್ರಗತಿ ಬಂದು ಸಂಘದ ಸದಸ್ಯರಿಗೆ ಪ್ರಗತಿ ನಿಧಿ ನೀಡಿ ಸ್ವ ಉದ್ಯೋಗ ಮತ್ತು ಕೃಷಿ ಚಟುವಟಿಕೆ ಮಾಡುತ್ತಿದ್ದು. ಸಂಘದಲ್ಲಿ ಸದಸ್ಯರು ಆರ್ಥಿಕವಾಗಿ ಮುಂದೆ ಬರಲು ಸಾಲ ಪಡೆಯಬೇಕೆ ವಿನಹ ಯಾರೇ ಸದಸ್ಯರು ಆರೋಗ್ಯದ ಸಮಸ್ಯೆ ಎಂದು ಸಾಲ ಮಾಡಬಾರದು ಎಂಬ ಉದ್ದೇಶಕ್ಕೆ ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ಪೂಜ್ಯ ಡಾ.ಡಿ. ವೀರೇಂದ್ರ ಹೆಗ್ಗಡೆಯವರು ಆರೋಗ್ಯ ರಕ್ಷಾ, ಮತ್ತು ಸಂಪೂರ್ಣ ಸುರಕ್ಷಾ ಯೋಜನೆ ಕಾರ್ಯಕ್ರಮಗಳನ್ನು ರೂಪಿಸಿದ್ದು ಇದರಲ್ಲಿ ಆರೋಗ್ಯ ರಕ್ಷಾ ಯೋಜನೆಗೆ ಮನೆಯ ಯಜಮಾನ ಮತ್ತು ಆತನ ಹೆಂಡತಿ 245 ರೂ ಕಟ್ಟಬೇಕು ಈ ಯೋಜನೆಯಲ್ಲಿ ಯಾರೇ ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾದಗ ಗರಿಷ್ಠ 20 ಸಾವಿರ ರೂ ನಿಮಗೆ ವಿಮೆ ಬರಲಿದೆ. ಇನ್ನೂ ಸಂಪೂರ್ಣ ಸುರಕ್ಷಾ ಯೋಜನೆಯಲ್ಲಿ ಮನೆಯ 6 ಮಂದಿ ಸದಸ್ಯರ ತನಕ ಒಬ್ಬರಿಗೆ ಸುಮಾರು 950 ರಿಂದ 1 ಸಾವಿರ ರೂಪಾಯಿ ಕಟ್ಟಿದಾಗ ಆಸ್ಪತ್ರೆಗೆ ದಾಖಲಾಗುವ ವೇಳೆ ಒಬ್ಬರಿಗೆ 20 ಸಾವಿರದಂತೆ 1 ಲಕ್ಷ 20 ಸಾವಿರ ಸೌಲಭ್ಯ ಸಿಗಲಿದೆ. ಈಗಾಗಲೇ ತಾಲ್ಲೂಕಿನಲ್ಲಿ 19500 ಸದಸ್ಯರು ಆರೋಗ್ಯ ರಕ್ಷಾ ನೋಂದಾವಣೆ ಮಾಡಿದ್ದು ಈ ವರ್ಷದಲ್ಲಿ 90 ಸದಸ್ಯರಿಗೆ ಮಂಜೂರಾತಿ ಆಗಿದ್ದು ರೂ 2251552.ರೂ ವಿಮಾ ಸೌಲಭ್ಯ ನೀಡಲಾಗಿದೆ ಎಂದರು.

ಈ ಸಂದರ್ಭದಲ್ಲಿ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಮುನೇಗೌಡ, ಪುರಸಭೆ ಸದಸ್ಯ ಪರಮೇಶ್, ತಾಲ್ಲೂಕು ಕೃಷಿ ಅಧಿಕಾರಿ ಮಧುರಾಜ್, ವಿಚ್ಚಕ್ಷಣಾಧಿಕಾರಿ ತಿಪ್ಪೇಸ್ವಾಮಿ, ರಮೇಶ್, ಉಷಾರಾಣಿ, ಪುಷ್ಪ, ನೇತ್ರಾವತಿ, ಕವಿತಾ, ಮಮತ ಸೇರಿದಂತೆ ಕಛೇರಿಯ ಸಹಾಯಕರು ಮತ್ತು ಸೇವಾ ಪ್ರತಿನಿಧಿಗಳು ಮತ್ತು ಸಂಘದ ಸದಸ್ಯರು ಭಾಗವಹಿಸಿದ್ದರು.

Leave a Reply

Your email address will not be published. Required fields are marked *