ಮಾಲೂರು : ಯಾವುದೇ ಒಬ್ಬ ವ್ಯಕ್ತಿ ಮದ್ಯವ್ಯಸನಿಯಾದಾಗ ಆತನ ಕುಟುಂಬ ಸಾಕಷ್ಟು ಸಂಕಷ್ಟಕ್ಕೆ ಸಿಲುಕುವುದಲ್ಲದೆ ಮದ್ಯದಲ್ಲಿರುವ ಅಪಾಯಕಾರಿ ಅಂಶಗಳು

ಮಾಲೂರು : ಯಾವುದೇ ಒಬ್ಬ ವ್ಯಕ್ತಿ ಮದ್ಯವ್ಯಸನಿಯಾದಾಗ ಆತನ ಕುಟುಂಬ ಸಾಕಷ್ಟು ಸಂಕಷ್ಟಕ್ಕೆ ಸಿಲುಕುವುದಲ್ಲದೆ ಮದ್ಯದಲ್ಲಿರುವ ಅಪಾಯಕಾರಿ ಅಂಶಗಳು ಯಾವುದೇ ಸಂದರ್ಭದಲ್ಲಿ ದೇಹದ ಆರೋಗ್ಯ ಮತ್ತು ಮನಸ್ಥಿತಿ ಬದಲಾಯಿಸಬಹುದು ಹೀಗಾಗಿ ಮದ್ಯವ್ಯಸನಿಗಳು ಇಂತಹ ಶಿಬಿರಗಳಲ್ಲಿ ಬಾಗಿಯಾಗಿ ಮದ್ಯಪಾನದಿಂದ ಮುಕ್ತರಾಗಿ ಉತ್ತಮ ಜೀವನ ನಡೆಸಬೇಕು ಎಂದು ಶಾಸಕ ಕೆ ವೈ ನಂಜೇಗೌಡ ಅವರು ತಿಳಿಸಿದರು.
ಪಟ್ಟಣದ ಡಾ.ಬಿ.ಆರ್ ಅಂಬೇಡ್ಕರ್ ಸಮುದಾಯ ಭವನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಅಖಿಲ ಕರ್ನಾಟಕ ಜನಜಾಗೃತಿ ವೇದಿಕೆ ಟ್ರಸ್ಟ್(ರಿ) ಕೋಲಾರ, ರಾಜ್ಯ ಮದ್ಯಪಾನ ಸಂಯಮ ಮಂಡಳಿ ಬೆಂಗಳೂರು ಇವರ ಸಂಯುಕ್ತಾಶ್ರಯದಲ್ಲಿ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ನಡೆದ 1709 ನೇ ಮದ್ಯವರ್ಜನಾ ಶಿಬಿರದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು. ಸಮಾಜದಲ್ಲಿ ನೆಮ್ಮದಿಯ ಜೀವನ ನಡೆಸುತ್ತಿರುವ ಕುಟುಂಬಗಳಲ್ಲಿನ ವ್ಯಕ್ತಿಗಳು ಯಾವುದೋ ಕಾರಣಗಳಿಂದ ಮಧ್ಯಪಾನ ಸೇರಿದಂತೆ ಕೆಟ್ಟ ಚಟಗಳಿಗೆ ಒಳಗಾಗಿ ನಂತರ ಮದ್ಯದಲ್ಲಿರುವ ಅಪಾಯಕಾರಿ ಅಂಶಗಳು ಯಾವುದೇ ಸಂದರ್ಭದಲ್ಲಿ ಅನೇಕ ದೀರ್ಘ ಕಾಲದ ರೋಗಗಳು ಸೃಷ್ಟಿಯಾಗಿ ಮತ್ತು ಆತನ ಮನಸ್ಥಿತಿ ಬದಲಾಗುವ ಸಮಯದಲ್ಲಿ ತಂದೆ,ತಾಯಿ, ಮಡದಿ ಮತ್ತು ಮಕ್ಕಳು ಆ ನೋವು ಅನುಭವಿಸಿ ಆತನ ಆರೋಗ್ಯಕ್ಕೆ ಸಾಲ-ಸೋಲ ಸಿಕ್ಕಿ ಜೀವನ ನಡೆಸಲು ತೊಂದರೆ ಅನುಭವಿಸುತ್ತಾರೆ. ಇದರಿಂದಾಗಿ ಅನೇಕ ಸಮಸ್ಯೆಗಳು ಎದುರಾಗುತ್ತವೆ. ಆದರೆ ಇಂತಹ ಸಮಸ್ಯೆಗಳಿಗೆ ಪೂಜ್ಯ ಡಾ.ಡಿ.ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಇತರೆ ಸಂಸ್ಥೆಗಳು ಸೇರಿಕೊಂಡು ವ್ಯಸನ ಮುಕ್ತ ಶಿಬಿರಗಳನ್ನು ರಾಜ್ಯದಾದ್ಯಂತ ಆಯೋಜಿಸುತ್ತಿದ್ದು. ಮಧ್ಯಪಾನಕ್ಕೆ ವ್ಯಸನರಾಗಿರುವವರು ಇಂತಹ ಮಹತ್ವದ ಶಿಬಿರಗಳಲ್ಲಿ ಭಾಗಿಯಾಗಿ ತಮ್ಮ ನಡೆಯನ್ನು ಬದಲಾಯಿಸಿ ಕುಡಿತವನ್ನು ಬಿಟ್ಟು ತಮ್ಮ ಕುಟುಂಬದವರೊಡನೆ ನೆಮ್ಮದಿಯ ಜೀವನ ನಡೆಸಬೇಕು. ರಾಜ್ಯದಲ್ಲಿ ಈವರೆಗೆ ಈ ಶಿಬಿರದಿಂದ ಸುಮಾರು 1 ಲಕ್ಷ 30 ಸಾವಿರ ಶಿಬಿರಾರ್ಥಿಗಳು ಜಿಲ್ಲೆಯಲ್ಲಿ 2 ಸಾವಿರ ತಾಲ್ಲೂಕಿನ ಈ ಶಿಬಿರದಲ್ಲಿ ಸುಮಾರು 45 ಜನರು ಶಿಬಿರಾರ್ಥಿಗಳು ವ್ಯಸನ ಮುಕ್ತರಾಗಿರುವುದಾಗಿ ತಿಳಿಸಿದ್ದು. ಅವರೆಲ್ಲರು ಸಮಾಜದಲ್ಲಿ ಗೌರವವಾಗಿ ಜೀವನ ನಡೆಸಲು ಅನುವು ಮಾಡಿಕೊಟ್ಟಿದ್ದಾರೆ. ಇನ್ನೂ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯವರು ರಾಜ್ಯದಾದ್ಯಂತ ಪ್ರತಿ ಗ್ರಾಮ ಮಟ್ಟದಲ್ಲಿ “ನಮ್ಮ ಊರು ನಮ್ಮ ಕೆರೆ” ಕಾಮಗಾರಿ ಮತ್ತು ಹಾಲಿನ ಡೈರಿಗಳಿಗೆ ಅನುದಾನ ನೀಡುವುದು. ಮಾಸಾಸನ ನೀಡುತ್ತಿರುವುದು ಸೇರಿದಂತೆ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದರು.
ಈ ಸಂದರ್ಭದಲ್ಲಿ ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಕೃಷ್ಣಪ್ಪ, ಬೆಂಗಳೂರು ಪ್ರಾದೇಶಿಕ ನಿರ್ದೇಶಕ ಸೀನಪ್ಪ ಎಂ, ಜಿಲ್ಲಾ ನಿರ್ದೇಶಕ ಪದ್ಮಯ್ಯ ಸಿ ಎಚ್, ಯೋಜನಾಧಿಕಾರಿಗಳಾದ ತಿಮ್ಮಯ್ಯನಾಯ್ಕ್, ಸತೀಶ್, ಸುಕೇಶ್, ಜಿಲ್ಲಾ ಜನ ಜಾಗೃತಿ ವೇದಿಕೆ ಅಧ್ಯಕ್ಷ ವಾಸುದೇವ್ . ಪುರಸಭೆ ಸದಸ್ಯರಾದ ಪರಮೇಶ್ ವೇಮನ . ವಿಜಯಲಕ್ಷ್ಮಿ ಕೃಷ್ಣಪ್ಪ, ಇಮ್ತಿಯಾಜ್, ಮುಖಂಡರಾದ ತಬಲ ನಾರಾಯಣಪ್ಪ, ಮಾಜಿ ಪುರಸಭೆ ಸದಸ್ಯರಾದ ಪ್ರದೀಪ್ ರೆಡ್ಡಿ , ಶಿಬಿರಧಿಕಾರಿ ದಿನೇಶ್ ಮರಾಠಿ ದರ್ಶನ್, ಕೃಷಿ ಅಧಿಕಾರಿ ಮಧುರಾಜ್, ಜೆವಿಕೆ ಉಷಾರಾಣಿ, ವಲಯ ಮೇಲ್ವಿಚಾರಕರಾದ ರಮೇಶ್ ತಾಲ್ಲೂಕಿನ ಎಲ್ಲಾ ಮೇಲ್ವಿಚಾರಕರು ಸೇವಾ ಪ್ರತಿನಿಧಿಗಳು, ಸಂಘ ಸಂಸ್ಥೆಯ ಸದಸ್ಯರು, ಶಿಬಿರಾರ್ಥಿಗಳು ಇದ್ದರು.

Leave a Reply

Your email address will not be published. Required fields are marked *