ಮಾಲೂರು: ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಆರ್ ಪ್ರಭಾಕರ್ ಅವರು “ಎಂಬಿ ರಾಮಯ್ಯ ಪ್ಯೂಯಲ್ ಸ್ಟೇಷನ್” ಪ್ರಾರಂಬಿಸಿರುವು

ಮಾಲೂರು: ಮಾಲೂರು-ಹೊಸೂರು ಮುಖ್ಯ ರಸ್ತೆಯಲ್ಲಿ ಆರ್ ಪ್ರಭಾಕರ್ ಅವರು “ಎಂಬಿ ರಾಮಯ್ಯ ಪ್ಯೂಯಲ್ ಸ್ಟೇಷನ್” ಪ್ರಾರಂಬಿಸಿರುವುದರಿಂದ ಈ ಭಾಗದ ಜನರಿಗೆ ಮತ್ತು ಹೆಚ್ಚಾಗಿ ಕಾರ್ಮಿಕರಿಗೆ ಅನುಕೂಲವಾಗುತ್ತದೆ ಎಂದು ಸಮಾಜ ಸೇವಕ ಹೂಡಿ ವಿಜಯ್ ಕುಮಾರ್ ಅವರು ತಿಳಿಸಿದರು.

ಪಟ್ಟಣದ ಹೊರ ವಲಯದಲ್ಲಿನ ಕೈಗಾರಿಕಾ ಪ್ರದೇಶದ ಹತ್ತಿರ ಭಾರತ್ ಪೆಟ್ರೋಲಿಯಂ ಕಾರ್ಪೊರೇಷನ್ ಲಿಮಿಟೆಡ್ ಅಂಗವಾಗಿ ನಿರ್ಮಿಸಿರುವ “ಎಂಬಿ ರಾಮಯ್ಯ ಪ್ಯೂಯಲ್ ಸ್ಟೇಷನ್” ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಮಾತನಾಡಿದರು. ನಮ್ಮ ಪಕ್ಷದ ಮುಖಂಡರು,ಸಹೋದರ ಸಮಾನರು ಆದ ಆರ್ ಪ್ರಭಾಕರ್ ಅವರು ತಮ್ಮ ತಂದೆಯ ಆಸೆಯಂತೆ ಇಂದು ಪೆಟ್ರೋಲ್ ಬಂಕ್ ಪ್ರಾರಂಬಿಸಿದ್ದು. ಈ ಭಾಗವು ಕೈಗಾರಿಕಾ ಪ್ರದೇಶವನ್ನು ಒಳಗೊಂಡಿದ್ದು ಇದರಿಂದಾಗಿ ಹೆಚ್ಚಾಗಿ ಇಲ್ಲಿನ ಕಾರ್ಮಿಕರಿಗೆ ಈ ಸೇವೆ ಸಿಗಲಿದೆ. ತಾಲ್ಲೂಕಿನ ಜನತೆ ಇದರ ಅನುಕೂಲ ಪಡೆಯಿರಿ ಇನ್ನೂ ಗ್ರಾಮ ಪಂಚಾಯಿತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಚುನಾವಣೆ ತಾಲ್ಲೂಕಿನಲ್ಲಿ ನಡೆದಿದ್ದು ಚುನಾವಣೆಯಲ್ಲಿ ಜಯಸಿದ ಎಲ್ಲರಿಗೂ ಶುಭವಾಗಲಿ. ಹಾಗೇ ಚುನಾವಣೆ ಸಂದರ್ಭದಲ್ಲಿ ಪಕ್ಷ ಬದಲಾವಣೆ ಮಾಡುವುದು ಸಹಜ ಮುಂದೆ ಇನ್ನೂ ಹಲವಾರು ಚುನಾವಣೆಗಳು ಬರಲಿದ್ದು ಯಾರು ನಮ್ಮ ಪಕ್ಷವನ್ನು ನಂಬಿ ಸ್ವಾಭಿಮಾನದಿಂದ ಗಟ್ಟಿಯಾಗಿ ಉಳಿದು ಕೊಳ್ಳುವವರೊ ಅಂತವರ ಚುನಾವಣೆಯನ್ನು ಮಾಡಲಾಗುವುದು ಎಂದರು.

ಈ ಉದ್ಘಾಟನಾ ಸಮಾರಂಭದಲ್ಲಿ ಶ್ರೀ ನಿರ್ಮಾಲಾನಂದ ಸ್ವಾಮೀಜಿ, ಶಾಸಕ ಕೆ ವೈ ನಂಜೇಗೌಡ, ಮಾಜಿ ಸಚಿವ ಹೆಚ್ ನಾಗೇಶ್, ಶ್ರೀಮತಿ ಶ್ವೇತಾ ಹೂಡಿ ವಿಜಯ್ ಕುಮಾರ್, ಅಂಜನಿ ಸೋಮಣ್ಣ, ಸಿಜಿ ಹರೀಶ್ ಗೌಡ, ಪುರಸಭ ಸದಸ್ಯರಾದ ವೇಮನ, ಭಾನು ತೇಜ, ಹನುಮಂತಪ್ಪ, ಬಿ.ಆರ್ ವೆಂಕಟೇಶ್, ಬಾವನಹಳ್ಳಿ ಚಂದ್ರಪ್ಪ, ವಿನಯ್ ಗೌಡ, ರಘು, ಸಂಪತ್, ಕೂರಿ ಮಂಜುಮಂಜು ಕುಟ್ಟಿ ಸೇರಿದಂತೆ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *