ಮಾಲೂರು: ಮಾಲೂರು ತಾಲ್ಲೂಕು ತಮಿಳುನಾಡು ಗಡಿ ಭಾಗದಲ್ಲಿದ್ದರೂ ಮೊದಲಿನಿಂದ ಕನ್ನಡ ಪರ ಸಂಘಟನೆಗಳ ಹೋರಾಟದಿಂದ ಕನ್ನಡವನ್ನು ಉಳಿಸಿ ಬೆಳಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಕೆ ವೈ ನಂಜೇಗೌಡ ಅವರು ಹೇಳಿದರು.

ಮಾಲೂರು: ಮಾಲೂರು ತಾಲ್ಲೂಕು ತಮಿಳುನಾಡು ಗಡಿ ಭಾಗದಲ್ಲಿದ್ದರೂ ಮೊದಲಿನಿಂದ ಕನ್ನಡ ಪರ ಸಂಘಟನೆಗಳ ಹೋರಾಟದಿಂದ ಕನ್ನಡವನ್ನು ಉಳಿಸಿ ಬೆಳಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಶಾಸಕ ಕೆ ವೈ ನಂಜೇಗೌಡ ಅವರು ಹೇಳಿದರು.

ತಾಲ್ಲೂಕಿನ ಗಡಿ ಭಾಗವಾದ ಸಂಪಂಗೆರೆ ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಯಶಸ್ವಿನಿ ಮಹಿಳಾ ಮಂಡಳಿ (ರಿ) ಸೊಮೇನಹಳ್ಳಿ ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಡಿನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋಲಾರ ಜಿಲ್ಲೆಯಲ್ಲಿ ಮಾಲೂರು ತಾಲ್ಲೂಕು ತಮಿಳುನಾಡು ಗಡಿಯಲ್ಲಿದ್ದು ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕನ್ನಡ ಪರ ಸಂಘಟನೆಗಳ ಹೋರಾಟ ಮತ್ತು ಒಗ್ಗಟ್ಟಿನಿಂದ ಕನ್ನಡವನ್ನು ಉಳಿಸಿ ತಮಿಳುನಾಡಿನ ಹೊಸೂರು, ಕೃಷ್ಣಗಿರಿಯವರೆಗೆ ಹರಡಿಸಿದ್ದು. ಅಲ್ಲೂ ಕನ್ನಡ ಮಾತನಾಡುವವರಿದ್ದಾರೆ. ಇನ್ನೂ ಇಂತಹ ಕಾರ್ಯಕ್ರಮಗಳು ಹೆಚ್ಚಾಗಿ ನಡೆಯಬೇಕು ಮುಂದಿನ ದಿನಗಳಲ್ಲಿ ತಾಲ್ಲೂಕಿನ ದಿನ್ನಹಳ್ಳಿ ಮತ್ತು ದೊಡ್ಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಈ ಕಾರ್ಯಕ್ರಮಗಳು ಆಗಬೇಕು ಎಂದರು.

ಈ ವೇಳೆ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಕವಿಗೋಷ್ಟಿ, ಮತ್ತು ಸುಗಮ ಸಂಗೀತ ಕಾರ್ಯಕ್ರಮಗಳು ನಡೆಯಿತು ಕಾರ್ಯಕ್ರಮವನ್ನು ಮಂಜುಳ ಕೊಂಡ್ರರಾಜನಹಳ್ಳಿ ಅವರು ನಿರೂಪಣೆ ಮಾಡಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಕೆ ರಮೇಶ್, ಚಿಕ್ಕ ತಿರುಪತಿ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ ಪ್ರಸಾದ್, ಗ್ರಾಮ ಪಂಚಾಯಿತಿ ಸದಸ್ಯ ಜಯಪ್ಪ, ಸುಶೀಲಮ್ಮ ಮುನಿರಾಜ್, ಸಂಪಂಗೆರೆ ರಘು,ಎಕೆ ವೆಂಕಟೇಶ್, ಪಿಡಿಒ ವೇಣು, ಯಶಸ್ವಿನಿ ಮಹಿಳಾ ಮಂಡಳಿ (ರಿ) ಸೊಮೇನಹಳ್ಳಿ ನಾಗವೇಣಿ, ಏಷಿಯನ್ ಪ್ರೌಡ ಶಾಲಾ ಶಿಕ್ಷಕರಾದ ರುದ್ರೇಶ್ ಎಸ್, ಗೌತಮ್, ತಬಲ ಸೋಮಶೇಖರ್ ಸೇರಿದಂತೆ ಕಲಾವಿದರು ಮಕ್ಕಳು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *