ಮಾಲೂರು: ಪ್ರಾಮಾಣಿಕ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಉಡುಪಿ ಜಿಲ್ಲೆಗೆ ವರ್ಗಾವಣೆ .

ಮಾಲೂರು: ಪ್ರಾಮಾಣಿಕ ಸೇವೆ ಸಲ್ಲಿಸಿ ಮುಂಬಡ್ತಿ ಪಡೆದು ಉಡುಪಿ ಜಿಲ್ಲೆಗೆ ವರ್ಗಾವಣೆ ಯಾಗಿ ಹೋಗುತ್ತಿರುವ ಪಶು ವೈದ್ಯಾಧಿಕಾರಿಗಳಾದ ಡಾಕ್ಟರ್ ರೆಡ್ಡೆಪ್ಪ ರವರಿಗೆ ಕಸ್ತೂರಿ ಕರ್ನಾಟಕ ಜನಪರ ವೇದಿಕೆ ವತಿಯಿಂದ ಜಿಲ್ಲಾ ಉಪಾಧ್ಯಕ್ಷ ರಾದ ಕಸ್ತೂರಿ ಶ್ರೀನಿವಾಸ್ ರವರು ಅಭಿನಂದನೆ ಸಲ್ಲಿಸಿದರು.
ತಾಲೂಕಿನ ಪಶು ಆಸ್ಪತ್ರೆ ಯಲ್ಲಿ ಸುಮಾರು ಒಂಬತ್ತು ವರ್ಷಗಳಿಂದ ನಿರಂತರವಾಗಿ ಸೇವೆ ಸಲ್ಲಿಸಿ ತಾಲೂಕಿನಾದ್ಯಂತ ರೈತರ ಮನದಲ್ಲಿ ಮನೆ ಮಾಡಿರುವಂತ, ಪಶುಗಳ ವೇದನೆಯನ್ನು ತಿಳಿದು ಜೀವ ನೀಡುತ್ತಿದ್ದ ವೈದ್ಯರ ಸೇವೆ ಅನನ್ಯ. ಇವರ ಪ್ರಾಮಾಣಿಕ ಸೇವೆಗೆ ಮತ್ತಷ್ಟು ಉನ್ನತ ಸ್ಥಾನ ಮಾನಗಳು ಸಿಗಲಿ ಎಂದು ಹೇಳಿದರು
ಇದೆ ಸಂದರ್ಭದಲ್ಲಿ ಭೀಮ ಬಂದು ಪತ್ರಿಕೆ ಸಂಪಾದಕರಾದ ಹೆಚ್ ಎಮ್ ಮಂಜುನಾಥ್, ಉಪಸಂಪಾದಕರಾದ ಎನ್.ಎಮ್. ಸರ್ವೇಶ ಮತ್ತು ಸಂತೋಷ್ ಘರ್ಜನೆ ರವರು ಇದ್ದರು.

Leave a Reply

Your email address will not be published. Required fields are marked *