ಮಾಲೂರು: ಪಟ್ಟಣದ ಹೋಂಡಾ ಕ್ರೀಡಾಂಗಣದ ಪಕ್ಕದಲ್ಲಿ ನುತಾಣವಾಗಿ ಪ್ರಾರಂಭಿಸಿರುವ ಕರ್ಣಾಟಕ ಬ್ಯಾಂಕ್ ನ 912 ನೇ ಶಾಖೆಯನ್ನು ಶಾಸಕ ಕೆವೈ ನಂಜೇಗೌಡ ಅವರು ಉದ್ಘಾಟನೆ ಮಾಡಿದರು.

ಮಾಲೂರು: ಪಟ್ಟಣದ ಹೋಂಡಾ ಕ್ರೀಡಾಂಗಣದ ಪಕ್ಕದಲ್ಲಿ ನುತಾಣವಾಗಿ ಪ್ರಾರಂಭಿಸಿರುವ ಕರ್ಣಾಟಕ ಬ್ಯಾಂಕ್ ನ 912 ನೇ ಶಾಖೆಯನ್ನು ಶಾಸಕ ಕೆವೈ ನಂಜೇಗೌಡ ಅವರು ಉದ್ಘಾಟನೆ ಮಾಡಿದರು.

ಈ ವೇಳೆ ಮಾತನಾಡಿದ ಅವರು ಕರ್ಣಾಟಕ ಬ್ಯಾಂಕ್ ದೇಶದಾದ್ಯಂತ ಸುಮಾರು 912 ಶಾಖೆಗಳನ್ನು ತೆರೆದು ಯಶಸ್ವಿಯಾಗಿ ನಡೆಯುತ್ತಿದ್ದು ಶತಮಾನೋತ್ಸವದ ಹೊಸ್ತಿಲಲ್ಲಿದೆ. ಸುಮಾರು 1.50 ಲಕ್ಷ ಕೋಟಿ ರೂಪಾಯಿ ವ್ಯವಹಾರ ಮಾಡಿದ್ದೂ, ರಾಜ್ಯದಲ್ಲಿ 576 ಶಾಖೆಗಳು ಕಾರ್ಯ ನಿರ್ವಹಿಸುತ್ತಿರುವುದಾಗಿ ಮಾಹಿತಿ ನೀಡಿದ್ದು ಇಂದು ನಮ್ಮ ಮಾಲೂರಿನಲ್ಲಿ ನೂತನ ಶಾಖೆ ಪ್ರಾರಂಭಿಸಿರುವುದು ಸಂತೋಷದ ವಿಷಯ. ತಾಲ್ಲೂಕಿನಲ್ಲಿ ಹೆಚ್ಚಾಗಿ ಕೃಷಿ ಅವಲಂಬಿಸಿರುವವರು ಇದ್ದು ಹಾಗೇ ಬೀದಿ ಬದಿ ವ್ಯಾಪಾರಿಗಳಿಗೆ ಬ್ಯಾಂಕಿನಲ್ಲಿ ವಿಶೇಷ ಸಾಲ ಸೌಲಭ್ಯವನ್ನು ಕಲ್ಪಿಸಿ ಅವರು ಆರ್ಥಿಕ ವಾಗಿ ಮುಂದೆಬರಲು ಬ್ಯಾಂಕ್ ನವರು ಸಹಕರಿಸಿ ಇನ್ನೂ ಕರ್ಣಾಟಕ ಬ್ಯಾಂಕ್ ಯಶಸ್ವಿಯಾಗಿ ಸುಮಾರು 100 ವರ್ಷಗಳಿಂದ ಲಾಭದಾಯಕವಾಗಿ ಮುನ್ನುಗ್ಗುತ್ತಿರುವ ಮತ್ತು ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಲು ಮುಂದಾಗಿರುವ ಬ್ಯಾಂಕ್ ಆಗಿದ್ದು ಎಲ್ಲರೂ ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.

ಈ ಸಂದರ್ಭದಲ್ಲಿ ಬ್ಯಾಂಕ್ ಚೀಪ್ ಬಿಸಿನೆಸ್ ಆಫೀಸರ್ ಗೋಕುಲ್ ದಾಸ್ ಪೈ, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ಸುಬ್ಬರಾಮು,ಅಂಜನಿ ಸೋಮಣ್ಣ, ಮುರಳೀಧರ್, ಪ್ರದೀಪ್ ರೆಡ್ಡಿ, ಪುರಸಭೆ ಸದಸ್ಯ ಪರಮೇಶ್, ಶಾಖಾ ವ್ಯವಸ್ಥಾಪಕ ವೀಜಯೆಶ್, ಮುಖಂಡರಾದ ಅಂಜಿನಪ್ಪ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *