ಮಾಲೂರು : ಪಟ್ಟಣದ ಮಾಲೂರು-ಬೆಂಗಳೂರು ರಸ್ತೆಯ ಪಂಪ್ ಹೌಸ್ ಬಳಿ ನೂತನವಾಗಿ ಪ್ರಾರಂಭಿಸುತ್ತಿರುವ ವಂಶೋದಯ ಆಸ್ಪತ್ರೆಯನ್ನು ಶಾಸಕ ಕೆ.ವೈ.ನಂಜೇಗೌಡ ಉದ್ಘಾಟಿಸಿದರು.

ಮಾಲೂರು : ಪಟ್ಟಣದ ಮಾಲೂರು-ಬೆಂಗಳೂರು ರಸ್ತೆಯ ಪಂಪ್ ಹೌಸ್ ಬಳಿ ನೂತನವಾಗಿ ಪ್ರಾರಂಭಿಸುತ್ತಿರುವ ವಂಶೋದಯ ಆಸ್ಪತ್ರೆಯನ್ನು ಶಾಸಕ ಕೆ.ವೈ.ನಂಜೇಗೌಡ ಉದ್ಘಾಟಿಸಿದರು.
ಈ ವೇಳೆ ಮಾತನಾಡಿದ ಅವರು ಕಳೆದ 13 ವರ್ಷಗಳ ಹಿಂದೆ ಈ ಸ್ಥಳದಲ್ಲಿ ಡಾ. ವಿನಾಯಕ ಪ್ರಭು ಅವರು ಭರಣಿ ಆಸ್ಪತ್ರೆ ಎಂಬ ಹೆಸರಿನಿಂದ ಉತ್ತಮವಾದ ಆಸ್ಪತ್ರೆಯನ್ನು ಪ್ರಾರಂಭಿಸಿ ಸಾರ್ವಜನಿಕರಿಗೆ ಒಳ್ಳೆಯ ಸೇವೆಯನ್ನು ನೀಡುತ್ತಿದ್ದು ಅತ್ಯುತ್ತಮವಾದ ಹೆಸರನ್ನು ಉಳಿಸಿಕೊಂಡಿದ್ದು. ಪ್ರಸ್ತುತ ಕೋಲಾರ ನಗರದಲ್ಲಿ ವಂಶೋದಯ ಆಸ್ಪತ್ರೆಯು ಜನರಿಗೆ ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಒಳ್ಳೆಯ ಹೆಸರನ್ನು ಪಡೆದಿರುವ ಆಸ್ಪತ್ರೆಯಾಗಿದ್ದು. ಈ ವಂಶೋದಯ ಆಸ್ಪತ್ರೆ ವೈದ್ಯಾಧಿಕಾರಿಗಳು ಮಾಲೂರು ಪಟ್ಟಣದ ಈ ಹಿಂದಿನ ಭರಣಿ ಆಸ್ಪತ್ರೆಯ ಸ್ಥಳವನ್ನು ಪಡೆದು ಇಲ್ಲಿ ತಮ್ಮ ವೈದ್ಯಕೀಯ ಸೇವೆಗಳನ್ನು ಪ್ರಾರಂಭಿಸಿ ತಾಲ್ಲೂಕಿನ ಜನತೆಗೆ ಉತ್ತಮ ಗುಣಮಟ್ಟದ ವಿವಿಧ ರೀತಿಯ ಸೇವೆಯನ್ನು ನೀಡಲು ಮುಂದಾಗಿದ್ದು. ವಂಶೋದಯ ಆಸ್ಪತ್ರೆ ಎಲ್ಲಾ ವೈದ್ಯರಿಗೆ ಮತ್ತು ಸಿಬ್ಬಂದಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ ಹಾಗೇ ತಾಲ್ಲೂಕಿನ ಜನತೆ ತಮ್ಮ ಆರೋಗ್ಯವನ್ನು ಕಾಪಾಡಿ ಕೊಳ್ಳಲು ಈ ಆಸ್ಪತ್ರೆಯನ್ನು ಸದುಪಯೋಗ ಪಡಿಸಿಕೊಳ್ಳುವಂತೆ ಹೇಳಿದರು.
ಈ ಸಂದರ್ಭದಲ್ಲಿ ಡಾ. ವಿನಾಯಕ ಪ್ರಭು, ವಂಶೋದಯ ಆಸ್ಪತ್ರೆಯ ವೈದ್ಯ ನಿರ್ದೇಶಕರಾದ ಡಾ.ಅರವಿಂದ್, ಡಾ.ರವಿಕುಮಾರ್, ಡಾ.ವಿನಯ್, ಡಾ.ನಾರಾಯಣಸ್ವಾಮಿ, ಡಾ.ಹರ್ಷಿತ, ಡಾ.ಗಿರಿಜಾ, ಡಾ.ಸುನೀತಾ ಪ್ರಭು, ಆಸ್ಪತ್ರೆಯ ವ್ಯವಸ್ಥಾಪಕರಾದ ಚೇತನ್, ಮಂಜುನಾಥ್ ಇದ್ದರು.

Leave a Reply

Your email address will not be published. Required fields are marked *