ಮಾಲೂರು: ಪಟ್ಟಣದ ಕೃಷಿಕ ಸಮಾಜ ಕಛೇರಿಯಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿ ರೈತರನ್ನು ಶಾಸಕ ಕೆ ವೈ ನಂಜೇಗೌಡ ಅವರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.

ಮಾಲೂರು: ಪಟ್ಟಣದ ಕೃಷಿಕ ಸಮಾಜ ಕಛೇರಿಯಲ್ಲಿ ತೋಟಗಾರಿಕೆ ಇಲಾಖೆಯ ವಿವಿಧ ಯೋಜನೆಗಳ ಫಲಾನುಭವಿ ರೈತರನ್ನು ಶಾಸಕ ಕೆ ವೈ ನಂಜೇಗೌಡ ಅವರ ಸಮ್ಮುಖದಲ್ಲಿ ಲಾಟರಿ ಮೂಲಕ ಆಯ್ಕೆ ಮಾಡಲಾಯಿತು.
ಈ ಕುರಿತು ಮಾತನಾಡಿದ ಶಾಸಕ ಕೆವೈ ನಂಜೇಗೌಡ ಅವರು ತೋಟಗಾರಿಕೆ ಇಲಾಖೆಯಲ್ಲಿ ರೈತರಿಗೆ ಅನುಕೂಲವಾಗುವ ಸಾಕಷ್ಟು ಯೋಜನೆಗಳಿವೆ. ರೈತರು ಈ ಯೋಜನೆಗಳ ಪಡೆಯಲು ಅರ್ಜಿಗಳನ್ನು ಸಲ್ಲಿಸಿದ್ದು ನಿಗದಿತ ಗುರಿಗಿಂತಲೂ ಹೆಚ್ಚಿನ ಸಂಖ್ಯೆಯಲ್ಲಿ ಅರ್ಜಿಗಳು ಬಂದಿದ್ದರಿAದ ಲಾಟರಿ ಮೂಲಕ ಆಯ್ಕೆ ಮಾಡುತ್ತಿರುವುದಾಗಿ ಅಧಿಕಾರಿಗಳು ತಿಳಿಸಿದ್ದು ಪಾರದರ್ಶಕತೆಯಿಂದ ಫಲಾನುಭವಿ ಗಳನ್ನು ಆಯ್ಕೆ ಮಾಡುವ ಪ್ರಕ್ರಿಯೆ ಇದಾಗಿದೆ. ಇತ್ತೀಚಿನ ದಿನಗಳಲ್ಲಿ ರೈತರಲ್ಲಿ ಸರ್ಕಾರದ ಯೋಜನೆಗಳ ಬಗ್ಗೆ ಪ್ರಚಾರ ಮಾಡಿ ಅರಿವು ಮೂಡಿಸುವ ಕಾರ್ಯ ಆಗಬೇಕು. ಈ ಹಿಂದೆ ಕೃಷ್ಣ ಬೈರೇಗೌಡ ಅವರು ಕೃಷಿ ಮಂತ್ರಿಗಳಾಗಿದ್ದಾಗಿ ರೈತರಿಗೆ ಅನುಕೂಲವಾಗುವ ಅನೇಕ ಕಾರ್ಯಕ್ರಮಗಳನ್ನು ರಾಜ್ಯದಲ್ಲಿ ಜಾರಿಗೊಳಿಸಿದ್ದು ನಂತರ ನಂದ ಬಿಜೆಪಿ ಸರ್ಕಾರ ಅವುಗಳನ್ನು ನಿಲ್ಲಿಸಿತ್ತು. ಈಗ ಮತ್ತೇ ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಿದ್ದು ಎಲ್ಲಾ ಶಾಸಕರು ಈಗಾಗಲೇ ಹಿಂದೆ ಕೃಷ್ಣ ಬೈರೇಗೌಡ ಅವರು ಜಾರಿಗೊಳಿಸಿದ ಎಲ್ಲಾ ಕಾರ್ಯಕ್ರಮಗಳನ್ನು ಪ್ರಾರಂಭಿಸಲು ಒತ್ತಾಯಿಸಿದ್ದೇವೆ. ಮುಖ್ಯಮಂತ್ರಿಗಳು ಈ ಗ್ಯಾರೆಂಟಿ ಯೋಜನೆಗಳ ಜಾರಿ ನಂತರ ಮಾಡುವುದಾಗಿ ತಿಳಿಸಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಮಳೆ ಇಲ್ಲದೆ ರೈತರು ಸಂಕಷ್ಟದಲ್ಲಿದ್ದಾರೆ ನಾನು ಸಹ ನಮ್ಮ ಜಿಲ್ಲೆಯನ್ನು ಮತ್ತು ತಾಲ್ಲೂಕನ್ನು ಬರ ಪೀಡಿತ ಪಟ್ಟಿಗೆ ಸೇರಿಸಲು ಚರ್ಚಿಸಿದ್ದೇನೆ. ಹಾಗೂ ಹಾಲು ಉತ್ಪಾದಕ ರೈತರಿಗೂ ಮಳೆ ಇಲ್ಲದೆ ಕಷ್ಟಕರವಾಗಿದ್ದು. ಇದಕ್ಕಾಗಿ ನೀರು ಇರುವ ರೈತರಿಗೆ ನಮ್ಮ ಒಕ್ಕೂಟದಿಂದ ಬಿತ್ತನೆ ಬೀಜ ಮತ್ತು ಎಕರೆಗೆ 3 ಸಾವಿರ ರೂಪಾಯಿ ಸಹಾಯಧನ ನೀಡಲು ತೀರ್ಮಾನಿಸಿದ್ದು ಎಷ್ಟು ಎಕರೆಯಲ್ಲಾದರೂ ಬೆಳೆದು ರೈತರಿಗೆ ಮಾರಾಟ ಮಾಡಬಹುದು ಇದರ ಉದ್ದೇಶ ರೈತರಿಗೆ ಮೇವು ಸಿಗಬೇಕು ಮತ್ತು ಹಾಲು ಉತ್ಪಾದನೆ ಕಡಿಮೆಯಾಗದಿರಲು. ಈ ಎಲ್ಲಾ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಈ ಲಾಟರಿ ಪ್ರಕ್ರಿಯೆಯಲ್ಲಿ ತಾಲ್ಲೂಕಿನ ವಿವಿಧ ಗ್ರಾಮಗಳಿಂದ ರೈತರು ಬಂದಿದ್ದು ಒಟ್ಟು 94 ಅರ್ಜಿಗಳನ್ನು ರೈತರು ಸಲ್ಲಿಸಿದ್ದು ಇದರಲ್ಲಿ 33 ಮಂದಿಯನ್ನು ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಹನುಮಂತಪ್ಪ, ತಾಲ್ಲೂಕು ಪಂಚಾಯಿತಿ ಇಒ ಕೃಷ್ಣಪ್ಪ, ಸಹಾಯಕ ಕೃಷಿ ನಿರ್ದೇಶಕ ಚಂದ್ರಪ್ಪ, ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕರಾದ ಶಿಲ್ಪಾ, ತೋಟಗಾರಿಕೆ ಇಲಾಖೆ ಶಾಖಾ ಅಧಿಕಾರಿ ಪ್ರದೀಪ್, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಪಿ ನಾರಾಯಣಸ್ವಾಮಿ ಪುರಸಭೆ ಮಾಜಿ ಅಧ್ಯಕ್ಷ ಮುರಳೀಧರ್, ಹನುಮಂತ ರೆಡ್ಡಿ ಇನ್ನಿತರರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *