ಮಾಲೂರು: ದೇಶದಲ್ಲಿ ಎಷ್ಟೇ ಪಕ್ಷಗಳು ಮೈತ್ರಿ ಮಾಡಿಕೊಂಡು ಬಂದರೂ ನರೇಂದ್ರ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ ಮತ್ತೆ ಮೋದಿಯವರು ಗೆದ್ದು ದೇಶದ ಅಭಿವೃದ್ಧಿಯೊಂದಿಗೆ ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಎಂದು ಸಂಸದ ಎಸ್. ಮುನಿಸ್ವಾಮಿ ಅವರು ಹೇಳಿದರು.

ಮಾಲೂರು: ದೇಶದಲ್ಲಿ ಎಷ್ಟೇ ಪಕ್ಷಗಳು ಮೈತ್ರಿ ಮಾಡಿಕೊಂಡು ಬಂದರೂ ನರೇಂದ್ರ ಮೋದಿಯವರನ್ನು ಸೋಲಿಸಲು ಸಾಧ್ಯವಿಲ್ಲ ಮತ್ತೆ ಮೋದಿಯವರು ಗೆದ್ದು ದೇಶದ ಅಭಿವೃದ್ಧಿಯೊಂದಿಗೆ ಮತ್ತಷ್ಟು ಬಲಿಷ್ಠ ರಾಷ್ಟ್ರವನ್ನಾಗಿ ಮಾಡಲಿದ್ದಾರೆ ಎಂದು ಸಂಸದ ಎಸ್. ಮುನಿಸ್ವಾಮಿ ಅವರು ಹೇಳಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಜಿಲ್ಲೆಯ ಮುಳಬಾಗಿಲಿನ ಕುರುಡುಮಲೆಗೆ ರಾಜ್ಯ ಬಿಜೆಪಿ ಹಿರಿಯ ನಾಯಕರು ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ, ಸದಾನಂದ ಗೌಡ, ನಳೀನ್ ಕುಮಾರ್ ಕಟೀಲ್ ಅವರು ಬರುವ ಹಿನ್ನಲೆಯಲ್ಲಿ ಪಟ್ಟಣದ ಪದ್ಮಾವತಿ ಕಾಂಪೇಕ್ನಲ್ಲಿ ಬಿಜೆಪಿ ತಾಲ್ಲೂಕು ಘಟಕ ವತಿಯಿಂದ ಆಯೋಜಿಸಿದ್ದ ಪೂರ್ವಾಭಾವಿ ಸಭೆಯಲ್ಲಿ ಮಾತನಾಡಿದರು. ಜಿಲ್ಲೆಯಲ್ಲಿ ಮಳೆ ಇಲ್ಲದೆ ಬರ ಪೀಡಿತವಾಗಿದ್ದು, ಜಿಲ್ಲೆಯ ರೈತರು ಸಂಕಷ್ಟದಲ್ಲಿದ್ದಾರೆ. ಈ ವಿಷಯ ಬಗ್ಗೆ ಮತ್ತು ಶ್ರೀನಿವಾಸಪುರ ತಾಲ್ಲೂಕಿನಲ್ಲಿ ಅರಣ್ಯ ತೆರುವು ಎಂಬ ಹೆಸರಿನಲ್ಲಿ ಸುಮಾರು ವರ್ಷಗಳಿಂದ ಪಹಣಿ, ಪಟ್ಟಾ ಸೇರಿದಂತೆ ಎಲ್ಲಾ ತರಹದ ದಾಖಲೆಗಳನ್ನು ಹೊಂದಿದ್ದು ಜೀವನಕ್ಕೆ ವ್ಯವಸಾಯ ಮಾಡುತ್ತಿದ್ದ ಭೂಮಿ ಮತ್ತು ರೈತರು ಬೆಳೆದ ಬೆಳೆಗಳನ್ನು ನಾಶ ಮಾಡಿ ತೊಂದರೆ ಕೊಡುತ್ತಿದ್ದು. ಈ ಬಗ್ಗೆ ನಾವು ನಮ್ಮ ಮುಖಂಡರು ರೈತರ ಪರವಾಗಿ ನಿಂತಿರುವುದಕ್ಕೆ ವಿರುದ್ಧ ಪ್ರಕರಣ ದಾಖಲಿಸಿದ್ದು ಇದಕ್ಕೆಲ್ಲಾ ಭಯ ಪಟ್ಟು ಹಿಂದೆ ಸರಿಯುವ ಮಾತಿಲ್ಲ ರೈತರ ಪರವಾಗಿ ಹೋರಾಟ ಮಾಡುವುದಕ್ಕೂ ಜೈಲಿಗೆ ಹೂಗುವುದಕ್ಕೂ ಸಿದ್ದವಾಗಿದ್ದು. ಇನ್ನೂ ನಮ್ಮ ರಾಜ್ಯದ ರೈತರ ನಾಯಕ ಮಾಜಿ ಮುಖ್ಯಮಂತ್ರಿಗಳಾದ ಬಿಎಸ್ ಯಡಿಯೂರಪ್ಪ ಮತ್ತು ಬಸವರಾಜ್ ಬೊಮ್ಮಾಯಿ, ಸದಾನಂದ ಗೌಡ ಅವರು ಇದೇ ತಿಂಗಳು 17 ರಂದು ಜಿಲ್ಲೆಗೆ ಬೇಟಿ ನೀಡಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ಮುಳಬಾಗಿಲಿನ ಕುರುಡುಮಲೆ ಗಣಪತಿ ದೇವಸ್ತಾನದಲ್ಲಿ ವಿಶೇಷ ಪೂಜೆ ಸಲ್ಲಿಸಿ ನಂತರ ಬೆಳೆ ವೀಕ್ಷಣೆ ಮಾಡಿ ರೈತರಿಗೆ ಆತ್ಮಸ್ಟೈರ್ಯ ತುಂಬುವ ಕಾರ್ಯ ಮಾಡಲಿದ್ದು. ಈ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಭಾಗವಹಿಸಬೇಕು. ಕಳೆದ ಚುನಾವಣೆಯಲ್ಲಿ ತಾಲ್ಲೂಕಿನಲ್ಲಿ ನಮ್ಮ ಪಕ್ಷದ ಆಂತರಿಕ ವ್ಯತ್ಯಾಸಗಳಿಂದ ಸೋತಿದ್ದು ಈಗಿನ ಶಾಸಕರ ವಿರುದ್ಧ ಸುಮಾರು 1 ಲಕ್ಷಕ್ಕೂ ಹೆಚ್ಚು ಮತಗಳು ಬಂದಿದ್ದು ಜನರ ವಿಶ್ವಾಸವನ್ನು ಗಳಿಸಲು ವಿಫಲರಾಗಿದ್ದರೆ. ಸ್ಥಳೀಯ ಶಾಸಕರು ತಮ್ಮ ಅವಧಿಯಲ್ಲಿ ಏನಾದರೂ ಸಾಧನೆ ಮಾಡಿದ್ದಾರೆ ಎಂದರೆ ಅದು ಶೂನ್ಯ, ಕಳೆದ ನಮ್ಮ ಸರ್ಕಾರದಲ್ಲಿ ನಡೆದ ಕೆಲಸಗಳು ಬಿಟ್ಟರೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ ಇನ್ನೂ ಈ ಭಾರಿ ಜನತೆಗೆ ಗ್ಯಾರೆಂಟಿ ಯೋಜನೆಗಳು ನೀಡುತ್ತೇವೆ ಎಂದು ಗೆದ್ದು ಜನತೆಗೆ ನೀಡಲು ಆ ಷರತ್ತು, ಈ ಷರತ್ತು ಎಂದು ನೀಡದೆ ಜನರಿಗೆ ಮೊಸ ಮಾಡುತ್ತಿದ್ದಾರೆ. ಆದರೆ ಬಿಜೆಪಿ ಸರ್ಕಾರ ಯಾವುದೇ ಪಕ್ಷ, ಜಾತಿ ನೋಡದೆ ಆಯುಷ್ಮಾನ್ ಭಾರತ್ ಹೆಲ್ತ್ ಕಾರ್ಡ್, ಇ-ಶ್ರಮ್ ಕಾರ್ಡ್, ಕರೋನ ಲಸಿಕೆ, 37 ತಿಂಗಳು 7 ಕೆಜಿ ಅಕ್ಕಿ ಈ ರೀತಿ ಅನೇಕ ಕಾರ್ಯಕ್ರಮಗಳನ್ನು ಜನತೆಗೆ ನೀಡಿದ್ದು. ಈಗಾಗಲೇ ಜನ ತೀರ್ಮಾನಿಸಿದ್ದು ಮುಂದಿನ ಚುನಾವಣೆಯಲ್ಲಿ ಇವರಿಗೆ ಉತ್ತರ ನೀಡಲಿದ್ದಾರೆ. ಹಾಗೇ ಐ.ಎನ್.ಡಿ.ಐ.ಎ ಮೈತ್ರಿ ಮಾಡಿಕೊಂಡು ನಾವು ಮೋದಿ ಸರ್ಕಾರವನ್ನು ಸೋಲಿಸುತ್ತೇವೆ ಎಂದು ಹಿಂದೂ ಧರ್ಮದ ವಿರುದ್ದ ಹೇಳಿಕೆಗಳನ್ನು ನೀಡುತ್ತಾ ಹೊರಟಿರುವ ಈ ಮೈತ್ರಿ ಕೂಟದ ಜೊತೆಗೆ ಮತ್ತಷ್ಟು ಪಕ್ಷಗಳು ಸೇರಿಕೊಂಡು ಬಂದರು ಕೇಂದ್ರದಲ್ಲಿ ಪ್ರಧಾನಿ ಮೋದಿಯವರನ್ನಾ ಸೋಲಿಸಲು ಸಾಧ್ಯವಿಲ್ಲ. ಮತ್ತೇ ಮೋದಿಯವರು ಗೆದ್ದು ದೇಶದ ಅಭಿವೃದ್ಧಿ ಜೊತೆಗೆ ಮತ್ತಷ್ಟು ಬಲಿಷ್ಟ ರಾಷ್ಟ್ರವನ್ನಾಗಿಸುತ್ತಾರೆ. ಇನ್ನೂ ನರೇಂದ್ರ ಮೋದಿ ಅವರ ಜನ್ಮದಿನದ ಅಂಗವಾಗಿ ತಾಲ್ಲೂಕಿನ ಹೋಬಳಿ ಮಟ್ಟದಲ್ಲಿ ಹಲವು ರೀತಿಯ ಸೇವಾ ಕಾರ್ಯಗಳನ್ನು ಹಮ್ಮಿಕೊಳ್ಳಲಿದ್ದು ನಮ್ಮ ಕಾರ್ಯಕರ್ತರು ಸಕ್ರಿಯವಾಗಿ ಪಕ್ಷದ ಚಟುವಟಿಕೆಗಳಲ್ಲಿ ಭಾಗವಹಿಸಬೇಕು ಎಂದರು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವೇಣುಗೋಪಾಲ್, ಅಗ್ರಿ ನಾರಾಯಣಪ್ಪ, ಟಿಬಿ ಕೃಷ್ಣಪ್ಪ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಚಿನ್ನಸ್ವಾಮಿ ಗೌಡ, ಪ್ರಧಾನ ಕಾರ್ಯದರ್ಶಿ ಕೃಷ್ಣ ಮೂರ್ತಿ, ಪದ್ಮಾವತಿ, ಅನಿತಾ ನಾಗರಾಜ್, ಸೋಮಣ್ಣ, ವೆಂಕಟೇಶ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *