ಮಾಲೂರು: ತಾಲ್ಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ವಸಂತಮ್ಮ, ಉಪಾಧ್ಯಕ್ಷರಾಗಿ ಸಿದ್ದನಹಳ್ಳಿ ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರೆ.

ಮಾಲೂರು: ತಾಲ್ಲೂಕಿನ ಲಕ್ಕೂರು ಹೋಬಳಿಯ ಜಯಮಂಗಲ ಗ್ರಾಮ ಪಂಚಾಯಿತಿಯ ಎರಡನೇ ಅವಧಿಗೆ ಅಧ್ಯಕ್ಷರಾಗಿ ವಸಂತಮ್ಮ, ಉಪಾಧ್ಯಕ್ಷರಾಗಿ ಸಿದ್ದನಹಳ್ಳಿ ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆಯಾಗಿದ್ದರೆ.
ಜಿಲ್ಲಾಧಿಕರಿಗಳ ಅಧಿಸೂಚನೆಯಂತೆ ಗ್ರಾಮ ಪಂಚಾಯಿತಿಗಳ ಎರಡನೇ ಅವಧಿಗೆ ಅಧ್ಯಕ್ಷ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಮೀಸಲು ಪ್ರಕಟವಾಗಿ ಚುನಾವಣೆ ದಿನಾಂಕ ನಿಗಧಿಯಾದ ಹಿನ್ನಲೆ ಇಂದು ಜಯಮಂಗಲ ಗ್ರಾಮ ಪಂಚಾಯಿತಿಯಲ್ಲಿ ಸದರಿ ಅಧ್ಯಕ್ಷ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ಪ್ರಕ್ರಿಯೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ವಸಂತಮ್ಮ ಮತ್ತು ಉಪಾಧ್ಯಕ್ಷ ಸ್ಥಾನಕ್ಕೆ ಸಿದ್ದನಹಳ್ಳಿ ವೆಂಕಟೇಶ್ ಅವರು ನಾಮ ಪತ್ರ ಸಲ್ಲಿಸಿದ್ದು. ಎರಡು ಸ್ಥಾನಗಳಿಗೂ ತಲಾ ಒಂದೊAದು ನಾಮಪತ್ರ ಮಾತ್ರ ಬಂದಿದ್ದರಿAದ ಅಧ್ಯಕ್ಷರಾಗಿ ವಸಂತಮ್ಮ ಶಶಿಕುಮಾರ್ ಮತ್ತು ಉಪಾಧ್ಯಕ್ಷರಾಗಿ ಸಿದ್ದನಹಳ್ಳಿ ವೆಂಕಟೇಶ್ ಅವರು ಅವಿರೋಧವಾಗಿ ಆಯ್ಕೆ ಯಾಗಿದ್ದರೆ ಎಂದು ಚುನಾವಣೆ ಅಧಿಕಾರಿ ಬೈರಾರೆಡ್ಡಿ ಘೋಷಿಸಿದರು.
ಗ್ರಾಮ ಪಂಚಾಯಿತಿ ನೂತನ ಅಧ್ಯಕ್ಷೆ ವಸಂತಮ್ಮ ಶಶಿಕುಮಾರ್ ಅವರು ಮಾತನಾಡಿ ಎಲ್ಲಾ ಸದಸ್ಯರ ಸಹಕಾರದಿಂದ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲಾ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಕ್ಕೆ ಆದ್ಯತೆ ನೀಡಿ ಗ್ರಾಮಗಳನ್ನು ಅಭಿವೃದ್ಧಿ ಪಡಿಸಲಾಗುವುದು ಮುಂದಿನ ದಿನಗಳಲ್ಲಿ ಮಾದರಿ ಗ್ರಾಪಂ ನಿರ್ಮಾಣ ಮಾಡುವ ದೃಢ ಸಂಕಲ್ಪನನ್ನಾದಾಗಿದೆ ಎಂದರು.
ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಸಿದ್ದನಹಳ್ಳಿ ವೆಂಕಟೇಶ್ ಅವರು ಮಾತನಾಡಿ ಪಂಚಾಯಿತಿಯ ಎಲ್ಲಾ ಗ್ರಾಮಗಳಲ್ಲಿ ಕುಡಿಯುವ ನೀರು, ಚರಂಡಿ ವ್ಯವಸ್ಥೆ, ಸಿಸಿ ರಸ್ತೆ ಅಭಿವೃದ್ಧಿಗೊಳಿಸಲು ಎಲ್ಲರ ಜೊತೆ ಗೂಡಿ ಪ್ರಮಾಣಿಕವಾಗಿ ಶ್ರಮಿಸುತ್ತೇನೆ ನಮಗೆ ಅವಕಾಶ ಮಾಡಿ ಕೊಟ್ಟ ಎಲ್ಲಾ ಸದಸ್ಯರಿಗೂ, ಮುಖಂಡರಿಗೂ ಧನ್ಯವಾದಗಳನ್ನು ಅರ್ಪಿಸುತ್ತೇನೆ ಎಂದರು.
ಈ ಸ0ದರ್ಭದಲ್ಲಿ ಗ್ರಾಮ ಪಂಚಾಯಿತಿ ಸದಸ್ಯರಾದ ಮುರಳಿ, ಶಿವಶಂಕರ್, ಕವಿತ, ವೆಂಕಟಲಕ್ಷ್ಮಮ್ಮ, ರಾಧಮ್ಮ, ಮಂಜುನಾಥ್, ಶ್ರೀನಿವಾಸ್, ಸೋಮ ಶೇಖರ್, ಮುಖಂಡರಾದ ರಘುನಾಥ್, ಶಶಿ ಕುಮಾರ್, ಅಂಜಿನಪ್ಪ ಗೋಣುರು, ಪಿಡಿಒ ಲೋಕೇಶ್ ಸೇರಿದಂತೆ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *