ಮಾಲೂರು ತಾಲ್ಲೂಕಿನ ಪಡುವನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮ.

ಮಾಲೂರು ತಾಲ್ಲೂಕಿನ ಪಡುವನಹಳ್ಳಿ ಗ್ರಾಮದಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ನಮ್ಮ ಊರು ನಮ್ಮ ಕೆರೆ ಕಾಮಗಾರಿಯ ಗುದ್ದಲಿ ಪೂಜೆ ಕಾರ್ಯಕ್ರಮದಲ್ಲಿ ತಾಲೂಕಿನ ಯೋಜನಾಧಿಕಾರಿಗಳಾದ ಸತೀಶ್ ಎಚ್ ಮಾತನಾಡಿ ಧರ್ಮಸ್ಥಳದ ಧರ್ಮಧಿಕಾರಿಗಳಾದ ಡಾಕ್ಟರ್ ಡಿ .ವೀರೇಂದ್ರ ಹೆಗಡೆ ಅವರ ಆಶಯದಂತೆ ನಮ್ಮ ರಾಜ್ಯದ ಪ್ರತಿ ಗ್ರಾಮ ಮಟ್ಟದಲ್ಲಿ ನಮ್ಮ ಊರು ನಮ್ಮ ಕೆರೆ ಕಾರ್ಯಕ್ರಮದ ಅಡಿಯಲ್ಲಿ ಪಡುವನಹಳ್ಳಿ ಗ್ರಾಮದ ಆವರೆಗೌಡನ ಕೆರೆಯನ್ನು ಪುನಶ್ಚೇತನಗೊಳಿಸಿ ಅಂತರ್ಜಲ ಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ಸಹಕಾರ ಮಾಡುತ್ತದೆ. ಕೃಷಿ ಮಾಡಲು ಈ ಕೆರೆಯ ಮಣ್ಣನು ಬಳಕೆ ಮಾಡಿದರೆ ಉತ್ತಮ ಫಸಲು ಪಡೆಯಬಹುದು. ಮತ್ತು ಕೆರೆಯ ಅಕ್ಕ ಪಕ್ಕ ಜಮೀನಿನ ಬೋರವೆಲ್ ನೀರಿನ ಪ್ರಮಾಣ ಹೆಚ್ಚು ಮಾಡುವುದು. ದನ ಕರು ಎಮ್ಮೆ ಕುರಿ ಮೇಕೆಗಳಿಗೆ ನೀರು ಕುಡಿಯಲು ಉಪಯುಕ್ತ ವಾಗುತ್ತದೆ. ಎಂದು ಹೇಳಿದರು. ಲಾಯರ್ ಚಂದ್ರಪ್ಪ ಮಾತನಾಡಿ ಧರ್ಮಸ್ಥಳದ ಧರ್ಮಾಧಿಕಾರಿಯವರು ನಮ್ಮ ಊರಿಗೆ ಕೆರೆ ಕಾಮಗಾರಿಯನ್ನು ಆಯ್ಕೆ ಮಾಡಿರುವುದು ಸಂತೋಷದ ಸಂಗತಿ ಎಂದರು. ಈ ಸಂದರ್ಭದಲ್ಲಿ ಬೆಂಗಳೂರು ಪ್ರಾದೇಶಿಕ ವ್ಯಾಪ್ತಿಯ ಕೆರೆ ಅಭಿಯಂತರು. ಅರುಣ್. ಕೆರೆ ಸಮಿತಿ ಅಧ್ಯಕ್ಷರು ಶ್ರೀ ರಾಮಪ್ಪ . ಪಂಚಾಯಿತಿ ಸದಸ್ಯರಾದ ಮುನಿಯಪ್ಪ. ತಾಲೂಕಿನ ಕೃಷಿ ಅಧಿಕಾರಿ ಮಧುರಾಜ್. ಮೇಲ್ವಿಚಾರಕರಾದ .ರಂಜಿತ್ ಸಮಿತಿ ಸದಸ್ಯರಾದ. ನರಸಿಂಹಯ್ಯ. ರಮೇಶ್.ಜಯಲಕ್ಷ್ಮಮ್ಮ. ಕಂತಮ್ಮ. ಕವಿತಾ. ಲಾಯರ್ . ಚಂದ್ರಪ್ಪ. ವೆಂಕಟೇಶ .ಹಾಗೂ ಸೇವಾಪ್ರತಿನಿಧಿಗಳು ಭಾಗವಹಿಸಿದರು .

Leave a Reply

Your email address will not be published. Required fields are marked *