ಮಾಲೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಕನ್ನಡ ಪರ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಾಲೂರು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.

ಮಾಲೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವುದನ್ನು ವಿರೋಧಿಸಿ ಶುಕ್ರವಾರ ಕನ್ನಡ ಪರ ಒಕ್ಕೂಟ ಕರೆ ನೀಡಿದ್ದ ಕರ್ನಾಟಕ ಬಂದ್ ಗೆ ಮಾಲೂರು ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ದೊರಕಿದೆ.
ಕರ್ನಾಟಕ ಬಂದ್ ಗೆ ತಾಲ್ಲೂಕಿನ ಕನ್ನಡ ಪರ, ದಲಿತಪರ, ರೈತಪರ, ಪ್ರಗತಿ ಪರ ಚಿಂತಕರು ಬಬೆಂಬಲಿಸಿದ್ದು. ಅಂಗಡಿ ಮಾಲೀಕರು ಸ್ವಯಂ ಪ್ರೇರಿತವಾಗಿ ಅಂಗಡಿ ಮುಗ್ಗಟ್ಟುಗಳನ್ನು ಮುಚ್ಚಿ ಬಂದ್ ಸಹಕರಿಸಿದ್ದು ಮುಂಜಾನೆ ಇಂದಲೇ ಪಟ್ಟಣದ ಕೆಂಪೇಗೌಡ ವೃತ್ತದಲ್ಲಿ ಜಮಾಯಿಸಿದ ಹೋರಾಟಗಾರರು ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರ ಹಾಗೂ ತಮಿಳು ನಾಡು ಸರ್ಕಾರಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. “ಕಾವೇರಿ ನಮ್ಮದು”, “ಪ್ರಾಣವನ್ನು ಬಿಡುತ್ತೇವೆ ಕಾವೇರಿಯನ್ನು ಬಿಡುವುದಿಲ್ಲ ” ಎಂದು ಘೋಷಣೆ ಕೂಗುತ್ತಾ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಸಾಗಿ ತಾಲ್ಲೂಕು ಕಛೇರಿಗೆ ಬಂದು ಕಾವೇರಿ ನೀರನ್ನು ತಮಿಳು ನಾಡಿಗೆ ಹರಿಸಬಾರದು ಎಂದು ತಾಲ್ಲೂಕು ದಂಡಾಧಿಕಾರಿಗಳ ಮೂಲಕ ರಾಜ್ಯ ಪಾಲರಿಗೆ ಮತ್ತು ಮುಖ್ಯ ಮಂತ್ರಿಗಳಿಗೆ ಮನವಿ ಪತ್ರ ನೀಡಿದರು. ಈ ವೇಳೆ ಮಾತನಾಡಿದ ತಾಲ್ಲೂಕು ಕನ್ನಡ ಪರ ಒಕ್ಕೂಟದ ಅಧ್ಯಕ್ಷ ಎಂ.ವಿ.ಹನುಮಂತಯ್ಯ ಅವರು ಕಾವೇರಿ ನಮ್ಮ ಕನ್ನಡಿಗರ ಅಸ್ಮಿತೆ ಹಾಗೂ ಸ್ವಾಭಿಮಾನ ಕಾವೇರಿ ನದಿಗೆ ಆಗಿನ ಕಾಲದಲ್ಲಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ತಮ್ಮ ಸ್ವಂತವಾಗಿ ಕನ್ನಂಬಾಡಿ ಅಣೆಕಟ್ಟೆ ಕಟ್ಟಿಸಿ ನಮ್ಮ ರಾಜ್ಯದ ಜನತೆಗೆ ಅನುಕೂಲ ಕಲ್ಪಿಸಿದೆ ಅದಕ್ಕೂ ಕಾವೇರಿ ನಮ್ಮ ಹಳೇ ಮೈಸೂರು ಭಾಗದ ಜನತೆಗೆ ಜೀವ ನಾಡಿಯಾಗಿದ್ದು. ರಾಜ್ಯ ಬಹುತೇಕ ರೈತರು ಕಾವೇರಿ ನದಿಯ ನೀರಿನ ಮೇಲೆ ಅವಲಂಬಿತರಾಗಿದ್ದು, ಸುಮಾರು ಒಂದು ಕೋಟಿಗೂ ಹೆಚ್ಚು ಜನರಿರುವ ರಾಜ್ಯ ರಾಜಧಾನಿಯಲ್ಲಿ ಕುಡಿಯುವ ನೀರಿಗೆ ಕಾವೇರಿ ನದಿ ನೀರು ಜಜೀವಜಲವಾಗಿದೆ. ಪ್ರಸ್ತುತ ಕರ್ನಾಟಕದಲ್ಲಿ ಮುಂಗಾರು ಮಳೆ ಇಲ್ಲದೆ ಎಲ್ಲಾ ನದಿಗಳು ಬತ್ತಿ ಹೋಗಿವೆ. ಇನ್ನೂ ರೈತರ ಬೆಳೆಗಳು ಮಳೆ ಇಲ್ಲದೆ ಒಣಗಿದೆ. ಸರ್ಕಾರ ಈಗಾಗಲೇ 169 ತಾಲ್ಲೂಕುಗಳನ್ನು ಬರಪೀಡಿತ ಪ್ರದೇಶವನ್ನಾಗಿ ಘೋಷಿಸಿದೆ. ರಾಜ್ಯದಲ್ಲಿ ಕುಡಿಯಲು ನೀರು ಇಲ್ಲದೆ ಸಂಕಷ್ಟಕ್ಕೆ ಸಿಲುಕಿ ಸರ್ಕಾರಗಳ ಕಡೆ ಮುಖ ಮಾಡಿವೆ. ಈಗಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ಅಧೀನದಲ್ಲಿರುವ ಕಾವೇರಿ ನಿರ್ವಹಣಾ ಪ್ರಾಧಿಕಾರಕ್ಕೆ ತಮಿಳುನಾಡು ಮತ್ತು ಕರ್ನಾಟಕ ರಾಜ್ಯಗಳೆರಡು ನೀರಿಗಾಗಿ ಮನವಿ ಮಾಡಿದಾಗ ಹವಾಮಾನ ಇಲಾಖೆಯು ಕೇಂದ್ರದ ಅಧೀನದಲ್ಲಿದ್ದರೂ ರಾಜ್ಯದಲ್ಲಿ ಮುಂಗಾರು ಮುಗಿದಿದ್ದು ಮಳೆ ಕೈ ಕೊಟ್ಟಿರುವುದನ್ನು ಮತ್ತು ತಮಿಳುನಾಡಿನಲ್ಲಿ ಕೆಲವೇ ದಿನಗಳಲ್ಲಿ ಹಿಂಗಾರು ಮಳೆ ಪ್ರಾರಂಭ ವಾಗಲಿದ್ದು ತಮಿಳುನಾಡಿನ ಡ್ಯಾಂಗಳು ತುಂಬುವ ಸಾಧ್ಯತೆ ಇದ್ದರು. ಪ್ರಾಧಿಕಾರದ ಅಧಿಕಾರಿಗಳು ಇದ್ಯಾವುದನ್ನು ಪರಿಗಣಿಸದೆ ಸರಿಯಾದ ಮಾಹಿತಿ ತೆಗೆದುಕೊಳ್ಳದೆ ಇದ್ದು. ಸುಪ್ರೀಂಕೋರ್ಟ್ ಹಾಗೂ ಕಾವೇರಿ ನಿರ್ವಹಣಾ ಪ್ರಾಧಿಕಾರ ನೀರು ಹರಿಸುವಂತೆ ರಾಜ್ಯಕ್ಕೆ ಆದೇಶ ಸಹಿತ ಸೂಚನೆ ನೀಡಿದ್ದು, ಇದು ಕನ್ನಡಿಗರ ಆಕ್ರೋಶಕ್ಕೆ ಗುರಿಯಪಡಂಸಂ ಸುಪ್ರೀಂಕೋರ್ಟ್ ಆದೇಶದಂತೆ ನೀರು ಹರಿಸಿದರೆ ನಮ್ಮ ರಾಜ್ಯದ ರೈತರು ಬೀದಿಪಲಾಗಲಿದ್ದು , ಇದನ್ನು ವಿರೋಧಿಸಿ ಇಂದು ಕರ್ನಾಟಕ ಬಂದ್ ಮಾಡುತ್ತಿದ್ದು ಇದಕ್ಕೆ ಕಾಂಗ್ರೆಸ್ ಸರ್ಕಾರ ಕೂಡ ಬೆಂಬಲಿಸ ಬೇಕಾಗಿತ್ತು ಆದರೆ ಕೊಡಲಿಲ್ಲ. ಇಂದಿನ ಹೋರಾಟದಿಂದ ಕೇಂದ್ರಕ್ಕೆ ಕನ್ನಡಿಗರ ಸ್ವಾಭಿಮಾನವನ್ನುವನ್ನು ಮುಟ್ಟುಸುತ್ತಿದ್ದು. ಈ ಬಂದ್ ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದಗಳನ್ನು ಸಲ್ಲಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕರ್ನಾಟಕ ಪ್ರಜಾ ವೇದಿಕೆ ಮಂಜುನಾಥ್ ಗೌಡ, ನಮ್ಮ ಕರ್ನಾಟಕ ಸೇನೆಯ ಚಾಕನಹಳ್ಳಿ ನಾಗರಾಜ್ , ತಾಲ್ಲೂಕು ಅಧ್ಯಕ್ಷ ಎಸ್.ಎಂ.ರಾಜು, ಕರವೇ ಪ್ರವೀಣ್ ಶೆಟ್ಟಿ ಬಣದ ತಾಲ್ಲೂಕು ಅಧ್ಯಕ್ಷ ಶಿವಾರ ನಾರಾಯಣಸ್ವಾಮಿ, ಎ.ಎನ್.ದಯಾನಂದ್, ದಲಿತ ನಾಗರೀಕ ಸಮಿತಿ ರಾಜ್ಯಾಧ್ಯಕ್ಷ ಕೋಡೂರು ಗೋಪಾಲ್, ದಲಿತ ಸಿಂಹ ಸೇನೆ ಕರ್ನಾಟಕ ರಾಜ್ಯಾಧ್ಯಕ್ಷ ತಿಪ್ಪಸಂದ್ರ ಶ್ರೀನಿವಾಸ್, ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ಚವ್ವೇನಹಳ್ಳಿ ವಿಜಿ, ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ , ದಿನೇಶ್ ಗೌಡ, ನಂಜುಂಡಪ್ಪ ಪಾಸ್ವಾನ್, ಕೆ.ಮುನಿಕೃಷ್ಣಪ್ಪ, ಆಟೋ ಶ್ರೀನಿವಾಸ್, ಕಸ್ತೂರಿ ಶ್ರೀನಿವಾಸ್ ಸೇರಿದಂತೆ ಅನೇಕ ಕನ್ನಡ ಪರ, ದಲಿತ ಪರ, ರೈತ ಪರ ಸಂಘಟನೆಗಳ ಮುಖಂಡರು, ಇನ್ನಿತರರು ಇದ್ದರು. ಸಂತೋಷ್ syn . ಘರ್ಜನೆ ಟಿವಿ

Leave a Reply

Your email address will not be published. Required fields are marked *