ಮಾಲೂರು : ಚಿಕ್ಕತಿರುಪತಿ ಗ್ರಾಮದಿಂದ ಲಕ್ಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಗಳಿAದ ಕೂಡಿ ಹದಗಟ್ಟಿದ್ದು, ರಸ್ತೆಯನ್ನು ದುರಸ್ತಿ ಪಡಿಸಿ ಡಾಂಬರೀಕರಣಗೊಳಿಸುವAತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಮತ್ತು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಚಿಕ್ಕತಿರುಪತಿಯಿಂದ ಲಕ್ಕೂರು ಗ್ರಾಮದ ವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದರು.

ಮಾಲೂರು : ಚಿಕ್ಕತಿರುಪತಿ ಗ್ರಾಮದಿಂದ ಲಕ್ಕೂರಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಗುಂಡಿಗಳಿAದ ಕೂಡಿ ಹದಗಟ್ಟಿದ್ದು, ರಸ್ತೆಯನ್ನು ದುರಸ್ತಿ ಪಡಿಸಿ ಡಾಂಬರೀಕರಣಗೊಳಿಸುವAತೆ ಒತ್ತಾಯಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಸಂಘಟನೆ ಮತ್ತು ಆಮ್ ಆದ್ಮಿ ಪಾರ್ಟಿ ಕಾರ್ಯಕರ್ತರು ಚಿಕ್ಕತಿರುಪತಿಯಿಂದ ಲಕ್ಕೂರು ಗ್ರಾಮದ ವರೆಗೆ ಕಾಲ್ನಡಿಗೆ ಜಾಥಾವನ್ನು ಹಮ್ಮಿಕೊಂಡಿದ್ದರು.
ಈ ಕುರಿತು ಮಾತನಾಡಿದ ಕದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್ ಅವರು ತಾಲ್ಲೂಕಿನ ಪ್ರಸಿದ್ದ ಯಾತ್ರಾ ಸ್ಥಳವಾದ ಚಿಕ್ಕತಿರುಪತಿಗೆ ಸಂಪರ್ಕ ಕಲ್ಪಿಸುವ ರಸ್ತೆಯು ಡಾಂಬರು ಕಿತ್ತು ಹೋಗುವ ಮೂಲಕ ಬೃಹದಾಕಾರದ ಗುಂಡಿಗಳು ಬಿದ್ದು ಹದಗೆಟ್ಟಿದೆ. ಈ ರಸ್ತೆಯಲ್ಲಿ ಪ್ರತಿನಿತ್ಯ ಸಾವಿರಾರು ಜನರು ಶ್ರೀ ಪುಣ್ಯ ಕ್ಷೇತ್ರ ಚಿಕ್ಕತಿರುಪತಿ ಪ್ರಸನ್ನ ವೆಂಕಟರಮಣ ಸ್ವಾಮಿ ದರ್ಶನಕ್ಕೆ ಮತ್ತು ರಾಜಧಾನಿ ಬೆಂಗಳೂರಿಗೆ ಕೆಲಸ ಕಾರ್ಯನಿಮಿತ್ತ ಚಲಿಸುತ್ತಿದ್ದು,ಈ ರಸ್ತೆಯು ಗುಂಡಿಗಳ ಜೊತೆಗೆ ದೂಳಿನಿಂದ ಕೂಡಿದ್ದು ಯಾವುದೇ ವಾಹನ ಹೋದರೂ ಹಿಂದೆ ಬಹಳ ಎತ್ತರದವರೆಗೂ ದೂಳು ಏಳುತ್ತದೆ. ಹೀಗಾಗಿ ಈ ರಸ್ತೆಯಲ್ಲಿ ಸಂಚರಿಸುವ ದ್ವಿಚಕ್ರ ವಾಹನ ಸವಾರರಿಗೆ ಮತ್ತು ಪಾದಚಾರಿಗಳಿಗೆ ತುಂಬಾ ತೊಂದರೆ ಉಂಟಾಗುತ್ತಿದೆ. ಅದಲ್ಲದೆ ದೂಳಿನ ಗಾಳಿ ಸೇವಿಸುವುದರಿಂದ ಆಸ್ತಮಾ, ಅಲಾರ್ಜಿ ಮುಂತಾದ ರೋಗಗಳು ಬರುವ ಸಾಧ್ಯತೆಗಳು ಹೆಚ್ಚಾಗಿದೆ. ಇನ್ನೂ ಪ್ರಸ್ತುತ ಶ್ರವಣಮಾಸದ ಪ್ರಯುಕ್ತ ತಾಲ್ಲೂಕಿನ ಪ್ರಸಿದ್ದ ಪ್ರವಾಸಿ ತಾಣ ಮತ್ತು ಪುಣ್ಯ ಕ್ಷೇತ್ರವಾದ ಚಿಕ್ಕತಿರುಪತಿಗೆ ರಾಜ್ಯದಾದ್ಯಂತ ಸೇರಿದಂತೆ ನೆರೆಯ ತಮಿಳು ನಾಡು, ಆಂಧ್ರಪ್ರದೇಶದಿAದ ಭಕ್ತರು ಬರುತ್ತಿದ್ದು ರಸ್ತೆಯನ್ನು ಸರಿಪಡಿಸಲು ಇಲಾಖೆಯು ಯಾವುದೆ ಕ್ರಮ ಕೈಗೊಳ್ಳದೆ ಇರುವುದು ಶೋಚನೀಯ ಬಗ್ಗೆ ಅನೇಕ ಬಾರಿ ಲೋಕೋಪಯೋಗಿ ಇಲಾಖೆಯವರಿಗೆ, ತಹಸಿಲ್ದಾರರಿಗೆ ಮನವಿಯನ್ನು ಸಲ್ಲಿಸಿದುರೂ ಯಾವುದೆ ಪ್ರಯೋಜನೆ ಆಗಿರುವುದಿಲ್ಲ ಆದುದ್ದರಿಂದ ಇಂದು ನಮ್ಮ ಸಂಘಟನೆಯು ಚಿಕ್ಕತಿರುಪತಿಯಿಂದ ಲಕ್ಕೂರಿನವರಗೆ ಪದಯಾತ್ರೆಯ ಮೂಲಕ ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ಪತ್ರ ನೀಡಿದ್ದು ನಮ್ಮ ಮನವಿಯನ್ನು ಕಡೆಗಣಿಸಿದಲ್ಲಿ ಮುಂದಿನ ದಿನಗಳಲ್ಲಿ ರಸ್ತೆ ತಡೆದು ಉಗ್ರ ಹೋರಾಟ ಮಾಡಲಾಗುವುದು ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಚಾಲಕ ಎಕೆ ವೆಂಕಟೇಶ್, ಕೆ.ಆರ್ ಮುನಿಯಪ್ಪ, ಎಎಪಿ ಜಿಲ್ಲಾಧ್ಯಕ್ಷ ರವಿಶಂಕರ್, ಮಾಜಿ ಸಂಸದ ಡಾ.ವೆಂಕಟೇಶ್, ಸುರೇಶ್, ಪುರ ವೆಂಕಟ್, ಸೋಮಶೇಖರ್, ಅಜಯ್, ತಿಮ್ಮರಾಜು, ಲಕ್ಕೂರು ವೆಂಕಟ್, ಬರಗೂರು ಅನಿಲ್, ಲಕ್ಕೂರು ರಮೇಶ್, ಬರಗೂರು ಮಂಜುನಾಥ್ ನಿವೃತ್ತ ಶಿಕ್ಷಕರಾದ ಮುನಿಕೃಷ್ಣಪ್ಪ, ರೇವಣ್ಣ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *