ಮಾಲೂರು: ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆ ಕಂಡು ಬಂದರೆ ಬೀಟ್ ಪೊಲೀಸರ ಗಮನಕ್ಕೆ ತಂದರೆ ಸ್ಥಳೀಯವಾಗಿ ನಿಮ್ಮ ಸಮಸ್ಯೆ ಪರಿಹಾರ ನೀಡಲು ಸಹಕರಿಸುತ್ತಾರೆ ಎಂದು ಮಾಲೂರು ಆರಕ್ಷಕ ವೃತ್ತ ನಿರೀಕ್ಷಕ ಚಂದ್ರಾಧರ್ ಅವರು ತಿಳಿಸಿದರು.

ಮಾಲೂರು: ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು, ಏನಾದರೂ ಸಮಸ್ಯೆ ಕಂಡು ಬಂದರೆ ಬೀಟ್ ಪೊಲೀಸರ ಗಮನಕ್ಕೆ ತಂದರೆ ಸ್ಥಳೀಯವಾಗಿ ನಿಮ್ಮ ಸಮಸ್ಯೆ ಪರಿಹಾರ ನೀಡಲು ಸಹಕರಿಸುತ್ತಾರೆ ಎಂದು ಮಾಲೂರು ಆರಕ್ಷಕ ವೃತ್ತ ನಿರೀಕ್ಷಕ ಚಂದ್ರಾಧರ್ ಅವರು ತಿಳಿಸಿದರು.

ಪಟ್ಟಣದ ಪೊಲೀಸ್‍ಠಾಣೆಯ ಆವರಣದಲ್ಲಿ ಪೊಲೀಸ್ ಇಲಾಖೆ ವತಿಯಿಂದ ಏರ್ಪಡಿಸಲಾಗಿದ್ದ ದಲಿತರ ಕುಂದು ಕೊರತೆಗಳ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಗ್ರಾಮೀಣ ಪ್ರದೇಶದಲ್ಲಿ ಪ್ರತಿಯೊಬ್ಬರು ಅಪರಿಚಿತ ವ್ಯಕ್ತಿಗಳ ಬಗ್ಗೆ ನಿಗಾವಹಿಸಬೇಕು. ದಲಿತ ಕೇರಿಗಳಲ್ಲಿ ಅಕ್ರಮ ಮಧ್ಯ ಮಾರಾಟ ಮತ್ತು ಗ್ರಾಮಗಳಲ್ಲಿ ಯಾವುದಾದರೂ ಸಮಸ್ಯೆಗಳು ಇದ್ದರೆ ಗ್ರಾಮ ಬೀಟ್ ಪೊಲೀಸ್ ಜೊತೆ ದಲಿತ ಮುಖಂಡರು ನಿರಂತರ ಸಂಪರ್ಕದಲ್ಲಿದ್ದು ಅವರ ಗಮನಕ್ಕೆ ತಂದರೆ ನಿಮ್ಮ ಸಮಸ್ಯೆಗಳನ್ನು ಪರಿಹರಿಸಲು ಸಹಾಕರಿಸುತ್ತಾರೆ. ಪೋಷಕರು ತಮಗೆ ಎಷ್ಟೇ ಕೆಲಸದ ಒತ್ತಡಗಳಿದ್ದರೂ ಮಕ್ಕಳು ಸರಿಯಾಗಿ ಶಾಲೆ ಕಾಲೇಜುಗಳಿಗೆ ಹೋಗುತ್ತಿರುವರ ಇಲ್ಲವ ಎಂದು ಅವರ ಮತ್ತು ಅವರ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ನೀತಿ ಬೋಧನೆ ಮಾಡಬೇಕು ಈ ವೇಳೆಯೇ ಅನೇಕರು ದಾರಿತಪ್ಪುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗೇ ಕಡ್ಡಾಯವಾಗಿ ಉತ್ತಮ ಶಿಕ್ಷಣ ಕೊಡಿಸಿ ಹಾಗೇ ಇನ್ನೂ ಕಾಲ ಕಾಲಕ್ಕೆ ಸರಿಯಾಗಿ ದಲಿತ ಕುಂದು ಕೊರತೆ ಸಭೆಗಳು ಠಾಣ ಮಟ್ಟದಲ್ಲಿ ಪ್ರತಿ ತಿಂಗಳ ಮೂರನೇ ಭಾನುವಾರ ಮಾಡಲಾಗುತ್ತದೆ ಹಾಗೇ ದಲಿತ ಕೇರಿಗಳಲ್ಲಿ ಈ ಸಭೆಗಳನ್ನು ನಡೆಸಲಾಗುವುದು ಎಂದರು.
ಈ ವೇಳೆ ಮಾತನಾಡಿದ ದಮನಿತರ ಸಂಘರ್ಷ ಸಮಿತಿ ಸಂಸ್ಥಾಪಕ ಫ್ರೆಂಡ್ಸ್ ಸಂತೋಷ್ ಅವರು ತಾಲ್ಲೂಕಿನ ಅಗ್ರಹಾರ ಹೊಸಹಳ್ಳಿ ಗ್ರಾಮದ ಭಾಗ್ಯಮ್ಮ ಅವರಿಗೆ ಸ್ಥಳೀಯ ಗ್ರಾಮಸ್ಥರಿಂದ ತುಂಬಾ ತೊಂದರೆ ಉಂಟಾಗಿದ್ದು ಅವರು ಸುಮಾರು ಎರಡು ತಿಂಗಳಿಂದ ಪೊಲೀಸ್ ಠಾಣೆ ಹತ್ತಿರ ಬಂದು ಸಮಸ್ಯೆ ತೋಡಿಕೊಂಡರು ಸಮಸ್ಯೆ ಬಗೆಹರಿದಿಲ್ಲ. ಅವರ ಮನೆಯ ಹತ್ತಿರ ಮುಚ್ಚಿರುವ ಚರಂಡಿಗಳನ್ನು ತೆರೆವು ಮಾಡಿಸಲು ತಾವುಗಳು ಸಂಬಂಧ ಪಟ್ಟ ಪಿಡಿಒ ಮತ್ತು ಇಒ ಅವರ ಬಳಿ ಚರ್ಚಿಸಿ ಆಕೆಯ ಸಮಸ್ಯೆಯನ್ನು ಬೇಗ ಪರಿಹರಿಸಬೇಕು ತೊಂದರೆ ಕೊಟ್ಟವರ ವಿರುದ್ದ ಕ್ರಮ ವಹಿಸಬೇಕು ಇದಕ್ಕೆ ಎಲ್ಲರ ಸಹಕಾರ ನೀಡಲಾಗುವುದು ಎಂದು ಸಭೆಯಲ್ಲಿ ಪ್ರಸ್ತಾಪಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಲಿತ ಸಂಘರ್ಷ ಸಮಿತಿ ತಾಲ್ಲೂಕು ಸಂಚಾಲಕ ಎಸ್ ಎಂ ವೆಂಕಟೇಶ್ ಅವರು ಪಟ್ಟಣದ ಹಾರೋಹಳ್ಳಿ ಕ್ರಾಸ್ ನಿಂದ ರೈಲ್ವೇಪಿಡರ್ ವರೆಗೆ ಡಾ. ಬಿ.ಆರ್ ಅಂಬೇಡ್ಕರ್ ರಸ್ತೆ ಎಂದು ನಾಮಕರಣಗೊಳಿಸಬೇಕು ಎನ್ನುವ ನಮ್ಮ ದಲಿತ ಸಮುದಾಯದ ಬಹುದಿನಗಳ ಬೇಡಿಕೆ ಇನ್ನೂ ಈಡೇರಲಿಲ್ಲ ಕಳೆದ 20 ವರ್ಷಗಳಿಂದ ಪುರಸಭೆ, ತಾಲ್ಲೂಕು ಆಡಳಿತ ಪೊಲೀಸ್ ಠಾಣೆಗೆ ಮನವಿ ಪತ್ರ ಸಲ್ಲಿಸಿದ್ದು ಪುರಸಭೆಯಲ್ಲಿ ನಿರ್ಣಯವಾದರೂ ಇನ್ನೂ ಆಗಲಿಲ್ಲ ಈ ಬಗ್ಗೆ ನೀವು ಪುರಸಭೆ ಹತ್ತಿರ ಚರ್ಚಿಸಿ ಕ್ರಮ ಕೈಗೊಳ್ಳಲು ಮುಂದಾಗಬೇಕು ಇನ್ನೂ ಪಟ್ಟಣದ ಕಾಲೇಜು ಹಾಸ್ಟಲ್ ಗಳಲ್ಲಿ ದಾಖಲಾಗದೇ ಇರುವವರು ಹೆಚ್ಚಾಗಿದ್ದು ನೀವು ಹಾಗಾಗ ಬೀಟ್ ಹೋಗಿ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದರು.
ಸಭೆಯಲ್ಲಿ ಭಾಗಿಯಾಗಿದ್ದ ಅನೇಕ ದಲಿತ ಮುಖಂಡರು ಹಲವಾರು ಸಮಸ್ಯೆ ಗಳನ್ನು ಸಭೆಯಲ್ಲಿ ಪ್ರಸ್ತಾಪಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಐ ಚಂದ್ರಾಧರ್ ಅವರು ಸಭೆಯಲ್ಲಿ ಮುಖಂಡರು ತಿಳಿಸಿದಹಾಗೆ ಹೊಸಹಳ್ಳಿ ಅಗ್ರಹಾರದ ಭಾಗ್ಯಮ್ಮನವರ ಸಮಸ್ಯೆ ಈಗಾಗಲೇ ಗಮನಕ್ಕೆ ಬಂದಿದ್ದು ಇಒ ಮತ್ತು ಪಿಡಿಒ ಅವರ ಜೊತೆ ಚರ್ಚಿಸಿದ್ದು ಸೋಮವಾರ ಸ್ಥಳಕ್ಕೆ ಬೇಟಿ ನೀಡುತ್ತೇವೆ ಹಾಗೇ ಹಾಸ್ಟಲ್ ಗಳಿಗೆ ಬೇಟಿ ನೀಡುವುದು ಹಾಗೇ ಎಲ್ಲಾ ಸಮಸ್ಯೆಗಳನ್ನು ಬಗೆಹರಿಸಲಾಗುವುದು ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಸಮಿತಿ ಸದಸ್ಯ ವೆಂಕಟರಾಮ್, ಕರ್ನಾಟಕ ದಲಿತ ಸಿಂಹ ಸೇನೆ ತಿಪ್ಪಸಂದ್ರ ಶ್ರೀನಿವಾಸ್, ದಸಂಸ ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್, ಕೊಡುರು ಗೋಪಾಲ್, ಸಂಪಂಗೆರೆ ಅಶೋಕ್, ದಸಂಸ ತಾಲ್ಲೂಕು ಸಂಚಾಲಕ ಶೇಷಪ್ಪ, ಮುನಿರಾಜು, ಗೋವಿಂದ್, ವೆಂಕಟೇಶ್, ಶಿವಾರ ನಾರಾಯಣಸ್ವಾಮಿ, ಕಸ್ತೂರಿ ಶ್ರೀನಿವಾಸ್, ವೀಣಾ, ಮಂಜುನಾಥ್ ಸೇರಿದಂತೆ ಹಲವಾರು ದಲಿತ ಮುಖಂಡರು ಭಾಗಿಯಾಗಿದ್ದರು.

Leave a Reply

Your email address will not be published. Required fields are marked *