ಮಾಲೂರು: ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಮಹತ್ವಕಾಂಕ್ಷಿ ಯೋಜನೆಯಾದ ಯರಗೋಳ್ ಡ್ಯಾಮ್ ಉದ್ಘಾಟನೆಯನ್ನು ಇದೇ ತಿಂಗಳು 11ರಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು ಆ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 10,000 ಜನರು ಭಾಗವಹಿಸಬೇಕೆಂದು ಶಾಸಕ ಕೆ. ವೈ ನಂಜೇಗೌಡರು ಹೇಳಿದರು.

ಮಾಲೂರು: ಕೋಲಾರ ಜಿಲ್ಲೆಯ ಕುಡಿಯುವ ನೀರಿನ ಮಹತ್ವಕಾಂಕ್ಷಿ ಯೋಜನೆಯಾದ ಯರಗೋಳ್ ಡ್ಯಾಮ್ ಉದ್ಘಾಟನೆಯನ್ನು ಇದೇ ತಿಂಗಳು 11ರಂದು ಕರ್ನಾಟಕದ ಮಾನ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಉದ್ಘಾಟನೆ ಮಾಡಲಿದ್ದು ಆ ಕಾರ್ಯಕ್ರಮಕ್ಕೆ ತಾಲ್ಲೂಕಿನಿಂದ ಸುಮಾರು 10,000 ಜನರು ಭಾಗವಹಿಸಬೇಕೆಂದು ಶಾಸಕ ಕೆ. ವೈ ನಂಜೇಗೌಡರು ಹೇಳಿದರು.

ಪಟ್ಟಣದ ಕಾಂಗ್ರೆಸ್ ಕಚೇರಿಯಲ್ಲಿ ಯರಗೋಳ್ ಡ್ಯಾಮ್ ಉದ್ಘಾಟನೆಯ ಸಂಬಂಧ ಪೂರ್ವಭಾವಿ ಸಭೆ ಕರೆದು ಸುದ್ದಿ ಗಾರರೊಂದಿಗೆ ಮಾತನಾಡಿದ ಅವರು ಕೋಲಾರ ,ಬಂಗಾರಪೇಟೆ ಮತ್ತು ಮಾಲೂರು ನಗರಕ್ಕೆ ಕುಡಿಯುವ ನೀರು ಸರಬರಾಜು ಮಾಡಲು ರೂಪಿಸಿರುವ ಜಿಲ್ಲೆಯ ಮಹತ್ವಕಾಂಕ್ಷಿ ಯೋಜನೆ ಯರಗೋಳ್ ಡ್ಯಾಂ ಇದೇ ತಿಂಗಳು 11ರಂದು ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಲೋಕಾರ್ಪಣೆ ಮಾಡಲಿದ್ದಾರೆ. ಅವರೊಂದಿಗೆ ಉಪ ಮುಖ್ಯ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರು, ಇಲಾಖೆಯ ಸಚಿವರು, ಅಧಿಕಾರಿಗಳು ಹಾಗೂ ಜಿಲ್ಲೆಯ ಎಲ್ಲಾ ಶಾಸಕರು ,ಜನಪ್ರತಿನಿಧಿಗಳು ಭಾಗವಹಿಸುತ್ತಿದ್ದಾರೆ.

ಪೂರ್ವ ನಿಗದಿಯಂತೆ ಇದೇ ತಿಂಗಳು 10 ರಂದು ಕಾರ್ಯಕ್ರಮ ನಡೆಯಬೇಕಾಗಿದ್ದು ತೆಲಂಗಾಣ ಚುನಾವಣೆ ನಿಮಿತ್ತ 10ರ ಬದಲು 11ಕ್ಕೆ ನಿಗದಿಯಾಗಿದ್ದು ಅಂದು ಐತಿಹಾಸಿಕವಾಗಿ ಉದ್ಘಾಟನೆಗೊಳ್ಳಲಿದೆ.

ಬಹು ಕೋಟಿ ವೆಚ್ಚದ ಯೋಜನೆಯು 17 ವರ್ಷಗಳ ಹಿಂದೆ ಪ್ರಾರಂಭಗೊಂಡಿತ್ತು.ಯೋಜನೆಗೆ ಮೊದಲೇ ಬಿಜೆಪಿಯವರು ಪೈಪ್ಲೈನ್ ಮಾಡಿದ್ದು ಕೋಟ್ಯಾಂತರ ಹಣ ಗುಳುಂ ಮಾಡಿದ್ದು ಪೈಪ್ಲೈನ್ ಅಳವಡಿಕೆಯಲ್ಲಿ ಕಳ್ಳಾಟ ವಾಡಿ ಅಲ್ಲಲ್ಲಿ ಅರ್ಧ ಕಿಲೋಮೀಟರ್ ನಷ್ಟು ಪೈಪ್ಲೈನ್ ಹಾಕದೆ ಮಣ್ಣು ಮುಚ್ಚಿ ಯೋಜನೆಯನ್ನು ಹಳ್ಳ ಹಿಡಿಸಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದ ತಕ್ಷಣ ಈ ಮಹತ್ವಾಕಾಂಕ್ಷಿ ಯೋಜನೆ ಗೆ ಇದ್ದ ಅಡೆತಡೆಗಳನ್ನು ನಿವಾರಿಸಿ ಯೋಜನೆಯು ಲೋಕಾರ್ಪಣೆ ಗೊಳ್ಳುತ್ತಿದೆ.ಈ ಯೋಜನೆಯು ಬರಡು ಭೂಮಿ ಕೋಲಾರ ಜಿಲ್ಲೆಗೆ ಮಿನಿ ಕೆ.ಆರ್.ಎಸ್ ಆಗಿದ್ದು ನೀರಿನ ಬವಣೆ ನೀಗಲಿದೆ.ಪಟ್ಟಣಕ್ಕೆ ಸಾಗಿ ಬರುವ ಮಾರ್ಗ ಮಧ್ಯೆ ಇರುವ ಹಳ್ಳಿಗಳಿಗೂ ಈ ಯೋಜನೆ ಲಬಿಸಲಿದೆ ಹಾಗಾಗ ತಾಲ್ಲೂಕಿನಿಂದ ಅತಿ ಹೆಚ್ಚು ಸಂಖ್ಯೆಯಲ್ಲಿ ಜನರು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೆಕೆಂದರು. ಜಿಲ್ಲಾ ಕಾಂಗ್ರೆಸ್ಅಧ್ಯಕ್ಷರಾದ ಸಿ. ಲಕ್ಷ್ಮೀ ನಾರಾಯಣ್,ಮಾಸ್ತಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾದ ವಿಜಯ್ ನರಸಿಂಹ, ಡಿಸಿಸಿ ಬ್ಯಾಂಕ್ ನ ನಿರ್ದೇಶಕ ಚನ್ನರಾಯಪ್ಪ,ತಾಲ್ಲೂಕು ಕೃಷಿಕ ಸಮಾಜದ ಅಧ್ಯಕ್ಷ ವಿ.ಹನುಮಂತಪ್ಪ, ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ನಮ್ಮ ಹಾಗೂ ಮುಖಂಡರಾದ ಶ್ರೀನಿವಾಸ,ವೀರಭದ್ರಪ್ಪ, ಚೇತನ್, ತಿರುಮಲಶೆಟ್ಟಿಹಳ್ಳಿ ತಿಮ್ಮೇಗೌಡ, ಸೇರಿದಂತೆ ತಾಲ್ಲೂಕಿನ ಹಲವುಗ್ರಾಮ ಪಂಚಾಯಿತಿ ಅಧ್ಯಕ್ಷರು,ಉಪಾಧ್ಯಕ್ಷರು,ಮಾಜಿ ಅಧ್ಯಕ್ಷ, ಉಪಾಧ್ಯಕ್ಷರು ಹಾಗೂ ಕಾರ್ಯಕರ್ತರು ಹಾಜರಿದ್ದರು.

Leave a Reply

Your email address will not be published. Required fields are marked *