ಮಾಲೂರು: ಕೋಲಾರ ಗಡಿ ಜಿಲ್ಲೆಯಾದರೂ ಎಲ್ಲಾ ರಂಗಗಳಲ್ಲೂ ಮುಂದುವರೆಯುತ್ತಿದ್ದೂ ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಅದ ಕೊಡುಗೆ ನೀಡಿದೆ. ಕನ್ನಡ ನಾಡು, ನುಡಿ ಗಡಿ ವಿಚಾರದಲ್ಲಿ ನಾವೆಲ್ಲಾ ಒಂದಾಗಿದ್ದು. ಕನ್ನಡ ಕೀರ್ತಿಯನ್ನು ಉತ್ತುಂಗಕ್ಕೆರಿಸಬೇಕು ಎಂದು ದಮನಿತರ ಸಂಘರ್ಷ ಸಮಿತಿ ಸಂಸ್ಥಾಪಕ ಫ್ರೆಂಡ್ಸ್ ಸಂತೋಷ್ ಅವರು ತಿಳಿಸಿದರು.

ಮಾಲೂರು: ಕೋಲಾರ ಗಡಿ ಜಿಲ್ಲೆಯಾದರೂ ಎಲ್ಲಾ ರಂಗಗಳಲ್ಲೂ ಮುಂದುವರೆಯುತ್ತಿದ್ದೂ ವಿಶೇಷವಾಗಿ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಅದ ಕೊಡುಗೆ ನೀಡಿದೆ. ಕನ್ನಡ ನಾಡು, ನುಡಿ ಗಡಿ ವಿಚಾರದಲ್ಲಿ ನಾವೆಲ್ಲಾ ಒಂದಾಗಿದ್ದು. ಕನ್ನಡ ಕೀರ್ತಿಯನ್ನು ಉತ್ತುಂಗಕ್ಕೆರಿಸಬೇಕು ಎಂದು ದಮನಿತರ ಸಂಘರ್ಷ ಸಮಿತಿ ಸಂಸ್ಥಾಪಕ ಫ್ರೆಂಡ್ಸ್ ಸಂತೋಷ್ ಅವರು ತಿಳಿಸಿದರು.
ತಾಲ್ಲೂಕಿನ ಸೊಣ್ಣೂರು ಗ್ರಾಮದಲ್ಲಿ ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರ ಬೆಂಗಳೂರು ಮತ್ತು ಗಂಗೆ ಜಾನಪದ ಕಲಾ ಸಂಸ್ಥೆ (ರಿ) ಇವರ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ಗಡಿನಾಡು ಸಾಂಸ್ಕೃತಿಕ ಉತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕೋಲಾರ ಜಿಲ್ಲೆಯು ಗಡಿ ಭಾಗದಲ್ಲಿದ್ದು, ರಾಜಕೀಯವಾಗಿ, ಶೈಕ್ಷಣಿಕವಾಗಿ, ಸಾಹಿತ್ಯ, ಕಲೆ ವಿಭಾಗದಲ್ಲಿ ಮುಂದುವರೆಯುತ್ತಿದ್ದು ಹೆಚ್ಚು ಕಲಾವಿದರನ್ನು ಹೊಂದುವ ಮೂಲಕ ಸಾಂಸ್ಕೃತಿಕ ಕ್ಷೇತ್ರಕ್ಕೆ ತನ್ನದೇ ಆದ ಕೊಡುಗೆ ನೀಡಿದೆ ಇನ್ನೂ ಕೋಟಿಗಾನ ರಾಮಯ್ಯ ನಂತಹ ಹಿರಿಯ ಸಾಹಿತಿಗಳಿಂದ ಯುವ ಕವಿಗಳು ಜಿಲ್ಲೆಯಲ್ಲಿ ತಮ್ಮದೇ ಆದ ರೀತಿಯಲ್ಲಿ ಮುನ್ನಲೆಯಲ್ಲಿದ್ದಾರೆ. ಇನ್ನೂ ಜಿಲ್ಲೆಯಲ್ಲಿ ಮಾಲೂರು ತಾಲ್ಲೂಕು ತಮಿಳುನಾಡು ಹಾಗೂ ಆಂದ್ರ ಪ್ರದೇಶದ ಗಡಿಗಳಿಗೆ ಹೊಂದಿಕೊಂಡಿದ್ದು ಸಾಂಸ್ಕೃತಿಕವಾಗಿ ರಾಜ್ಯ ಮಟ್ಟದಲ್ಲಿ ಹೆಸರು ಮಾಡಿದವರು ಇದ್ದಾರೆ. ಹಾಗೇ ತಾಲ್ಲೂಕಿನಲ್ಲಿ ಮೊದಲಿನಿಂದಲೂ ಕನ್ನಡ ನಾಡು, ನುಡಿ, ಗಡಿ, ಜಲ ವಿಚಾರದಲ್ಲಿ ಎಲ್ಲರೂ ಒಂದಾಗಿ ಒಗ್ಗಟ್ಟಿನಿಂದ ಕನ್ನಡವನ್ನು ಉಳಿಸಿ ಬೆಳಸಿಕೊಂಡು ಬಂದಿದ್ದೇವೆ. ಪ್ರತಿಯೊಬ್ಬರು ವ್ಯವಹಾರಿಕವಾಗಿ ಕನ್ನಡವನ್ನು ಬಳಸಬೇಕು. ಇಂದು ನಮ್ಮ ಸೊಣ್ಣೂರು ಗೋವಿಂದ್ ಅವರು ಈ ಕಾರ್ಯಕ್ರಮ ಬಹಳ ಸಂತಸವನ್ನು ಉಂಟುಮಾಡಿದ್ದು ಇಂತಹ ಕಾರ್ಯಕ್ರಮಗಳು ಪ್ರತಿ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಮಾಡುವ ಮೂಲಕ ಕನ್ನಡವನ್ನು ಮತ್ತಷ್ಟು ಬೆಳಸಬೇಕು ಎಂದರು.
ಈ ಸಂದರ್ಭದಲ್ಲಿ ಜಯಮಂಗಲ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವಸಂತಮ್ಮ,ಗ್ರಾಮ ಪಂಚಾಯಿತಿ ಸದಸ್ಯರಾದ ಸವಿತಾ ರಾಜಪ್ಪ, ಶಿವಶಂಕರ್, ಸಂಪಂಗೆರೆ ಮುನಿರಾಜು, ವಿ ನಾಗೇಶ್, ಸಂಪಂಗೆರೆ ಮಾಸ್ತಿ ಎಸ್ಸಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಕೆ ವೆಂಕಟೇಶ್, ಗಂಗೆ ಜಾನಪದ ಕಲಾ ಸಂಸ್ಥೆಯ ಸೊಣ್ಣೂರು ಗೋವಿಂದ್, ಸಂಪಂಗೆರೆ ಅಶೋಕ್, ಸೊಣ್ಣೂರು ಮುನಿರಾಜು ತಾಲೂಕು ಸಂಘಟನಾ ಸಂಚಾಲಕ, ಆಲಂಬಾಡಿ ಗೋಪಾಲ್, ವೆಂಕಟೇಶ್, ನಾಗರಾಜ್, ವಕೀಲರಾದ ರಾಜೇಶ್, ಬಾಬು, ಮಂಜು ಇನ್ನಿತರರು ಇದ್ದರು.

Leave a Reply

Your email address will not be published. Required fields are marked *