ಮಾಲೂರು: ಒಕ್ಕೂಟ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯದ ಜನತೆಯ 5 ಹಾಕ್ಕೋತ್ತಾಯಗಳನ್ನು ಕಲ್ಪಿಸಲು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದ ಕಾರ್ಯಕರ್ತರಿಂದ ಮಾಲೂರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರ ಮೂಲಕ ಪ್ರಧಾನ ಮಂತ್ರಿಗಳಿಗೆ ತಮ್ಮ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಿದರು.

ಮಾಲೂರು: ಒಕ್ಕೂಟ ಸರ್ಕಾರ ಪ್ರಜಾಪ್ರಭುತ್ವದ ವಿರೋಧಿ ನೀತಿಗಳನ್ನು ಖಂಡಿಸಿ ರಾಜ್ಯದ ಜನತೆಯ 5 ಹಾಕ್ಕೋತ್ತಾಯಗಳನ್ನು ಕಲ್ಪಿಸಲು ಭಾರತ ಕಮ್ಯುನಿಸ್ಟ್ ಪಕ್ಷ ಮಾರ್ಕ್ಸ್ ವಾದ ಕಾರ್ಯಕರ್ತರಿಂದ ಮಾಲೂರು ತಾಲೂಕು ಕಚೇರಿಯ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ರವರ ಮೂಲಕ ಪ್ರಧಾನ ಮಂತ್ರಿಗಳಿಗೆ ತಮ್ಮ ಹಕ್ಕೊತ್ತಾಯಗಳ ಮನವಿ ಪತ್ರವನ್ನು ಸಲ್ಲಿಸಿದರು.

ಈ ಪ್ರತಿಭಟನೆಯನ್ನು ಕುರಿತು ಸಿ.ಪಿ.ಐ(ಎಂ)ನ ತಾಲ್ಲೂಕು ಕಾರ್ಯದರ್ಶಿ ಅರಳೇರಿ ಅಶೋಕ್ ರವರು ಮಾತನಾಡಿ ಕಳೆದ 2014ರಿಂದ ಒಕ್ಕೂಟ ಸರ್ಕಾರವನ್ನು ಮುನ್ನಡೆಸುತ್ತಿರುವ ಶ್ರೀ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಹಾಗೂ ಎನ್.ಡಿ.ಎ ಸರ್ಕಾರ ಎರಡು ಲೋಕಸಭಾ ಚುನಾವಣೆಯಲ್ಲಿ ದೇಶದ ಜನತೆಗೆ ನೀಡಿದ ಆಶ್ವಾಸನೆಗಳಾದ ರೈತರ ಆದಾಯ ದ್ವಿಗುಣಗೊಳಿಸುವುದು, ಪ್ರತಿ ವರ್ಷ ಎರಡು ಕೋಟಿ ಉದ್ಯೋಗ, ಬೆಲೆ ಏರಿಕೆ ನಿಯಂತ್ರಣ,ವಿದೇಶದಲ್ಲಿರುವ ಕಪ್ಪು ಹಣವನ್ನು ತಂದು ಬಡವರ ಖಾತೆಗೆ ಜಮೆ ಮಾಡುವುದು ಹೀಗೆ ಇನ್ನಿತರ ಆಶ್ವಾಸನೆಗಳನ್ನು ನೀಡಿ ಅಚ್ಚೇ ದಿನಗಳನ್ನು ತರುವುದಾಗಿ ಹೇಳಿ ಅಧಿಕಾರ ಗದ್ದುಗೆ ಏರಿ ಕೊಟ್ಟ ಆಶ್ವಾಸನೆಗಳನ್ನು ಇದುವರೆಗೂ ಜಾರಿಗೊಳಿಸದೆ ವಂಚಿಸಿರುವುದನ್ನ ಮತ್ತು ಲೂಟಿಕೋರ ಕಾರ್ಪೊರೇಟ್ ಸಂಸ್ಥೆಗಳು ದೇಶದ ನೈಸರ್ಗಿಕ ಸಂಪತ್ತನ್ನು ದೋಚಲು ಮಣೆ ಹಾಕುತ್ತಿರುವುದನ್ನು ನಮ್ಮ ಪಕ್ಷ ಖಂಡಿಸುತ್ತದೆ. ಸುಳ್ಳು ಆಶ್ವಾಸನೆಗಳನ್ನು ನೀಡಿ ದೇಶವಾಸಿಗಳನ್ನು ಯಾಮರಿಸುವುದನ್ನು ಬಿಟ್ಟು ಈಗಲಾದರೂ ಜನರ ಕಷ್ಟಗಳಿಗೆ ನೆರವಾಗಬೇಕು ಹಾಗಾಗಿ ಅಗತ್ಯ ವಸ್ತುಗಳ ಬೆಲೆ ನಿಯಂತ್ರಣ ಸಾಧಿಸಬೇಕು ,ರಾಜ್ಯಕ್ಕೆ ಬರಬೇಕಾದ ನ್ಯಾಯಯುತ ಜಿಎಸ್‌ಟಿ ಪಾಲನ್ನು ಸಕಾಲದಲ್ಲಿ ನೀಡಬೇಕು ರಾಜ್ಯದ ಅನ್ನಬಗ್ಗೆ ಯೋಜನೆಗೆ ಹೆಚ್ಚುವರೆಯಾಗಿ 5 ಕೆಜಿ ಅಕ್ಕಿಯನ್ನು ವಿತರಿಸಿ, ಹಣದುಬ್ಬರ ತಡೆದು, ಆಹಾರ ಧಾನ್ಯಗಳ ಮೇಲಿನ ಜಿಎಸ್‌ಟಿಯನ್ನು ವಾಪಸ್ ಪಡೆಯಬೇಕು .ಉದ್ಯೋಗ ಖಾತ್ರಿಗೆ ಪೂರಕ ವಾತಾವರಣವನ್ನ ನಿರ್ಮಿಸಿ, ಒಕ್ಕೂಟ ಸರ್ಕಾರದ ವ್ಯಾಪ್ತಿಯಲ್ಲಿರುವ ಖಾಲಿ ಹುದ್ದೆಗಳನ್ನು ಭರ್ತಿ ಮಾಡಬೇಕು. ವಿದ್ಯುತ್ ರಂಗದ ಖಾಸಗಿಕರಣ ಮತ್ತು ಸ್ಮಾರ್ಟ್ ಮೀಟರ್ ಅಳವಡಿಕೆ ಕೈಬಿಡಬೇಕು ಎಂದರು.ತಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿದರು.
ಈ ಪ್ರತಿಭಟನೆಯಲ್ಲಿ ಸಿ.ಪಿ.ಐ(ಎಂ) ತಾಲ್ಲೂಕು ಮುಖಂಡರಾದ ವೆಂಕಟಚಲಪತಿ ,ಮುನಿಸ್ವಾಮಿಗೌಡ ಶಿವಾನಂದ ,ಕೆ. ಪಿ.ಆರ್. ಎಸ್ ನ ತಾಲೂಕು ಅಧ್ಯಕ್ಷರಾದ ವೆಂಕಟಪ್ಪ ಮುಖಂಡರಾದ ನಾರಾಯಣಸ್ವಾಮಿ ವೆಂಕಟೇಶಪ್ಪ ,ಮಂಜುನಾಥ್ ಪ್ರಕಾಶ್ ,ಮುನಿರಾಜು ವೆಂಕಟರಾಮ್, ಮುನಿಸ್ವಾಮಿ ನಾರಾಯಣಸ್ವಾಮಿ ಜಯಲಕ್ಷ್ಮಿ ಸೇರಿದಂತೆ ಇನ್ನಿತರರು ಹಾಜರಿದ್ದರು.

Leave a Reply

Your email address will not be published. Required fields are marked *