ಮಾಲೂರು : ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದ ರೈತರರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಅರಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಪಟ್ಟಣದ ಬೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿದರು.

ಮಾಲೂರು : ಅನಧಿಕೃತ ಲೋಡ್ ಶೆಡ್ಡಿಂಗ್ ನಿಂದ ರೈತರರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಆರೋಪಿಸಿ ಇಂದು ಅರಳೇರಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಹಳ್ಳಿಗಳ ರೈತರು ಪಟ್ಟಣದ ಬೆಸ್ಕಾಂ ಕಛೇರಿ ಎದುರು ಪ್ರತಿಭಟನೆ ನಡೆಸಿದರು.
ಈ ಪ್ರತಿಭಟನೆಯನ್ನು ಉದ್ದೇಶಿಸಿ ಅರಳೇರಿ ಗ್ರಾಮದ ಮುಖಂಡ ಮಾಜಿ ಗ್ರಾಮ ಪಂಚಾಯಿತಿ ಸದಸ್ಯ ವೀರಾಸ್ವಾಮಿ ಮಾತನಾಡಿ ವಿದ್ಯುತ್ ಸಂಪರ್ಕವನ್ನು ಸರಿಯಾಗಿ ಪೊರೈಕೆ ಮಾಡದೆ ಪದೇ ಪದೇ ಕಡಿತಗೊಳಿಸುತ್ತಿದ್ದು ಈ ಅನಧಿಕೃತ ಲೋಡ್ ಶೆಡ್ಡಿಂಗ್ ನ ಕಾಟ ರೈತರಿಗೆ ಹಾಗೂ ಸಾರ್ವಜನಿಕರಿಗೆ ಭಾಧಿಸುತ್ತಿದೆ.ಕೃಷಿ ಪಂಪ್ ಸೆಟ್ ಗಳಿಗೆ ನಿತ್ಯ 7 ತಾಸುಗಳ ತ್ರಿ ಫೇಸ್ ವಿದ್ಯುತ್ ನೀಡುವ ಬದಲು 2 ಅಥಾವ 3 ತಾಸುಗಳು ನೀಡುತ್ತಿದ್ದರು .ಆದರೆ ಈಗ ಅದು ಸಹ ಸರಿಯಾಗಿ ಪೊರೈಕೆ ಮಾಡುತ್ತಿಲ್ಲ . ತಾವು ಬೆಳೆದ ಫಸಲು ನೀರಿಲ್ಲದೆ ಒಣಗುತ್ತಿವೆ.ಇನ್ನೊಂದು ಕಡೆ ಮಳೆ ಇಲ್ಲದೆ ಬರಗಾಲ ಆವರಿಸಿದ್ದು ಗಾಯದ ಮೇಲೆ ಬರೆ ಎಳೆದಂತೆ ರೈತರು ತೊಂದರೆ ಅನುಭವಿಸುವಂತಾಗಿದೆ. ಇಷ್ಟೆಲ್ಲಾ ತೊಂದರೆಗಳ ನಡುವೆ ಕಳ್ಳರ ಕಾಟ ಹೆಚ್ಚಾಗಿದ್ದು ವಿದ್ಯುತ್ ಸಂಪರ್ಕ ಇಲ್ಲದ ಪಂಪ್, ಕೇಬಲ್ ಗಳು ಕಳ್ಳರ ಪಾಲಾಗುತ್ತಿದೆ.ಹಾಗಾಗಿ ಈ ಎಲ್ಲಾ ಸಮಸ್ಯೆಗಳನ್ನು ಮನಗಂಡು ಸಮರ್ಪಕ ವಿದ್ಯುತ್ ನ್ನು ಪೂರೈಕೆ ಮಾಡಬೇಕು. ಇಲ್ಲದೆ ಹೋದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.
ಈ ಸಂದರ್ಭದಲ್ಲಿ ಮುನಿರಾಜು ಎಪಿ, ರಮೇಶ್ ಎಸಿ, ಶ್ರೀನಿವಾಸ್ ರೆಡ್ಡಿ, ಶ್ರೀನಿವಾಸ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *