ಮಾಲೂರು:ಮೂರು ಬಿಟ್ಟೋರು ಊರಿಗೆ ದೊಡ್ಡವರು ಅನ್ನೋ ರೀತಿ ಇಲ್ಲೊಬ್ಬ ಮಹಾನುಭಾವ ಟೈಮ್ ಪಾಸ್ ಗಾಗಿ ಮೂರೊತ್ತು ನನ್ನದೇ ಧ್ಯಾನ ಮಾಡ್ತಾ ತಿರುಗಾಡುತ್ತಿದ್ದಾನೆ ಎಂದು ಸಂಸದ ಮುನಿಸ್ವಾಮಿ ವಿರುದ್ಧ ಪರೋಕ್ಷವಾಗಿ ಶಾಸಕ ಕೆ ವೈ ನಂಜೇಗೌಡರು ವಾಗ್ದಾಳಿ ನಡೆಸಿದರು.

ಮಾಲೂರು:ಮೂರು ಬಿಟ್ಟೋರು ಊರಿಗೆ ದೊಡ್ಡವರು ಅನ್ನೋ ರೀತಿ ಇಲ್ಲೊಬ್ಬ ಮಹಾನುಭಾವ ಟೈಮ್ ಪಾಸ್ ಗಾಗಿ ಮೂರೊತ್ತು ನನ್ನದೇ ಧ್ಯಾನ ಮಾಡ್ತಾ ತಿರುಗಾಡುತ್ತಿದ್ದಾನೆ ಎಂದು ಸಂಸದ ಮುನಿಸ್ವಾಮಿ ವಿರುದ್ಧ ಪರೋಕ್ಷವಾಗಿ ಶಾಸಕ ಕೆ ವೈ ನಂಜೇಗೌಡರು ವಾಗ್ದಾಳಿ ನಡೆಸಿದರು.

ಪಟ್ಟಣದ ಕೋಚಿ ಮೂಲ್ ಶಿಬಿರ ಕಚೇರಿಯಲ್ಲಿ ಹಮ್ಮಿಕೊಂಡಿದ್ದ ಮೃತಪಟ್ಟ ರಾಸುಗಳ 25 ಮಾಲೀಕರಿಗೆ 17 ಲಕ್ಷ ,ವಿಮೆ ಮಾಡಿಸದೆ ಇದ್ದ ರೈತರಿಗೆ ದತ್ತಿನಿದಿಯಿಂದ ಎರಡು ಲಕ್ಷ ಇಪ್ಪತ್ತೈದು ಸಾವಿರ ,ಮೇವು ಕತ್ತರಿಸುವ ಯಂತ್ರದಿಂದ ಉನಾದವರಿಗೆ ತಲಾ ಇಪ್ಪತ್ತೈದು ಸಾವಿರ ,ಬೆಂಕಿಗೆ ಈಡಾದ ಹುಲ್ಲು ಮೆದೆ ರೈತರಿಬ್ಬರಿಗೆ ತಲಾ 20 ಸಾವಿರದಂತೆ ಒಟ್ಟು19 ಲಕ್ಷದ 75,000 ಚೆಕ್ ವಿತರಣೆ ಮಾಡಿ ಮಾತನಾಡಿದ ಅವರು ಮೃತಪಟ್ಟರಾಸುಗಳ ವಿಮಾ ಪರಿಹಾರದ ಚೆಕ್ ಪಡೆದ ಹಾಲು ಉತ್ಪಾದಕರು ಕಡ್ಡಾಯವಾಗಿ ರಾಸುಗಳನ್ನು ಖರೀದಿ ಮಾಡಿ ಹಾಲು ಉತ್ಪಾದನೆಯಲ್ಲಿ ತೊಡಗಬೇಕು ಎಂದರು.ರೈತರು ವಿಮೆ ಸೌಲಭ್ಯಗಳನ್ನು ಪಡೆಯಲು ತಪ್ಪದೆ ತಮ್ಮ ರಾಸುಗಳಿಗೆ ವಿಮೆಯನ್ನು ಮಾಡಿಸಬೇಕು ರಾಜ್ಯದ 16 ಒಕ್ಕೂಟಗಳಲ್ಲಿ ಕೋಲಾರ ಒಕ್ಕೂಟವು ಅತ್ಯಂತ ವಿಶ್ವಾಸನೆಯ ಇಂದ ಮತ್ತು ಕಾರ್ಯ ಕ್ಷಮತೆಯಿಂದ ಹೆಗ್ಗಳಿಕೆ ಪಡೆದಿದೆ ಒಕ್ಕೂಟದಲ್ಲಿ 200 ಕೋಟಿಗಳನ್ನು ಠೇವಣಿಯನ್ನು ಇಡಲಾಗಿದೆ ರಾಜ್ಯದಲ್ಲಿ ಹಾಲು ಉತ್ಪಾದಕರಿಗೆ ಅತಿ ಹೆಚ್ಚುವಿವಿಧ ರೀತಿಯ ಸೌಲಭ್ಯಗಳನ್ನ ನೀಡಿ ಹಾಲು ಉತ್ಪಾದಕರ ಗೆ ಬೆಂಬಲವಾಗಿ ನಿಂತಿದ್ದೇವೆ ನಮ್ಮ ಒಕ್ಕೂಟವು ಮೂರು ಮಹತ್ವ ಯೋಜನೆಗಳನ್ನು ಅನುಷ್ಠಾನ ಗೊಳಿಸಲು ಮುಂದಾಗಿದೆ.ಎಂ.ವಿ.ಕೆ.ಗೋಲ್ಡನ್ ಡೈರಿ , ವಿದ್ಯುತ್ ಉತ್ಪಾದನೆಯಲ್ಲಿ ಸಾವಲಂಬನೆ ಸಾಧಿಸಲು 50 ಎಕರೆ ಪ್ರದೇಶದಲ್ಲಿ ಸೋಲಾರ್ ಪ್ಲಾಂಟ್ ನಿರ್ಮಾಣ ಇದರಿಂದ ಒಕ್ಕೂಟಕ್ಕೆ ತಿಂಗಳಿಗೆ ಎರಡು ಕೋಟಿ ಉಳಿತಾಯ ಹಾಗೂ ಚಿಂತಾಮಣಿಯಲ್ಲಿ ಐಸ್ ಕ್ರೀಮ್ ಘಟಕ ನಿರ್ಮಾಣ ಇಷ್ಟೆಲ್ಲಾ ಇಷ್ಟೆಲ್ಲಾ ಯೋಜನೆಗಳನ್ನ ಕೈಗೊಂಡು ಪ್ರಗತಿಯಲ್ಲಿ ಸಾಗುತ್ತಿದ್ದರೆ ಇನ್ನೊಬ್ಬ ಆಸಾಮಿ ಒಕ್ಕೂಟದ ಬಗ್ಗೆ ಇಲ್ಲ ಸಲ್ಲದ ಆರೋಪಗಳನ್ನು ಮಾಡಿ ತಿರುಗಾಡುತ್ತಿದ್ದಾನೆ ಅದಕ್ಕೆಲ್ಲಾ ತಲೆ ಕೆಡಿಸಿಕೊಳ್ಳು ಅವಶ್ಯಕತೆ ಇಲ್ಲ ಎಂದರು

Leave a Reply

Your email address will not be published. Required fields are marked *