ಮಾಲೂರು:”ನಮ್ಮ ದೇಶ ವಿಶ್ವದಲ್ಲಿಯೇ ಉತ್ಕೃಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು ಇಲ್ಲಿನ ಆಹಾರ ಪದ್ದತಿ, ಉಡುಗೆ ತೊಡುಗೆಗಳು, ಕೌಟುಂಬಿಕ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿಯಾಗಿದೆ” ಎಂದು ಸಾಹಿತಿ ಡಾ.ಜಯಮಂಗಲ ಚಂದ್ರಶೇಖರ್ ತಿಳಿಸಿದರು.

ಮಾಲೂರು:”ನಮ್ಮ ದೇಶ ವಿಶ್ವದಲ್ಲಿಯೇ ಉತ್ಕೃಷ್ಟ ಸಾಂಸ್ಕೃತಿಕ ಪರಂಪರೆಯನ್ನು ಹೊಂದಿದ್ದು ಇಲ್ಲಿನ ಆಹಾರ ಪದ್ದತಿ, ಉಡುಗೆ ತೊಡುಗೆಗಳು, ಕೌಟುಂಬಿಕ ವ್ಯವಸ್ಥೆ ಇತರೆ ದೇಶಗಳಿಗೆ ಮಾದರಿಯಾಗಿದೆ” ಎಂದು ಸಾಹಿತಿ ಡಾ.ಜಯಮಂಗಲ ಚಂದ್ರಶೇಖರ್ ತಿಳಿಸಿದರು.

ತಾಲ್ಲೂಕು ಚುಟುಕು ಸಾಹಿತ್ಯ ಪರಿಷತ್ತಿನ ವತಿಯಿಂದ ಸ್ಥಳೀಯ ಕನ್ನಡ ಸಾಹಿತ್ಯ ಪರಿಷತ್ತಿನ ಭವನದಲ್ಲಿ ‘ನಮ್ಮ ದೇಶ ನಮ್ಮ ಹೆಮ್ಮೆ’ ದೇಶಭಕ್ತಿ ಗೀತೆಗಳ ಗಾಯನ ಕಾರ್ಯಕ್ರಮವನ್ನು ಉದ್ಘಾಟಿಸಿ
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ತು ಮಾಲೂರು ತಾಲ್ಲೂಕು ಅಧ್ಯಕ್ಷ ಎಂ.ವಿ.ಹನುಮಂತಯ್ಯರವರು “ಲಕ್ಷಾಂತರ ಜನರ ತ್ಯಾಗ, ಬಲಿದಾನದ ಫಲವಾಗಿ ಪಡೆದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವವನ್ನು ಬಹಳ ಅರ್ಥಪೂರ್ಣವಾಗಿ, ವಿಜೃಂಭಣೆಯಿಂದ ದೇಶದಾದ್ಯಂತ ಆಚರಿಸಿದ ನಮಗೆ ನಮ್ಮ ದೇಶವೆಂದರೆ ಹೆಮ್ಮೆಯ ವಿಚಾರ. ಇಲ್ಲಿ ಹರಿಯುವ ನದಿ ಸರೋವರಗಳು, ಗಿರಿಧಾಮಗಳು, ಪ್ರಾಕೃತಿಕ ಸಂಪತ್ತು, ಇಲ್ಲಿ ಆಚರಿಸುವ ಹಬ್ಬಗಳು ಇತ್ಯಾದಿಗಳು ವೈವಿಧ್ಯಮಯವಾದವು. ಇಲ್ಲಿ ಅನೇಕ ಸಂಸ್ಕೃತಿ, ಉಪಸಂಸ್ಕೃತಿಯ ಜನಸಮೂಹಗಳು ವಾಸಿಸುತ್ತಿದ್ದರೂ ವಿವಿಧತೆಯಲ್ಲಿ ಏಕತೆ ಹೊಂದಿರುವುದು ವಿಶ್ವಕ್ಕೇ ಮಾದರಿ” ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸಾಹಿತಿ ಮಾಸ್ತಿ ಕೃಷ್ಣಪ್ಪ, ಮತ್ತು ಕೆ.ಮುನಿಕೃಷ್ಣಪ್ಪನವರು ಕಾರ್ಯ ಕ್ರಮ ವನ್ನು ಕುರಿತು ಮಾತನಾಡಿದರು. ಗಾಯಕ ಗುಲ್ಜಾರ್, ಸಿ.ವೈ.ರಾಧಮ್ಮ ದೇಶಭಕ್ತಿ ಗೀತೆಗಳನ್ನು ಹಾಡುವುದರ ಜೊತೆಗೆ ಎಲ್ಲಾ ಕವಿಗಳು ಕವನ ವಾಚನ ಮಾಡುತ ಎಲ್ಲರ ಮನ ರಂಜಿಸಿದರು

ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ನಾರಿಗಾನಹಳ್ಳಿ ಶ್ರೀನಿವಾಸ್ ರವರು ಪ್ರಾಸ್ತಾವಿಕ ನುಡಿಗಳನ್ನು ನುಡಿದು ಸಾಹಿತಿಗಳ ಮನ ಗೆದ್ದರು. ಇದೇ ಸಂದರ್ಬದಲ್ಲಿ ಕವಿಗಳಾದ ರೋಣೂರು ವೆಂಕಟೇಶ್, ಮಾ.ಚಿ.ನಾಗರಾಜ್, ವಕೀಲ ಜಗನ್ನಾಥ್, ಸಿ.ಆರ್.ಪಿ.ನಾಗರಾಜ್, ಪಿ.ಎಂ.ಕೃಷ್ಣಪ್ಪ, ಅಂಬರೀಷ್ ಮುಂತಾದವರು ಇದ್ದರು

Leave a Reply

Your email address will not be published. Required fields are marked *