ಮಾಲೂರು:ಉತ್ತಮ ಗುಣಮಟ್ಟದ ಮರದ ಪೀಠೋಪಕರಣಗಳು ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ನೂತನ ಶ್ರೀ ವಿಷ್ಣು ಫರ್ನಿಚರ್ ಶೋ ರೂಂ ಮಳಿಗೆಯಲ್ಲಿ ದೊರೆಯಲಿದ್ದು, ತಾಲ್ಲೂಕಿನ ಜನತೆ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಾಸಕ ಕೆವೈ ನಂಜೇಗೌಡ ಹೇಳಿದರು.

ಮಾಲೂರು:ಉತ್ತಮ ಗುಣಮಟ್ಟದ ಮರದ ಪೀಠೋಪಕರಣಗಳು ಎಲ್ಲಾ ವರ್ಗದ ಜನರಿಗೆ ಕೈಗೆಟುಕುವ ದರದಲ್ಲಿ ನೂತನ ಶ್ರೀ ವಿಷ್ಣು ಫರ್ನಿಚರ್ ಶೋ ರೂಂ ಮಳಿಗೆಯಲ್ಲಿ ದೊರೆಯಲಿದ್ದು, ತಾಲ್ಲೂಕಿನ ಜನತೆ ಸದುಪಯೋಗವನ್ನು ಪಡೆದುಕೊಳ್ಳಬೇಕೆಂದು ಶಾಸಕ ಕೆವೈ ನಂಜೇಗೌಡ ಹೇಳಿದರು.

ಪಟ್ಟಣದ ಹೊಸೂರು ಮುಖ್ಯ ರಸ್ತೆಯಲ್ಲಿ ಟ್ರೆಂಡ್ ಶೋ ರೂಂ ಮುಂಭಾಗದಲ್ಲಿ ಕೋಟಾ ಫ್ಯಾಮಿಲಿಯವರು ನೂತನ ವಾಗಿ ಪ್ರಾರಂಭಿಸಿರುವ ಶ್ರೀ ವಿಷ್ಣು ಫರ್ನಿಚರ್ ಶೋ ರೂಂ ನ ಉದ್ಘಾಟನಾ ಸಮಾರಂಭದಲ್ಲಿ ಭಾಗಿಯಾಗಿ ಶುಭ ಹಾರೈಸಿ ಮಾತನಾಡಿದರು. ಜನತೆಗೆ ಅವಶ್ಯಕತೆ ಇರುವ ವುಡ್ ಫರ್ನಿಚರ್ ಶೋ ರೂಂ ಮಳಿಗೆಯು ಈಗ ಪಟ್ಟಣದಲ್ಲಿ ಆರಂಭವಾಗಿದ್ದು, ಎಲ್ಲಾ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ವುಡ್ ಫರ್ನಿಚರ್ ಇಲ್ಲಿ ದೊರೆಯಲಿದೆ. ಗ್ರಾಹಕರು ತಮ್ಮ ಮನೆಗೆ ಬೇಕಾದದನ್ನು ತೆಗೆದುಕೊಳ್ಳಿ ಹಾಗೇ ನಿಮಗೆ ಬೇಕಾದ ರೀತಿಯಲ್ಲಿ ತಯಾರಿಸಿ ಕೊಡಲಿದ್ದಾರೆ. ಈ ಅವಕಾಶವನ್ನು ತಾಲ್ಲೂಕಿನ ಜನತೆ ಉಪಯೋಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಈ ವೇಳೆ ಮಾತನಾಡಿದ ಶ್ರೀ ವಿಷ್ಣು ಫರ್ನಿಚರ್ ಶೋ ರೂಂ ನ ಮಾಲೀಕರಾದ ವಿಶ್ವನಾಥ್ ಅವರು ತಾಲ್ಲೂಕಿನ ಜನರ ಬೇಡಿಕೆಯಂತೆ ಇಂದು ಕೋಟಾ ಫ್ಯಾಮಿಲಿಯಿಂದ ಈ ಒಂದು ಶೋ ರೂಂ ಪ್ರಾರಂಭಿಸಿದ್ದು ನಮ್ಮಲ್ಲಿ ಎಲ್ಲಾ ವಿಧವಾದ ಹೊಂ ವುಡ್ ಫರ್ನಿಚರ್ ಎಲ್ಲಾ ರೀತಿಯ ಜನರಿಗೆ ಕೈಗಾಟಕುವಂತೆ ದೊರೆಯಲಿದೆ. ಹಾಗೇ ಗ್ರಾಹಕರಿಗೆ ಬೇಕಾದ ರೀತಿಯಲ್ಲಿ ಗಾತ್ರದಲ್ಲಿ ತಯಾರಿಸಿ ಕೊಡಲಾಗುವುದು ಅಲ್ಲದೆ ನಮ್ಮಲ್ಲಿ ಉದ್ಘಾಟನಾ ಕೊಡುಗೆಗಳು ಸಹ ಇವೆ. ಗ್ರಾಹಕರ ಪ್ರತಿ ಕೊಳ್ಳುವಿಕೆಗೆ ಒಂದು ಬೆಳ್ಳಿ ನಾಣ್ಯ, ಗ್ರಾಹಕರ ಪ್ರತಿ 25000 ಸಾವಿರ ರೂಪಾಯಿ ಖರೀದಿಗೆ ಒಂದು ಚಿನ್ನದ ನಾಣ್ಯ ಉಡುಗೊರೆ ನೀಡುತ್ತೇವೆ ಮತ್ತು ಗ್ರಾಹಕರಿಗೆ ಇಎಂಐ ಸೇವೆ ನೀಡಲಿದ್ದೇವೆ ಒಮ್ಮೆ ಬೇಟಿ ನೀಡಿ ನಿಮಗೆ ಬೇಕಾದನ್ನು ಕೊಳ್ಳಿರಿ ಎಂದು ವಿನಂತಿಸಿದರು.

ಈ ಸಂದರ್ಭದಲ್ಲಿ ಮಾಜಿ ಶಾಸಕ ಎ ನಾಗರಾಜ್, ಕೆ ಎ ಲಕ್ಷ್ಮೀ ನಾರಾಯಣ ಶೆಟ್ಟಿ, ಸಮಾಜ ಸೇವಕ ಹೂಡಿ ವಿಜಯ್ ಕುಮಾರ್, ಸುನಿಲ್, ಹನುಮಂತ ರೆಡ್ಡಿ, ಪುರಸಭೆ ಸದಸ್ಯರಾದ ಪರಮೇಶ್, ಇಮ್ತಿಯಾಸ್, ಭಾನು ತೇಜ, ಕುಟ್ಟಿ ತನ್ವೀರ್, ಶಬ್ಬೀರ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *