ಪುಣ್ಯಕ್ಷೇತ್ರ ಚಿಕ್ಕತಿರುಪತಿಯಲ್ಲಿ ಅದ್ದೂರಿ ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಜನರ ಮನಸ್ಸು ಗೆದ್ದ ಶ್ವೇತಾಂಜಲಿ ‌ಭರತನಾಟ್ಯ ಶಾಲೆ.

ಚಿಕ್ಕತಿರುಪತಿಯಲ್ಲಿ ಅದ್ದೂರಿ ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಜನರ ಮನಸ್ಸು ಗೆದ್ದ ಶ್ವೇತಾಂಜಲಿ ‌ಭರತನಾಟ್ಯ ಶಾಲೆ.

ಕರ್ನಾಟಕ ರಾಜ್ಯದಲ್ಲಿ ಪ್ರಸಿದ್ದಿ ಪಡದಿರುವ ಕಲಾಸೇವಾ, ಅನಿಕೇತನ ಹಾಗೂ ಕನ್ನಡ ವೈಭವ ಪ್ರಶಸ್ತಿ ಪುರಸ್ಕೃತರಾದ ಶ್ರೀಮತಿ ಶ್ವೇತನಾಗರಾಜ್ ರವರ ಸಾರಥ್ಯದಲ್ಲಿನ ಶ್ವೇತಾಂಜಲಿ ಭರತನಾಟ್ಯ ಶಾಲೆಯು ಪ್ರತಿ ವರ್ಷದಂತೆ ಈ ವರ್ಷವೂ ಸಹ ಪುಣ್ಯಕ್ಷೇತ್ರ ಚಿಕ್ಕತಿರುಪತಿಯ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಮುಂಭಾಗದಲ್ಲಿ ಆಧ್ಯಾತ್ಮಿಕತೆಯನ್ನು ಪ್ರತಿಬಿಂಬಿಸುವ ಭರತನಾಟ್ಯ ನೃತ್ಯ ಪ್ರದರ್ಶನ, ಭಕ್ತಿ ಗೀತೆಗಳ ಗಾಯನ, ರಾಜ್ಯಮಟ್ಟದ‌ ಕುವೆಂಪು ಅನಿಕೇತನ ಪ್ರಶಸ್ತಿ ಹಾಗೂ ಭರತನಾಟ್ಯ ಮಕ್ಕಳಿಗೆ ಸ್ವರ್ಣಕಲಾರತ್ನ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಯೋಜಿಸಲಾಗಿತ್ತು.

ಕಾರ್ಯಕ್ರಮದ ಉದ್ಘಾಟನೆಯನ್ನು ಬೆಂ.ಉತ್ತರ ವಿಶ್ವವಿದ್ಯಾಲಯದ ಪ್ರಾಧ್ಯಾಪಕರು, ಹಾಗೂ ಪ್ರಸಿದ್ದ ಕವಿಗಳಾದ ಡಾ.ನಾ.ಮುನಿರಾಜ್ ರವರು ದೀಪ ಬೆಳಗಿಸಿ ಮಾತನಾಡುತ್ತಾ “ಗ್ರಾಮೀಣ ಭಾಗದಲ್ಲಿ ಸಂಸ್ಕೃತಿಯ ಉಳಿವಿಗಾಗಿ ಹಾಗೂ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ವೇತಾಂಜಲಿ ಭರತನಾಟ್ಯ ಶಾಲೆಯು ಸುಮಾರು ವರ್ಷಗಳಿಂದ ನೈಜ ಪ್ರತಿಭೆಗಳನ್ನು ಗುರ್ತಿಸಿ, ಪ್ರೋತ್ಸಾಹಿಸಿ, ಈ ನಾಡಿಗೆ ಪರಿಚಯಿಸುವ ಮಹತ್ತರವಾದ ಕಾರ್ಯವನ್ನು ಶ್ರೀಮತಿ ಶ್ವೇತನಾಗರಾಜ್ ದಂಪತಿಗಳು ನಿರಂತರವಾಗಿ ಮಾಡುತ್ತಿರುವುದು ಶ್ಲಾಘನೀಯ, ಇವರ ಸಾಂಸ್ಕೃತಿಕ ಸೇವೆಯ ಪಯಣಕ್ಕೆ ಇಡೀ ರಾಜ್ಯದ ಜನ ನಿಮ್ಮೊಂದಿಗೆ ಇರುವರು” ಎಂದು ಮಾತನಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಮಟ್ಟದ ಕುವೆಂಪು ಅನಿಕೇತನ ರಾಜ್ಯ ಪ್ರಶಸ್ತಿ ಪ್ರದಾನ ಮಾಡಲು ಆಗಮಿಸಿದ್ದ ಚೈತನ್ಯ ಕಲಾನಿಕೇತನ ಸಂಸ್ಥೆಯ ಸಂಸ್ಥಾಪಕರು, ಹಿರಿಯ ಕವಿಗಳಾದ ಶ್ರೀ ಜ.ಮು ಚಂದ್ರ ರವರು ಮಾತನಾಡುತ್ತಾ “ವಿಶ್ವಮಾನವ ಕುವೆಂಪು ಫೌಂಡೇಶನ್ ಹಲವು ವರ್ಷಗಳಿಂದ ಸಾವಿರಾರು ಜನರ ಜೀವಗಳಿಗೆ ಸಂಜಿವೀನಿಯಾಗಿ ರಕ್ತ ನೀಡಿ ಜೀವ ಉಳಿಸುವ ಕಾರ್ಯ ಮಾಡುತ್ತಾ ಬಂದಿರುವುದು ಹೆಮ್ಮೆ. ಪ್ರತಿ ವರ್ಷದಂತೆ ಈ ವರ್ಷವೂ ಸಹ ಧಾರ್ಮಿಕ ಸೇವೆಯನ್ನು, ಚಿಕ್ಕತಿರುಪತಿ ದೇವಾಲಯದ ಅಭಿವೃದ್ಧಿ ಪರಿಗಣಿಸಿ ಉತ್ತಮ ವ್ಯಕ್ತಿಗೆ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿರುವುದು ಸಾರ್ಥಕವಾಗಿದೆ. ಈ ರೀತಿಯ ಸಮಾಜ ಮುಖಿ ಕಾರ್ಯ ಸದಾ ನಡೆಯಲಿ, ಭರತನಾಟ್ಯ ನೃತ್ಯ ಪ್ರದರ್ಶನದ ಮೂಲಕ ಮಕ್ಕಳ ಪ್ರತಿಭೆಗಳಿಗೆ ಪ್ರೋತ್ಸಾಹಿಸುತ್ತಿರುವುದು ಸಂತಸ” ಎಂದರು.

ರಾಜ್ಯ ಮಟ್ಟದ ಕುವೆಂಪು ಅನಿಕೇತನ ಪ್ರಶಸ್ತಿ ಪುರಸ್ಕೃತರಾಗಿ ಬಂದು ಪ್ರಶಸ್ತಿ ಸ್ವೀಕರಿಸಿದ ಶ್ರೀ ಪ್ರಸನ್ನ ವೆಂಕಟರಾಮಣಸ್ವಾಮಿ ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿಗಳಾದ ಟಿ.ಸೆಲ್ವಮಣಿ ರವರು ಮಾತನಾಡುತ್ತಾ “ವಿಶ್ವಮಾನವ ಕುವೆಂಪು ಫೌಂಡೇಶನ್ ನನ್ನ ವಿವಿಧ ಸಮಾಜಮುಖಿ ಕಾರ್ಯಗಳನ್ನು ಗುರ್ತಿಸಿ, ನನ್ನಯ ಜವಾಬ್ದಾರಿಗಳನ್ನು ಹೆಚ್ವಿಸುವ ಹಾದಿಯಲ್ಲಿ ರಾಷ್ಟ್ರಕವಿ ಕುವೆಂಪು ಹೆಸರಿನ ಮೌಲ್ಯತ್ಮಕ ಪ್ರಶಸ್ತಿಯಾದ ಕುವೆಂಪು ಅನಿಕೇತನ ಪ್ರಶಸ್ತಿ ನೀಡಿ ಗೌರವಿಸಿದ ಎಲ್ಲಾರಿಗೂ ನಾ ಅಭಾರಿ ಹಾಗೇ ಶ್ವೇತಾಂಜಲಿ ಭರತನಾಟ್ಯ ಶಾಲೆಯ ಸಾಂಸ್ಕೃತಿಕ ಸೇವೆಗೆ ಸದಾ ನಾ ಬೆಂಬಲವಾಗಿ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ದ” ಎಂದರು.

ಕಾರ್ಯಕ್ರಮದಲ್ಲಿ ಮಾಲೂರು, ಲಕ್ಕೂರು, ಚಿಕ್ಕತಿರುಪತಿ‌ ಹಾಗೂ ದೊಡ್ಡದುನ್ನಸಂದ್ರ ಕ್ರಾಸ್ ನ ಸರಿಸುಮಾರು 60 ಕ್ಕೂ ಅಧಿಕ ಮಂದಿ ಭರತನಾಟ್ಯ ನೃತ್ಯ ಪ್ರದರ್ಶನವನ್ನು ಮಾಡುವ ಮೂಲಕ ನೆರೆದಿದ್ದ ಸಾವಿರಾರು ಪೋಷಕರು, ಭಕ್ತಧಿಗಳ ಮನಸ್ಸು ಗೆದಿದ್ದಾರೆ. ಎಲ್ಲಾ ಮಕ್ಕಳಿಗೆ ಪೋಷಕರ ಜೊತೆಯಾಗಿ ಸ್ವರ್ಣ ಕಲಾರತ್ನ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.

ಈ ಕಾರ್ಯಕ್ರಮದಲ್ಲಿ ಶ್ವೇತಾಂಜಲಿ ಭರತನಾಟ್ಯ ಶಾಲೆ ಹಾಗೂ ವಿಶ್ವಮಾನವ ಕುವೆಂಪು ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಶ್ರೀಮತಿ ಶ್ವೇತನಾಗರಾಜ್, ವಿಶ್ವಮಾನವ ಕುವೆಂಪು ಫೌಂಡೇಶನ್ ರಾಜ್ಯ ಅಧ್ಯಕ್ಷರಾದ ಲಕ್ಕೂರು ಎಂ.ನಾಗರಾಜ್, ರಂಗನಾಥ, ಶ್ವೇತಾಂಜಲಿ ಭರತನಾಟ್ಯ ಶಾಲೆಯ ಪೋಷಕರು, ಮಕ್ಕಳು‌, ಭಕ್ತಧಿಗಳು ಹಾಗೂ‌ ದೇವಾಲಯ ಸಮಿತಿಯವರು ಹಾಜರಿದ್ದರು‌.

Leave a Reply

Your email address will not be published. Required fields are marked *