ತಾಲ್ಲೂಕು ಪದಾಧಿಕಾರಿಗಳ ಆಯ್ಕೆ ಕಾರ್ಯಕ್ರಮ

ಮಾಲೂರು:-
ಅಖಿಲ ಕರ್ನಾಟಕ ಕೊರಚ ಕೊರಮ ಮಹಾಸಭಾ (ರಿ)* ಮಾಲೂರು ತಾಲೂಕು ಸಂಸ್ಥಾಪಕ ಅಧ್ಯಕ್ಷರಾದ ಶ್ರೀಯುತ ಸಂಪತ್ ಕುಮಾರ್ ಹಾಗೂ ತಂಡದ ಸಹಯೋಗದಲ್ಲಿ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ ನಡೆಯಿತು.

ಕೊರಚ ಕೊರಮ ಬಂಧುಗಳ ಸಹಾಯದೊಂದಿಗೆ ಹೊಸದಾಗಿ ಸ್ಥಾಪನೆಗೊಂಡಿರುವ ಅಖಿಲ ಕರ್ನಾಟಕ ಕೊರಚ ಕೊರಮ ಮಹಾಸಭಾ (ರಿ), ಮಾಲೂರು ತಾಲೂಕು ಘಟಕದ ವತಿಯಿಂದ ಮಾಲೂರು ತಾಲೂಕು ಅಧ್ಯಕ್ಷರಾಗಿ ಮಂಜುನಾಥ್.ಎಂ ಮತ್ತು ತಾಲೂಕು ಉಪಾಧ್ಯಕ್ಷರಾಗಿ ಮುರುಗೇಶ್.ಕೆ ಮತ್ತು ತಾಲೂಕು ಸಂಚಾಲಕರಾಗಿ ನವೀನ್ ಕುಮಾರ್, ಕಾರ್ಯದರ್ಶಿ, ಸಹ ಕಾರ್ಯದರ್ಶಿಯಾಗಿ ಮುರಳಿ ಮತ್ತು ಸಂದೀಪ್ ಆಯ್ಕೆ ಮಾಡಲಾಗಿದೆ.

ಈ ಸಂದರ್ಭದಲ್ಲಿ ಘಟಕದ ಸಂಸ್ಥಾಪಕರಾದ ಸಂಪತ್ ಕುಮಾರ್ ರವರು ಮಾತನಾಡಿ ನಮ್ಮ ಸಮುದಾಯ ಆರ್ಥಿಕವಾಗಿ ಹಾಗೂ ಸಾಮಾಜಿಕವಾಗಿ ಹಿಂದುಳಿದಿದ್ದು, ಶಿಕ್ಷಣ ಕ್ಷೇತ್ರದಲ್ಲಿಯೂ ಹಿಂದುಳಿದಿದೆ, ನಮಗೆ ಸಿಗಬೇಕಾದ ಎಲ್ಲಾ ಸೌಲಭ್ಯವನ್ನು ಪಡೆಯಲು ಸರ್ಕಾರ ಹಾಗೂ ಅಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದರು. ಅಲ್ಲದೆ ಎಲ್ಲರ ಏಳಿಗೆಗಾಗಿ ನಮ್ಮ ಸಂಘಟನೆ ಜೊತೆಗೆ ಶ್ರಮಿಸಲಾಗುವುದು ಎಂದು ತಿಳಿಸಿದರು.

ಈ ಸಂದರ್ಭದಲ್ಲಿ
ಮುರಳಿ, ಶ್ರೀನಿವಾಸ್ ಸಮುದಾಯ ಹಿರಿಯರಾದಂತಹ ಸೋಮಣ್ಣ, ಶಂಕರಪ್ಪ, ಮಹೇಶ್, ಮನೋಹರ್ ಹಾಗೂ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *