ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆ ವೇಳೆ ಡಾ. ಬಿಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರಿದ ತಾಲ್ಲೂಕು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಶಿಕ್ಷಕರ ನಡೆ ಖಂಡನೀಯ ಎಂದು ದಮನಿತರ ಸಂಘರ್ಷ ಸಮಿತಿ ಸಂಸ್ಥಾಪಕ ಫ್ರೆಂಡ್ಸ್ ಸಂತೋಷ್ ಅವರು ಹೇಳಿದರು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆ ವೇಳೆ ಡಾ. ಬಿಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರಿದ ತಾಲ್ಲೂಕು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಶಿಕ್ಷಕರ ನಡೆ ಖಂಡನೀಯ ಎಂದು ದಮನಿತರ ಸಂಘರ್ಷ ಸಮಿತಿ ಸಂಸ್ಥಾಪಕ ಫ್ರೆಂಡ್ಸ್ ಸಂತೋಷ್ ಅವರು ಹೇಳಿದರು.

ಪಟ್ಟಣದ ಡಾ. ಬಿ.ಆರ್ ಅಂಬೇಡ್ಕರ್ ಉದ್ಯಾನವನದಲ್ಲಿ ತಾಲ್ಲೂಕು ದಸಂಸ ವತಿಯಿಂದ ಆಯೋಜಿಸಿದ್ದ ಪ್ರಗತಿ ಪರ ಹೋರಾಟಗಾರ್ತಿ ಗೌರಿ ಲಂಕೇಶ್ ಅವರ 6 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಪ್ರಸ್ತುತ ಕಾಲಘಟ್ಟದಲ್ಲಿ ಸಮಾಜದಲ್ಲಿ ಯಾರಿಗೂ ಎದರದೆ ನೇರವಾಗಿ ಪ್ರಶ್ನೆ ಮಾಡುತ್ತಾ ಎಲ್ಲಾ ಸಮುದಾಯದ ಬಡವರ ಶೋಷಿತರ ಪರ ಧ್ವನಿಯಾಗಿ ಹೋರಾಟ ಮಾಡುತ್ತಿದ್ದ ಏಕೈಕ ನಾಯಕಿ ಗೌರಿ ಲಂಕೇಶ್ ಅವರು ಆದರೆ ಕೆಲ ಮನುವಾದಿಗಳು ಅವರ ಹೋರಾಟವನ್ನು ಸಹಿಸಲಾರದೆ ಅವರನ್ನು ಆರು ವರ್ಷದ ಹಿಂದೆ ಅವರ ಮನೆಯ ಬಳಿ ಗುಂಡಿಕ್ಕಿ ಕೊಲ್ಲುತ್ತಾರೆ. ಅವರಿಗೆ ನ್ಯಾಯ ಕೊಡಿಸಲು ಅನೇಕ ಹೋರಾಟಗಳನ್ನು ಮಾಡಿದ್ದು ಹಾಗೂ ಪ್ರಸ್ತುತ ಆ ಧೈರ್ಯ ಯಾರಲ್ಲೂ ಇಲ್ಲ ಅವರ ನೆನಪಿನಲ್ಲಿ ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದು. ಪ್ರತಿವರ್ಷದಂತೆ ಈ ವರ್ಷವು ಅವರ 6 ನೇ ವರ್ಷದ ಪುಣ್ಯ ಸ್ಮರಣೆ ಕಾರ್ಯಕ್ರಮ ಆಯೋಜಿಸಿದ್ದೇವೆ. ಇನ್ನೂ ಇಂದು ಶಿಕ್ಷಕರ ದಿನಾಚರಣೆಯನ್ನು ಎಲ್ಲಾ ಕಡೆ ಆಚರಿಸುತ್ತಿದ್ದು. ನಮ್ಮ ಪಟ್ಟಣದಲ್ಲಿ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಶಾಲಾ ಶಿಕ್ಷಣ ಇಲಾಖೆ ವತಿಯಿಂದ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದ ಮೆರವಣಿಗೆಯು ಡಾ. ಬಿ.ಆರ್ ಅಂಬೇಡ್ಕರ್ ಉದ್ಯಾನವನದ ಮುಂದೆ ಸಾಗಿದ್ದು ಈ ವೇಳೆ ತಾಲ್ಲೂಕು ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡ ಶಿಕ್ಷಕರು ಡಾ. ಬಿ.ಆರ್ ಅಂಬೇಡ್ಕರ್ ಪುತ್ಥಳಿಗೆ ಮಾಲಾರ್ಪಣೆ ಮಾಡದೆ ನಿರ್ಲಕ್ಷ್ಯ ಧೋರಣೆ ತೋರಿದ್ದು ಬೇಸರ ಉಂಟುಮಾಡಿದೆ ಅಲ್ಲದೆ ಅವರ ನಡೆ ಖಂಡನೀಯವಾಗಿದೆ. ಡಾ. ಬಿಆರ್ ಅಂಬೇಡ್ಕರ್ ಅವರು ನೀಡಿರುವ ಮೀಸಲಾತಿಯಲ್ಲಿ ಶಿಕ್ಷಣ ಮತ್ತು ನೌಕರಿ ಪಡೆದು ಬಾಯಲ್ಲಿ ಅಂಬೇಡ್ಕರ್ ಅವರ ತತ್ವಗಳನ್ನು ಹೇಳುತ್ತಾರೆ ಆದರೆ ಅವರು ನಡೆಯುವ ದಾರಿ ಬೇರೆ. ಇದಕ್ಕೆ ಉದಾಹರಣೆಯಂತೆ ಪಟ್ಟಣದ ಸರ್ಕಾರಿ ಬಾಲಕಿಯರ ಕಾಲೇಜಿನಲ್ಲಿ ಕಳೆದ ಸ್ವಾತಂತ್ರ್ಯ ದಿನದಂದು ಅಂಬೇಡ್ಕರ್ ಅವರ ಭಾವಚಿತ್ರ ಇಡದೆ ಕಾರ್ಯಕ್ರಮ ಮಾಡಿದ್ದು ಇಲ್ಲಿ ಎಲ್ಲಾ ಪ್ರೊಫೆಸರ್ ಮತ್ತು ಉನ್ನತ ಶಿಕ್ಷಕರೇ ಇರುವುದು ಆದರೆ ಕನಿಷ್ಠ ಸರ್ಕಾರದ ಆದೇಶದಂತೆ ಭಾವಚಿತ್ರ ಇಟ್ಟು ಗೌರವ ಸಲ್ಲಿಸಲು ಆಗಲಿಲ್ಲ. ಇತ್ತೀಚಿಗೆ ಸಾಮಾಜಿಕ ಜಾಲತಾಣದಲ್ಲಿ ಒಂದು ವಿಡಿಯೋ ನೋಡಿದೆ ಅದರಲ್ಲಿ ಕೆಲ ಶಿಕ್ಷಕರು ಸನ್ಮಾನಗಳಿಗೆ ಕಿತ್ತಾಟ ನಡೆಸಿದ ಘಟನೆ ಇತ್ತು ಆದರೆ ನಿಜವಾಗಿಯೂ ಆ ಸ್ಥಾನಗಳನ್ನು ನೀಡಿದವರನ್ನು ಮರೆತು ಅವರನ್ನು ಕಡೆಗಣಿಸುತ್ತಿರುವುದು ದುರಂತ ಇನ್ನಾದರೂ ಡಾ. ಬಿಆರ್ ಅಂಬೇಡ್ಕರ್ ಅವರ ವಿಚಾರದಲ್ಲಿ ಈ ರೀತಿಯ ಘಟನೆಗಳನ್ನು ಮರುಕಳಿಸದಂತೆ ಎಚ್ಚರವಹಿಸಬೇಕು ಇಲ್ಲವಾದಲ್ಲಿ ನಮ್ಮವರ ವಿರುದ್ಧವೂ ಹೋರಾಟಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ದಸಂಸ (ಅಂಬೇಡ್ಕರ್ ವಾದ) ಜಿಲ್ಲಾ ಸಂಘಟನಾ ಸಂಚಾಲಕ ಲಕ್ಕೂರು ವೆಂಕಟೇಶ್, ವಡಗನಹಳ್ಳಿ ರಮೇಶ್, ಸೊಣ್ಣೂರು ಗೋವಿಂದ್, ಸೊಣ್ಣೂರು ಮುನಿರಾಜ್, ಅಜಯ್,ಕಸ್ತೂರಿ ಕರ್ನಾಟಕ ರಕ್ಷಣಾ ವೇದಿಕೆ ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ್ ಇನ್ನಿತರರು ಇದ್ದರು.

Leave a Reply

Your email address will not be published. Required fields are marked *