ಕ್ರೈಸ್ಟ್ ಕಾಲೇಜಿಗೆ ಇಂಡಿಯಾ ಬುಕ್ ಆಪ್ ರೆಕಾರ್ಡ್ ಗರಿ

ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮದಲ್ಲಿ ಹಮ್ಮಿಕೊಂಡಿದ್ದ ಪ್ಲಾಸ್ಟಿಕ್ ನಿರ್ಮೂಲನೆಯ ಬಗ್ಗೆ ಪರಿಸರ ಜಾಗೃತಿ ಮೂಡಿಸುವ ಘೋಷಣೆಯ ವಾಕ್ಯಗಳನ್ನು ೨೭೧ ಭಾಷೆಗಳಲ್ಲಿ ಕಾಲೇಜಿನ ಎಲ್ಲಾ ವಿದ್ಯಾರ್ಥಿಗಳು ಹೇಳುವುದರ ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ಸಾಧನೆಯ ದಾಖಲೆಯಾಗಿದೆ ಎಂದು ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಆಡ್ಯುಜಕೇಟರ್ ಹರೀಶ್.ಆರ್ ಹೇಳಿದರು.
ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಆಲಂಬಾಡಿ ಗೇಟ್‌ನಲ್ಲಿರುವ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಕಾಮರ್ಸ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಗುರುವಾರ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ವತಿಯಿಂದ ಪಧಕ ಹಾಗೂ ಪ್ರಶಸ್ತಿ ಪತ್ರವನ್ನು ವಿತರಿಸಿ ಕಾರ್ಯಕ್ರಮವನ್ನು ಕುರಿತು ಮಾತನಾಡಿದರು.
ವಿಶ್ವಪರಿಸರ ದಿನಾಚರಣೆ ಅಂಗವಾಗಿ ಆಚರಣೆ ಕಾರ್ಯಕ್ರಮದಲ್ಲಿ ಕಾಲೇಜಿನ ೨೭೧ ವಿದ್ಯಾರ್ಥಿಗಳು ಭಾರತದ ದೇಶದ ೨೭೧ ಭಾಷೆಯಲ್ಲಿ ಪರಿಸರ ಉಳಿಸುವ ಬಗ್ಗೆ ಘೋಷ ವಾಕ್ಯಗಳನ್ನು ರಚಿಸಿ ಹೇಳುವು ಮೂಲಕ ಇಂಡಿಯಾ ಬುಕ್ ಆಫ್ ರೆಕಾರ್ಡ್ನಲ್ಲಿ ದಾಖಲೆಯಾಗಿದೆ ಇದು ದೇಶದಲ್ಲೆ ಪ್ರಥಮ ಹಾಗೂ ವಿಶೇಷ ಪ್ರಯತ್ನವಾಗಿದೆ. ಅದಕ್ಕಾಗಿಯೇ ಇಂಡಿಯಾ ಬುಕ್ ಆಫ್ ರೆಕಾರ್ಡ್ ಸಂಸ್ಥೆಯು ಇಂತಹ ವಿಶೇಷ ದಾಖಲೆಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿ, ಉಪನ್ಯಾಸಕರು ಹಾಗೂ ಪ್ರಿನ್ಸಿಪಾಲ್ ಅವರ ಸಾಧನೆಯಾಗಿದೆ. ಇಂತಹ ಸಾಧನೆಗೆ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಪ್ರಶಸ್ತಿ ಪಧಕ ನೀಡಿರುವುದು ತಾಲೂಕು, ಜಿಲ್ಲೆ ಹಾಗೂ ನಮ್ಮ ರಾಜ್ಯಕ್ಕೆ ಹೆಮ್ಮೆಯಾಗಿದೆ.
ಪದವಿ ಕಾಲೇಜಿನ ಪ್ರಿನ್ಸಿಪಾಲ್ ರೆವರೆಂಡ್ ಫಾದರ್ ಜಿನ್ಸ್ ಚಾರ್ಜ್ ಮಾತನಾಡಿ ಇಂದಿನ ದಿನಗಳಲ್ಲಿ ಜಾಗತಿಕ ತಾಪಮಾನ ತುಂಬಾ ಏರಿಕೆಯಾಗಿದ್ದು ಪರಿಸರ ಸಮತೋಲನದಲ್ಲಿ ಇರಬೇಕಾದರೆ ನಾವು ಸಂಪೂರ್ಣವಾಗಿ ಪ್ಲಾಸ್ಟಿಕ್‌ನ್ನು ನಿಷೇಧ ಮಾಡಬೇಕಾಗಿದೆ. ಪ್ರಕೃತಿಯಲ್ಲಿ ಪ್ಲಾಸ್ಟೀಕ್‌ನಿಂದಾಗಿ ಅಸಮತೋಲನವಾಗುತ್ತಿದೆ. ಪರಿಸರ ಮಲೀನವಾಗಿ ಶುದ್ದಗಾಳಿ ದೊರೆಯದಂತಾಗಿದೆ. ಕೋವಿಡ್-೧೯ರÀಲ್ಲಿ ಉಸಿರಾಟದ ತೊಂದರೆಯಿAದ ಪ್ರಾಣವನ್ನು ಉಳಿಸಿಕೊಳ್ಳಲು ಆಕ್ಸಿಜನ್‌ಗಾಗಿ ಸಾವಿರಾರು ಹಣವನ್ನು ಖರ್ಚು ಮಾಡಿದರೂ ಹಲವಾರು ಜನ ಪ್ರಾಣಗಳನ್ನು ತೊರೆದರು. ಇನ್ನು ಮುಂದೆ ಇಂತಹ ಅವಗಢಗಳು ಸಂಭವಿಸದ ಹಾಗೆ ಉತ್ತಮವಾದ ಪರಿಸರವನ್ನು ಉಳಿಸಿ ರಕ್ಷಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದರು
ಈ ಸಂದರ್ಭದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಆಡ್ಯುಜಕೇಟರ್ ಹರೀಶ್.ಆರ್ ಅವರು ಕ್ರೆöÊಸ್ಟ್ ಕಾಲೇಜಿಗೆ ಪಧಕ ಹಾಗೂ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಕಾಲೇಜಿನ ಪ್ರಿನ್ಸಿಪಾಲ್ ರೆವರೆಂಡ್‌ಫಾದರ್ ಜಿನ್ಸ್ಜಾರ್ಜ್, ಉಪ ಪ್ರಿನ್ಸಿಪಾಲರಾದ ರೆವರೆಂಡ್ ಫಾದರ್ ಎಬಿನ್ ಫ್ರಾನ್ಸಿಸ್, ಕ್ರೈಸ್ಟ್ ಇಂಟರ್ನ್ಯಾಷನಲ್ ಶಾಲೆಯ ಪ್ರಿನ್ಸಿಪಾಲರಾದ ಫಾದರ್ ರೋನರ್ಸ್, ವಾಣಿಜ್ಯ ವಿಭಾಗದ ಎಚ್‌ಒಡಿ ಶಿವಗಾಮಿ, ಪ್ರಾಧ್ಯಪಕರಾದ ಜೋಸ್ ಪ್ರಾನ್ಸಿಸ್, ಜೋಸ್ನಾ ಕುರಿಯಾಕೋಸ್ ಹಾಜರಿದ್ದರು.
ಪೋಟೊ ೧. ಚಿಕ್ಕತಿರುಪತಿ ಗ್ರಾಪಂ ವ್ಯಾಪ್ತಿಯ ಆಲಂಬಾಡಿ ಗೇಟ್‌ನಲ್ಲಿರುವ ಕ್ರೈಸ್ಟ್ ಕಾಲೇಜ್ ಆಫ್ ಸೈನ್ಸ್ ಅಂಡ್ ಮ್ಯಾನೇಜ್ಮೆಂಟ್ ಕಾಲೇಜಿನ ಸಭಾಂಗಣದಲ್ಲಿ ಇಂಡಿಯಾ ಬುಕ್ ಆಫ್ ರೆಕಾರ್ಡ್ನ ಆಡ್ಯುಜಕೇಟರ್ ಹರೀಶ್.ಆರ್ ಅವರು ಕ್ರೆöÊಸ್ಟ್ ಕಾಲೇಜಿಗೆ ಪಧಕ ಹಾಗೂ ಪ್ರಶಸ್ತಿ ಪತ್ರವನ್ನು ಹಸ್ತಾಂತರಿಸಿದರು.

Leave a Reply

Your email address will not be published. Required fields are marked *