ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ

ಮಾಲೂರು: ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ವತಿಯಿಂದ ಪಟ್ಟಣದ ಕೋಚಿಮುಲ್ ಶಿಬಿರ ಕಛೇರಿಯಲ್ಲಿ ಮಾಲೂರು ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರ ಮತ್ತು ಮುಖ್ಯ ಕಾರ್ಯ ನಿರ್ವಾಹಕರ ಪ್ರಾದೇಶಿಕ ಸಭೆಯನ್ನು ಆಯೋಜಿಸಲಾಗಿತ್ತು.

ಈ ವೇಳೆ ಮಾತನಾಡಿದ ಶಾಸಕ ಹಾಗೂ ಕೋಮುಲ್ ಅಧ್ಯಕ್ಷ ಅವರು ಕಳೆದ ಐದು ವರ್ಷಗಳಿಂದ ಹಾಲು ಉತ್ಪಾದಕರ ಅಭಿವೃದ್ಧಿಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ದಿಂದ ಹಲವಾರು ಕಾರ್ಯಕ್ರಮಗಳನ್ನು ತಂದಿದ್ದು ಜೊತೆಗೆ ಅತಿ ಹೆಚ್ಚಿನ ಧರವನ್ನು ನೀಡುತ್ತಿದ್ದು ನನ್ನ ಆಡಳಿತ ಮಂಡಳಿಯ ಮತ್ತು ಅಧಿಕಾರಿಗಳ ಸಹಕಾರದಿಂದ ಹಾಲು ಉತ್ಪಾದಕರ ಉತ್ತಮ ನಿರ್ಣಯಗಳನ್ನು ತೆಗೆದುಕೊಂಡಿದ್ದೇನೆ. ರಾಸುಗಳ ವಿಮೆಯನ್ನು 25 ಸಾವಿರದಿಂದ 70 ಸಾವಿರರೂಗಳಿಗೆ ಏರಿಸಿದ್ದು, ವಿಮೆಯನ್ನು 2 ಕಂತುಗಳಾಗಿ ಕಟ್ಟಲು ಅವಕಾಶ ಮಾಡಿದ್ದು, ಹಾಲು ಉತ್ಪಾದಕರ ಸಂಘಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬ್ಬಂದಿಗಳಿಗೆ ನಿವೃತ್ತಿ ನಂತರ ಗ್ರ್ಯಾಚುಟಿ ಹಣ ನೀಡುವ ಕಾರ್ಯಕ್ರಮ,ಇನ್ನೂ ತಾಲ್ಲೂಕಿನಲ್ಲಿ ಸುಮಾರು ಹತ್ತು ಬಿ ಎಮ್ ಸಿ ಕೇಂದ್ರಗಳಿಗೆ ಸೋಲಾರ್ ಅಳವಡಿಸಿದ್ದು, ಹಾಲು ಉತ್ಪಾದಕರ ಸಂಘಗಳ ಸ್ವಂತ ಕಟ್ಟಡ ನಿರ್ಮಾಣಕ್ಕೆ ಸಹಕಾರ ನೀಡಿರುವುದು. ಇನ್ನೂ ಒಕ್ಕೂಟದಿಂದ 185 ಕೋಟಿಯಲ್ಲಿ ಎಂ ವಿ ಕೆ ಡೈರಿ, 50 ಕೋಟಿಯಲ್ಲಿ ಸೋಲಾರ್ ಪ್ಲಾಂಟ್, 50 ಕೋಟಿಯಲ್ಲಿ ಚಿಂತಾಮಣಿಯಲ್ಲಿ ಐಸ್ ಕ್ರೀಮ್ ಪ್ಲಾಂಟ್ ಮಾಡಲು ತೀರ್ಮಾನಿಸಿದ್ದು ಕೆಲಸಗಳು ಶೀಘ್ರದಲ್ಲೇ ಪ್ರಾರಂಭ ವಾಗಲಿವೆ. ಇಂದು ನಡೆಯುತ್ತಿರುವ ಈ ಸಭೆಯಲ್ಲಿ ನೀವು ಭಾಗಿಯಾಗಿ ಎಲ್ಲಾ ವಿಷಯಗಳನ್ನು ತಿಳಿಯಬೇಕು ಇನ್ನೂ ತಾಲ್ಲೂಕಿನಲ್ಲಿ 130 ಸಂಘಗಳಿಂದ 171 ಹಾಲು ಉತ್ಪಾದಕರ ಸಹಕಾರ ಸಂಘಗಳು ಹೆಚ್ಚಾಗಿವೆ ಸುಮಾರು ನಲವತ್ತುಕ್ಕೂ ಹೆಚ್ಚು ಸ್ವಂತ ಕಟ್ಟಡಗಳನ್ನು ನಿರ್ಮಾಣವಾಗಿದೆ. ಮೊದಲು ತಾಲ್ಲೂಕಿನ ಹಾಲಿನ ಗುಣಮಟ್ಟ 55% ಇದ್ದದ್ದು ಈಗ 95% ಹೆಚ್ಚಿದೆ ಇವೆಲ್ಲಾ ನಾನು ಅಧ್ಯಕ್ಷನಾದ ಗಣನೀಯವಾಗಿ ಹೆಚ್ಚಿದ್ದು ಇನ್ನೂ ರಾಜ್ಯ ಸರ್ಕಾರ ಈಗ 3 ರೂಪಾಯಿ ಬೆಲೆ ಹೆಚ್ಚಿಸಿ ನೇರವಾಗಿ ರೈತರಿಗೆ ನೀಡುತ್ತಿದೆ ಅದನ್ನು ಮುಂದಿನ ದಿನಗಳಲ್ಲಿ 5 ರೂಪಾಯಿ ಮಾಡಲು ಪ್ರಯತ್ನಿಸಿ ಎಲ್ಲಾ ರೀತಿಯಲ್ಲಿ ಹಾಲು ಉತ್ಪಾದಕರ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಕೋಲಾರ ಜಿಲ್ಲಾ ಮಹಿಳಾ ನಿರ್ದೇಶಕರಾದ ಕಾಂತಮ್ಮ ಸೋಮಣ್ಣ, ಅಂಜನಿ ಸೋಮಣ್ಣ, ಕೋಚಿಮುಲ್ ವ್ಯವಸ್ಥಾಪಕ ನಿರ್ದೇಶಕ ಕೆ ಎನ್ ಗೋಪಾಲಮೂರ್ತಿ, ಶ್ರೀನಿವಾಸ್ ಗೌಡ, ಉಪ ವ್ಯವಸ್ಥಾಪಕ ಡಾ.ಲೋಹಿತ್, ಕೃಷ್ಣಾ ರೆಡ್ಡಿ ಸೇರಿದಂತೆ ತಾಲ್ಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಕೋಚಿಮುಲ್ ಶಿಬಿರ ಕಛೇರಿಯ ಸಿಬ್ಬಂದಿಗಳು ಇದ್ದರು.

Leave a Reply

Your email address will not be published. Required fields are marked *