ಕುಡಿದ ಮತ್ತಿನಲ್ಲಿ ಪತ್ನಿಯನ್ನು ಕೊಂದ ಪತಿ.!

ಅವರಿಬ್ಬರು ಒಬ್ಬರನ್ನೊಬರು ಪ್ರೀತಿಸಿ ಮನೆಯವರನ್ನು ಒಪ್ಪಿಸಿ ಮದುವೆ ಆಗಿದ್ರು.ನನಗೆ ನೀನು ನಿನಗೆ ನಾನು ಅಂತ ದೂರದ ಊರಿಗೆ ಬಂದು ಕಷ್ಟಪಟ್ಟು ಜೀವನ ಸಾಗಿಸುತ್ತಿದ್ದರು.ಆದ್ರೆ ದಿನ ಕಳೆದಂತೆ ಪತಿಯ ಕುಡಿತದ ಚಟ ಇಡೀ ಸಂಸಾರವನ್ನೇ ಹಾಳು ಮಾಡಿ,12 ವರ್ಷದ ಪ್ರೀತಿ ಕೊಲೆಯಲ್ಲಿ ಅಂತ್ಯವಾಗುವಂತೆ ಮಾಡಿದೆ.ಈ ಕುರಿತ ಸ್ಟೋರಿ ಇಲ್ಲಿದೆ.

ಮಗಳ ಹೆಣದ ಮುಂದೆ ತಂದೆಯ ಗೋಳಾಟ.ಅವನನ್ನು ಸುಮ್ನೆ ಬಿಡ್ಬೇಡಿ ಎಂದು ಮೃತಳ ತಮ್ಮನ ಆಕ್ರಂದನ.ಮನೆಯಲ್ಲೇ ಶವವಾಗಿ ಬಿದ್ದಿರುವ ಮಹಿಳೆ. ಈಗೆ ಹೆಣದ ಮುಂದೆ ಗೋಳಾಡುತ್ತಿರುವ ದೃಶ್ಯಗಳು ಕಂಡು ಬಂದಿದ್ದು ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಸರ್ಕಾರಿಯ ಶವಗಾರದ ಮುಂಭಾಗ.ಹೀಗೆ ಪತಿಯಿಂದಲೇ ಕೊಲೆಯಾಗಿ ಹೆಣವಾಗಿ ಬಿದ್ದಿರುವ 30 ವರ್ಷ ವಯಸ್ಸಿನ ಈಕೆಯ ಹೆಸರು ಶಹನಾಜ್.ಫೋಟೋದಲ್ಲಿ ಕಾಣಿಸುತ್ತಿರುವ 40 ವರ್ಷ ವಯಸ್ಸಿನ ಈತನ ಹೆಸರು ರಫಿಕ್.ಮೂಲತಃ ಹಾವೇರಿ ಜಿಲ್ಲೆಯವನು ಆಗಿರುವ ರಫಿಕ್ ಒಳ್ಳೆಯ ಜೆಸಿಬಿ ಆಪರೇಟರ್ ಅಂತ ಹೆಸರುಗಳಿಸಿದ್ರು ಸಹ ಸರಿಯಾಗಿ ಕೆಲಸಕ್ಕೆ ಹೋಗದೆ ಬೆಳಿಗ್ಗೆಯಿಂದ ರಾತ್ರಿವರೆಗೂ ಕುಡಿಯೋದನ್ನೇ ಕಾಯಕ ಮಾಡಿಕೊಂಡಿದ್ದ.ಯಾರು ಏನೇ ಬುದ್ಧಿವಾದ ಹೇಳಿದ್ರು ಸಹ, ಮಾತು ಕೇಳದೇ ಕಳೆದ ಒಂದು ವರ್ಷದಿಂದ ಕುಡಿದು ಬಂದು ಹೆಂಡತಿ ಶಹನಾಜ್ ನ ಮನಬಂದಂತೆ ಥಳಿಸೋದು ರೂಢಿ ಮಾಡಿಕೊಂಡಿದ್ದ.ವರ್ಷದ ಹಿಂದೆಯೂ ಹೆಂಡತಿಯ ಕಾಲಿಗೆ ಕೊಡಲಿಯಿಂದ ಹಲ್ಲೆ ಮಾಡಿ ಆಫ್ ಮರ್ಡರ್ ಕೇಸ್ ನಲ್ಲಿ ಸೆರೆವಾಸನು ಅನುಭವಿಸಿ ಸಹ ಬಂದಿದ್ದಾನೆ.ನಾನು ಸರಿ ಆಗಿದ್ದೇನೆ ಇನ್ಮುಂದೆ ತಪ್ಪು ಮಾಡಲ್ಲ ಕ್ಷಮಿಸು ಎಂದು ಹೆಂಡತಿಯ ಬಳಿ ರಾಜಿ ಮಾಡಿಕೊಂಡು ಬಂದಿದ್ದ ರಫಿಕ್ ಮತ್ತೆ ಅದೇ ಚಾಳಿ ಮುಂದುವರೆಸಿದ್ದ.ಆದ್ರೆ ತಡರಾತ್ರಿ ಅದೇನಾಯ್ತೋ ಗೊತ್ತಿಲ್ಲ ಕೆಲಸ ಮುಗಿಸಿಕೊಂಡು ಟೈಟಾಗಿ ಮಾಲೂರು ತಾಲೂಕಿನ ರಾಜೀವ್ ನಗರದಲ್ಲಿ ತಮ್ಮ ಬಾಡಿಗೆ ಮನೆಗೆ ಬಂದವನೇ ಹೆಂಡತಿಯ ಮೇಲೆ ವಿಪರೀತ ಕೂಗಾಡೋದಕ್ಕೆ ಆರಂಭ ಮಾಡಿದ್ದಾನೆ,ಇಬ್ಬರ ನಡುವೆ ಮಾತಿಗೆ ಮಾತು ಸಹ ಬೆಳೆದಿದೆ.ಕೊನೆಗೆ ರಫಿಕ್ ನ ಕೋಪ ವಿಕೋಪಕ್ಕೆ ತಿರುಗಿ ಹೆಂಡತಿ ಶಹನಾಜ್ ಳ ತಲೆ ಹಾಗೂ ಮುಖಕ್ಕೆ ರಾಡ್ ನಿಂದ ಹಲ್ಲೆ ಮಾಡಿ ಕೊಂದಿದ್ದಾನೆ,ಯಾರಿಗೂ ಅನುಮಾನ ಬರದ ರೀತಿ ಮನೆಯ ಬಾಗಿಲನ್ನು ಮುಚ್ಚಿ ತನ್ನ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ತಲೆ ಮರೆಸಿಕೊಂಡಿದ್ದಾನೆ.ಮಧ್ಯಾಹ್ನ ಆದ್ರೂ ಯಾರು ಹೊರಗೆ ಬಂದಿಲ್ವಲ್ಲಾ ಎಂದು ಅನುಮಾನಗೊಂಡ ಪಕ್ಕದ ಮನೆಯವರು ಬಂದು ನೋಡಿದಾದ ಹಾಸಿಗೆಯಲ್ಲಿ ಶಹನಾಜ್ ಮೃತ ದೇಹವನ್ನು ಕಂಡು ಮಾಲೂರು ಪೊಲೀಸರು ಹಾಗೂ ಆಕೆಯ ಕುಟುಂಬಸ್ಥರಿಗೆ ತಿಳಿಸಿದ್ದಾರೆ.
ಇನ್ನು ಶಹನಾಜ್  ಮೂಲತಃ ಹಾವೇರಿ ಜಿಲ್ಲೆಯವಳು,ರಫಿಕ್ ಶಿವಮೊಗ್ಗ ಜಿಲ್ಲೆಯವನು.12 ವರ್ಷಗಳ ಹಿಂದೆ ಶಹನಾಜ್ ನ ಊರಿನಲ್ಲಿ ಜೆಸಿಬಿ ಆಪರೇಟರ್ ಕೆಲಸಕ್ಕೆಂದು ಬಂದಾಗ ಇಬ್ಬರ ನಡುವೆ ಪ್ರೀತಿ ಆರಂಭವಾಗುತ್ತೆ.ಕೂಲಿ ಕೆಲಸ ಮಾಡುವ ಶಹನಾಜ್ ನ ಪೋಷಕರು ಇವನ ಸಹವಾಸ ಬೇಡ ಒಳ್ಳೆಯ ಕಡೆಯಲ್ಲಿ ಮದುವೆ ಮಾಡ್ತೀವಿ ಅಂತ ಗೋಗರೆದರು ಅವನೇ ಬೇಕು ಅಂತ ಹಠ ಹಿಡಿದ ಪರಿಣಾಮ ಎರಡು ಮನೆಯವರು ಸೇರಿ ಮದುವೆ ಮಾಡ್ತಾರೆ.ಜೆಸಿಬಿ ಆಪರೇಟರ್ ಆಗಿರುವ ರಫಿಕ್ ಆರಂಭದ ಎರಡು ವರ್ಷ ಪತಿಯನ್ನು ಚೆನ್ನಾಗಿ ನೋಡಿಕೊಳ್ತಿದ್ದ,ಕೋಲಾರ ಜಿಲ್ಲೆಯ ಮಾಲೂರು ತಾಲೂಕಿಗೆ ಬಂದು ಜೆಸಿಬಿ ಆಪರೇಟರ್ ಆಗಿ ಕೆಲಸಕ್ಕೆ ಸೇರಿ ರಾಜೀವ ನಗರದಲ್ಲಿ ಮನೆ ಮಾಡಿ ಇಬ್ಬರು ಜೀವನ ಸಾಗಿಸುತ್ತಿದ್ದರು.ಆದ್ರೆ ಸ್ನೇಹಿತರ ಸಹವಾಸಕ್ಕೆ ಬಿದ್ದು ಕುಡಿತ ಆರಂಭ ಮಾಡಿದ ಬಳಿಕ ಸಂಸಾರದಲ್ಲಿ ಬಿರುಕು ಆರಂಭವಾಯ್ತು.ಇದರ ನಡುವೆ ಮದುವೆಯಾಗಿ 12 ವರ್ಷ ಆದ್ರೂ ಸಹ ಇಬ್ಬರಿಗೂ ಮಕ್ಕಳಾಗಿಲ್ಲ ಅನ್ನೋ ಕೊರಗು ಬೇರೆ ಇತ್ತು,ಈ ವಿಚಾರವಾಗಿ ತಲೆಕೆಡಿಸಿಕೊಂಡಿದ್ದರು.ಇದಕ್ಕಿಂತ ಮಿಗಿಲಾಗಿ ಬೆಳಿಗ್ಗೆ 6 ಗಂಟೆಗೆ ಕುಡಿಯೋದಕ್ಕೆ ಆರಂಭಿಸಿದ ರಫಿಕ್ ಬಳಿ ಹಣ ಇಲ್ಲದೆ ಪರದಾಡುವ ಪರಿಸ್ಥಿತಿ ನಿರ್ಮಾಣವಾಗ್ತಿದ್ದಂತೆ ಜೆಸಿಬಿ ಮಾಲೀಕರು ಸೇರಿದಂತೆ ಊರೆಲ್ಲ ಸಾಲ ಮಾಡೋದು ಶುರು ಮಾಡಿದ್ದ.ಸ್ತ್ರೀ ಸಂಘದಲ್ಲಿ ಪತ್ನಿ ಶಹನಾಜ್ ಮೂಲಕ ಹಣ ಪಡೆದು ಮರುಪಾವತಿ ಮಾಡದೆ ತಿರುಗಾಡುತ್ತಿದ್ದ.ಈ ವಿಚಾರವಾಗಿ ತಡ ರಾತ್ರಿ ಇಬ್ಬರ ನಡುವೆ ಮಾತಿಗೆ ಮಾತು ಬೆಳೆದಿದೆ,ಕೋಪ ವಿಕೋಪಕ್ಕೆ ತಿರುಗಿ ಕುಡಿದ ಮತ್ತಿನಲ್ಲಿ ಪತ್ನಿ ಶಹನಾಜ್ ನ ಕೊಂದು ಎಸ್ಕೇಪ್ ಆಗಿದ್ದಾನೆ.ಇನ್ನು ಮಗಳ ಕಷ್ಟ ಅರಿತು ಹಲವಾರು ಬಾರಿ ಪೋಷಕರು ಮನೆಗೆ ಬಂದುಬಿಡು ಅಂತ ಕರೆದರು ಪತಿಯನ್ನು ಒಬ್ಬನ್ನೇ ಬಿಟ್ಟು ಬರೋದಿಲ್ಲ,ನಾನು ಸತ್ತರೂ ಇವನ ಜೊತೆನೆ ಅಂತ ಹೇಳುತ್ತಿದ್ದಳಂತೆ.ಇದರ ನಡುವೆ ಅಕ್ರಮ ಸಂಬಂಧ ಸಹ ರಫಿಕ್ ಹೊಂದಿದ್ದ ಅಂತ ಹೇಳಲಾಗ್ತಿದ್ದು,ತಲೆಮರಿಸಿಕೊಂಡು ತಿರುಗಾಡ್ತಿರುವ ಆರೋಪಿ ರಫಿಕ್ ಗಾಗಿ ಮಾಲೂರು ಪೊಲೀಸರು ಬಲೆ ಬೀಸಿದ್ದಾರೆ.
ಒಟ್ಟಾರೆ ಪೋಷಕರು ಬುದ್ದಿವಾದ ಹೇಳಿದ್ರು ಕೇಳದ ಮಗಳು ಇವತ್ತು ಸಾವಿನ ಮನೆ ಸೇರಿದ್ದಾಳೆ.ಪ್ರೀತಿಸಿ ಮದುವೆಯಾದ ಪತಿಯಿಂದಲೇ ಭೀಕರವಾಗಿ ಕೊಲೆ ಆಗಿದ್ದಾಳೆ.ಮಗಳನ್ನು ಕೊಂದ ರಫಿಕ್ ಗೆ ತಕ್ಕ ಶಿಕ್ಷೆ ನೀಡಿ ನನ್ನ ಮಗಳ ಸಾವಿಗೆ ನ್ಯಾಯ ಕೊಡಿಸಿ ಅಂತ ಇಳಿ ವಯಸ್ಸಿನಲ್ಲಿ ತಂದೆ ಗೋಗರಿಯುತ್ತಿದ್ದು,ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *